ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿ​ಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ಜನ ಹಿತ ಮರೆತಿದೆ. ಅಧಿ​ಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ತಾಲಿಬಾನ್‌ ಸಂಸ್ಕೃತಿ ಆರಂಭವಾಗಿದೆ: ನಳಿನ್‌ ಕುಮಾರ್‌ ಕಟೀಲ್‌ 

ಹೊಸಕೋಟೆ(ಮೇ.17): ರಾಜ್ಯದಲ್ಲಿ ಕಾಂಗ್ರೆಸ್‌ ಅಧಿ​ಕಾರಕ್ಕೆ ಬಂದ ದಿನದಿಂದ ಪಕ್ಷದ ಕಾರ್ಯಕರ್ತರು ಗೂಂಡಾ ಪ್ರವೃತ್ತಿ ಮುಂದುವರಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ತಾಲೂಕಿನ ನಂದಗುಡಿ ಹೋಬಳಿ ಡಿ.ಶೆಟ್ಟಹಳ್ಳಿಯಲ್ಲಿ ಕಾಂಗ್ರೆಸ್‌ ವಿಜಯೋತ್ಸವ ವೇಳೆ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಅವರ ಮನೆಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿ​ಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ಜನ ಹಿತ ಮರೆತಿದೆ. ಅಧಿ​ಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ತಾಲಿಬಾನ್‌ ಸಂಸ್ಕೃತಿ ಆರಂಭವಾಗಿದೆ. ಪೊಲೀಸ್‌ ಇಲಾಖೆ ಇದನ್ನು ನಿಯಂತ್ರಣ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ವಿಜಯೋತ್ಸವ ವೇಳೆ ಗಲಾಟೆ: ಬಿಜೆಪಿ ಕಾರ‍್ಯಕರ್ತನ ಕೊಲೆ!

6 ಲಕ್ಷ ನೆರವು: 

ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತ ಕೃಷ್ಣಪ್ಪ ಅವರ ಕುಟುಂಬಸ್ಥರನ್ನು ಭೇಟಿಯಾದ ಬಿಜೆಪಿ ಮುಖಂಡರಾದ ಕೆ.ಎಸ್‌.ಈಶ್ವರಪ್ಪ, ಅಶ್ವತ್ಥನಾರಾಯಣ, ಬೈರತಿ ಬಸವರಾಜು, ನಾರಾಯಣಸ್ವಾಮಿ ಹಾಗೂ ಎಂ.ಟಿ.ಬಿ.ನಾಗರಾಜ್‌ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಡಿ.ಶೆಟ್ಟಿಹಳ್ಳಿಯಲ್ಲಿರುವ ಕೃಷ್ಣಪ್ಪ ಅವರ ಸ್ವಗೃಹಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪಕ್ಷದಿಂದ .5 ಲಕ್ಷ, ಎಂ.ಟಿ.ಬಿ. ನಾಗರಾಜ್‌ ವೈಯಕ್ತಿಕವಾಗಿ 1 ಲಕ್ಷ ಆರ್ಥಿಕ ನೆರವು ವಿತರಿಸಿದರು.