ಒಂದು ಕಾಲದಲ್ಲಿ ಕಾಂಗ್ರೆಸ್‌ ಅಂದ್ರೆ ಇಂದಿರಾ, ಇಂದಿರಾ ಅಂದ್ರೆ ಭಾರತ, ಭಾರತ ಅಂದ್ರೆ ಇಂದಿರಾ ಎಂದು ಹೇಳಲಾಗುತ್ತಿತ್ತು. ಈಗ ವಿರೋಧ ಪಕ್ಷದಲ್ಲಿ ಕೂರಲೂ ನಾಲಾಯಕ್‌ ಎನ್ನುವ ಸ್ಥಿತಿ ಕಾಂಗ್ರೆ​ಸ್‌ಗೆ ಬಂದಿದೆ.

ಕಲಬುರಗಿ (ಮೇ.17): ಒಂದು ಕಾಲದಲ್ಲಿ ಕಾಂಗ್ರೆಸ್‌ (Congress) ಅಂದ್ರೆ ಇಂದಿರಾ, ಇಂದಿರಾ ಅಂದ್ರೆ ಭಾರತ, ಭಾರತ (India) ಅಂದ್ರೆ ಇಂದಿರಾ ಎಂದು ಹೇಳಲಾಗುತ್ತಿತ್ತು. ಈಗ ವಿರೋಧ ಪಕ್ಷದಲ್ಲಿ ಕೂರಲೂ ನಾಲಾಯಕ್‌ ಎನ್ನುವ ಸ್ಥಿತಿ ಕಾಂಗ್ರೆ​ಸ್‌ಗೆ ಬಂದಿದೆ. ಅದೇ ರೀತಿ ಕಲ​ಬು​ರಗಿ (Kalaburagi) ಕೂಡ ಕಾಂಗ್ರೆಸ್‌ ಮುಕ್ತವಾಗ​ಬೇಕು, ಇದ​ಕ್ಕಾಗಿ ಮೊದಲು ಪ್ರಿಯಾಂಕ್‌ ಖರ್ಗೆ (Priyank Kharge) ಅವರನ್ನು ಮನೆಗೆ ಕಳುಹಿಸಬೇಕು ಎಂದು ಬಿಜೆಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ಹೇಳಿ​ದರು.

ನಗ​ರ​ದಲ್ಲಿ ಸೋಮವಾರ ನಡೆದ ಬಿಜೆಪಿ (BJP) ಕಚೇರಿ ಕಟ್ಟಡಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿದ ನಂತರ ಜಿಲ್ಲಾ-ಮಂಡಲ ಪ್ರಕೋಷ್ಠಗಳ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಖರ್ಗೆ (Dr Mallikarjun Kharge) ಹಲವು ಬಾರಿ ಮಂತ್ರಿ ಆಗಿದ್ದವರು. ಕೇಂದ್ರ ಸಚಿವರಾಗಿ ಕೆಲಸ ಮಾಡಿದವರು, ಹೀಗಿದ್ದರೂ ಅವರು ಪ್ರತಿನಿಧಿಸುವ ಈ ಭಾಗ ಇನ್ನೂ ಮುಂದುವರಿದಿಲ್ಲ ಯಾಕೆ? ಅವರು ಕಾಳಜಿ ವಹಿಸಿದ್ದರೆ ಈ ಭಾಗ ಯಾವತ್ತೂ ಹಿಂದು​ಳಿ​ಯು​ತ್ತಿ​ರ​ಲಿ​ಲ್ಲ. ಕಲಬುರಗಿ ಬಿಜೆಪಿ ಕಚೇರಿ ಬಿಜೆಪಿ ಮೂಲಕ ಕಾರ್ಯಕರ್ತರು ಇನ್ನೂ ಒಗ್ಗಟ್ಟಾಗಿ ಕೆಲಸ ಮಾಡಬೇಕು.

Free Hindu Temples: ಕಾಂಗ್ರೆಸ್‌ನವರು ಧಮ್‌ ಇದ್ದರೆ ಹಿಂದು ಮತಗಳು ಬೇಡವೆಂದು ಹೇಳಲಿ: ಕಟೀಲ್‌!

ಜಿಲ್ಲೆಯ 9 ಸ್ಥಾನದಲ್ಲಿ ಕಮಲ ಅರಳುವಂತೆ ಮಾಡಬೇಕು. ಕಾಂಗ್ರೆಸ್‌ ಮುಕ್ತ ಕಲ​ಬು​ರ​ಗಿ​ಗಾಗಿ ಮೊದಲು ಪ್ರಿಯಾಂಕ್‌ ಖರ್ಗೆ ಅವರನ್ನು ಮನೆಗೆ ಕಳುಹಿಸಬೇಕು ಎಂದರು. ಆಗ ಸೇರಿದ್ದ ಜನ ಅಜಯ್‌ ಸಿಂಗ್‌ರನ್ನೂ ಮನೆಗೆ ಕಳು​ಹಿಸಿ ಎಂದು ಕೂಗಿ​ದ​ರು. ಭ್ರಷ್ಟಾಚಾರ, ಪರಿವಾರ ರಾಜಕೀಯ, ಭಯೋತ್ಪಾದನೆ ಕಾಂಗ್ರೆಸ್‌ ಕೊಡುಗೆ. ಕಾಂಗ್ರೆಸ್‌ನಿಂದ ಪ್ರಧಾನಿಯಾದವರೆಲ್ಲ ಹಗರಣಗಳನ್ನು ಮಾಡಿದ್ದಾರೆ. ವಾಜಪೇಯಿ ಮತ್ತು ಮೋದಿ ಸರ್ಕಾರದಲ್ಲಿ ಒಂದೇ ಒಂದು ಹಗರಣ ಆಗಿಲ್ಲ. ಬಿಜೆಪಿಯದ್ದು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನಿಲುವು, ಆದರೆ ಕಾಂಗ್ರೆಸ್‌ ಪಕ್ಷದಲ್ಲಿ ಕೇವಲ ಗಾಂಧಿ ಪರಿವಾರದ ವಿಕಾಸ್‌ ಆಗಿದೆ ಎಂದರು.

ಸಿದ್ರಾಮಣ್ಣನಷ್ಟು ಭ್ರಷ್ಟಾಚಾರಿ ಈ ರಾಜ್ಯದಲ್ಲಿ ಬೇರಿಲ್ಲ: ‘ಸಿದ್ರಾಮಣ್ಣನಷ್ಟು (Siddaramaiah) ಭ್ರಷ್ಟಾಚಾರಿ ಈ ರಾಜ್ಯದಲ್ಲಿ ಬೇರೆ ಯಾರೂ ಇರಲಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಪಾದನೆ ಮಾಡಿದ್ದಾರೆ. ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅರ್ಕಾವತಿ ಮತ್ತು ರೀಡು ಕುರಿತ ಕೆಂಪಣ್ಣ ಆಯೋಗದ ವರದಿಯನ್ನು ಹೊರಹಾಕಿದರೆ ಸಿದ್ರಾಮಣ್ಣ ಶಾಶ್ವತವಾಗಿ ಜೈಲಲ್ಲಿ ಇರುತ್ತಾರೆ. 

ಅದನ್ನು ಹೊರಕ್ಕೆ ಹಾಕುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ ಎಂದರು. ಹಾಸಿಗೆ ಹಗರಣ, ದಿಂಬಿನ ಹಗರಣ, ಹಾಸ್ಟೆಲ್ ಹಗರಣ, ಪಿಡಬ್ಲ್ಯುಡಿ ಹಗರಣ, ಬೋರ್‌ವೆಲ್ ಹಗರಣ, ಮೆಡಿಕಲ್ ಹಗರಣ ಸೇರಿದಂತೆ ಹತ್ತು ಹಲವು ಹಗರಣಗಳು ನಡೆದಿದ್ದು ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ. ಗಣಪತಿ ಆತ್ಮಹತ್ಯೆ ಆಗಿ ಏಳು ತಿಂಗಳ ಬಳಿಕ ಹಾಗೂ ಕೋರ್ಚ್‌ ಸೂಚಿಸಿದ್ದರಿಂದ ಸಚಿವ ಜಾಜ್‌ರ್‍ ರಾಜೀನಾಮೆ ಕೊಟ್ಟರು. ಯಾವುದೇ ಹಗರಣಗಳ ತನಿಖೆಗೆ ಸಿದ್ರಾಮಣ್ಣ ಸರಕಾರ ಮುಂದಾಗಲಿಲ್ಲ ಎಂದು ಟೀಕಿಸಿದರು. ಅಧಿಕಾರವನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡಬೇಡಿ. ಇದೊಂದು ಈಶ್ವರೀಯ ಕಾರ್ಯ. 

Karnataka Politics: ಹಣ ಕೊಟ್ಟು ಸಚಿವರಾಗುವ ಸ್ಥಿತಿ ನಮ್ಮ ಪಕ್ಷದಲ್ಲಿಲ್ಲ: ಸಚಿವ ಸುನೀಲ್‌

ಕಾಂಗ್ರೆಸ್‌ನಲ್ಲಿ ಒಂದು ಕುಟುಂಬದ ವ್ಯಕ್ತಿಗಳಿಗೆ ಜೈಕಾರ ಕೂಗಲಾಗುತ್ತದೆ. ಆದರೆ, ಕೌಟುಂಬಿಕವಾಗಿ ಇಲ್ಲದ ಬಿಜೆಪಿ ಬೆಳೆಯುತ್ತಾ ಸಾಗಿದೆ. ಜಗತ್ತಿನ ಅತಿ ದೊಡ್ಡ ಪಕ್ಷವಾಗಿದೆ. ಒಂದೆಡೆ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣವಾಗುತ್ತಿದೆ. ಇದೀಗ ಮೋದಿ ಯುಗ ಪ್ರಾರಂಭವಾಗಿದೆ ಎಂದರು. ಕಾಂಗ್ರೆಸ್‌ಗೆ ರಾಜ್ಯ ಪದಾಧಿಕಾರಿಗಳ ಘೋಷಣೆಗೇ ಎರಡು ವರ್ಷ ಬೇಕಾಯಿತು. ಅದು ರಾಜ್ಯದಲ್ಲಿ ಸತ್ತು ಹೋಗಿದೆ. ಒಂದು ಪಕ್ಷ ನಡೆಸಲು ಅಸಾಧ್ಯವಾದ ಮುಖಂಡರಿಗೆ ಮುಂದಿನ ದಿನಗಳಲ್ಲಿ ಸರಕಾರ ನಡೆಸಲು ಸಾಧ್ಯವೇ? ಕಾಂಗ್ರೆಸ್‌ ಐಸಿಯು ಒಳಗಿದೆ. ಚುನಾವಣೆಗೆ ಮೊದಲು ಅದು ಸತ್ತು ಹೋಗಲಿದೆ. ಕಾಂಗ್ರೆಸ್‌ ಪಕ್ಷದ ಒಳಜಗಳದಿಂದ ಬೂತ್‌ಗೆ ಒಬ್ಬ ಪ್ರಧಾನ ಕಾರ್ಯದರ್ಶಿ ನೇಮಕ ಆದರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದರು.