ಆರ್‌ಎಸ್‌ಎಸ್ ಜಾತ್ಯತೀತ, ಸರ್ವಹಿತ ಸಂಘಟನೆ: ರಾಜಕುಮಾರ ಪಾಟೀಲ್ ತೆಲ್ಕೂರ
ಗೂಳಿಹಟ್ಟಿ ಶೇಖರ್ ಆರೋಪ ಶುದ್ಧ ಸುಳ್ಳು ಮತ್ತು ರಾಜಕೀಯ ದುರುದ್ದೇಶದ್ದಾಗಿದೆ. ಆರೆಸ್ಸೆಸ್ ಕೇಂದ್ರ ಕಚೇರಿ, ಇತರ ಯಾವುದೇ ಕಚೇರಿಗಳಲ್ಲಿ ಜಾತಿ ಕೇಳಿ ಒಳಕ್ಕೆ ಬಿಡುವ ಪದ್ಧತಿಯೇ ಇಲ್ಲ ಎಂದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ
ಕಲಬುರಗಿ(ಡಿ.09): ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಾತ್ಯತೀತ ಹಾಗೂ ಸರ್ವಹಿತ ಸಂಘಟನೆಯಾಗಿದೆ, ಇಂತಹ ಸಂಘದ ವಿಚಾರದಲ್ಲಿ ಗೂಳಿಹಟ್ಟಿ ಶೇಖರ್ ಅವರಾಡಿದ ಮಾತುಗಳು ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿ ರಾಜ್ಯ ವಕ್ತಾರರು, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೂಳಿಹಟ್ಟಿ ಶೇಖರ್ ಆರೋಪ ಶುದ್ಧ ಸುಳ್ಳು ಮತ್ತು ರಾಜಕೀಯ ದುರುದ್ದೇಶದ್ದಾಗಿದೆ. ಆರೆಸ್ಸೆಸ್ ಕೇಂದ್ರ ಕಚೇರಿ, ಇತರ ಯಾವುದೇ ಕಚೇರಿಗಳಲ್ಲಿ ಜಾತಿ ಕೇಳಿ ಒಳಕ್ಕೆ ಬಿಡುವ ಪದ್ಧತಿಯೇ ಇಲ್ಲ ಎಂದಿದ್ದಾರೆ.
ಕಲಬುರಗಿ: ಶಿಕ್ಷಕಿಯಾದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ತಾವು ಸಂಘ ಪರಿವಾರದಲ್ಲಿ ವಿದ್ಯಾರ್ಥಿ ದಿಸೆಯಿಂದ ಕಾರ್ಯ ನಿರ್ವಹಿಸಿದ್ದಾಗಿ ಹೇಳಿರುವ ಅವರು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮೆರೆಯುವ ಸಂಘದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಗೂಳಿಹಟ್ಟಿಯವರು ಒಂದೆರಡು ಬೈಠಕ್ ನಲ್ಲಿ ಭಾಗಿಯಾದರೆ ಆರ್.ಎಸ್.ಎಸ್ ಎಂತಹ ದೇಶ ಭಕ್ತ ಸಂಘಟನೆ ಎಂದು ಅವರಿಗೆ ತಿಳಿಯಲಿದೆ ಎಂದಿದ್ದಾರೆ.
ಸುಳ್ಳು ಹೇಳುವುದು, ಗಾಳಿಯಲ್ಲಿ ಗುಂಡು ಹಾರಿಸುವ ಪ್ರವೃತ್ತಿಯಿಂದ ಗೂಳಿಹಟ್ಟಿ ಸೇರಿದಂತೆ ಉಳಿದ ನಾಯಕರು ಹೊರ ಬರಬೇಕು. ಡಾ. ಅಂಬೇಡ್ಕರ್ ಅವರಿಗೆ ಕೈ ನಾಯಕರು ತೋರಿದ ಅಗೌರವ ದೇಶದ ಜನತೆಗೆ ಗೊತ್ತಿದೆ. ಅಂಬೇಡ್ಕರ್ ಓದಿದ ಶಾಲೆ, ವಾಸಿಸಿದ ಮನೆ ಸೇರಿ 5 ಸ್ಥಳಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿ ಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಬಿಜೆಪಿ ಕೇವಲ ವೋಟ್ ಗಾಗಿ ಅಲ್ಲ ದೇಶದ ಸರ್ವರ ಮತ್ತು ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಲ್ಲಿ ಕೆಲಸ ಮಾಡುತ್ತದೆ ಎಂದು ತೇಲ್ಕೂರ್ ಹೇಳಿದ್ದಾರೆ.