Asianet Suvarna News Asianet Suvarna News

ಲೋಕಸಭಾ ಚುನಾವಣೆ 2024 ಫಲಿತಾಂಶ: ಕಾಂಗ್ರೆಸ್‌ ಕನಸು ಭಗ್ನ, ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ ವಿಜಯೇಂದ್ರ

ಗೆಲುವಿಗೆ ಕಾರಣವಾದ ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ಜನರಿಗೆ ನಾವು ಆಭಾರಿಯಾಗಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಎಷ್ಟು ಸ್ಥಾನ ಗೆಲ್ತೇವೆ ಅಂದಿದ್ರು?. ಗ್ಯಾರಂಟಿ ಆರ್ಭಟದ ನಡುವೆ ಈ ಸಂಖ್ಯೆ ನಮಗೆ ತೃಪ್ತಿ ಇದೆ ಎಂದ ಬಿ.ವೈ. ವಿಜಯೇಂದ್ರ 

BJP State President BY Vijayendra React to Lok Sabha Elections 2024 grg
Author
First Published Jun 4, 2024, 4:11 PM IST

ಬೆಂಗಳೂರು(ಜೂ.4): ಕೇಂದ್ರದಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಒಂದಂತೂ ಸ್ಪಷ್ಟವಾಗಿದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸೇತರ ಪಕ್ಷ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವುದು ಇತಿಹಾಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಜೆಡಿಎಸ್ ಎರಡು ಕ್ಷೇತ್ರದಲ್ಲಿ ಗೆದ್ದಿದೆ. ಕಾಂಗ್ರೆಸ್ ಇಪ್ಪತ್ತು ಕ್ಷೇತ್ರಕ್ಕೂ ಹೆಚ್ಚು ಗೆಲ್ತೇವೆ ಎಂದು ಕನಸು ಕಾಣುತ್ತಿದ್ರು. ಆ ಕನಸು ಭಗ್ನವಾಗಿದೆ ಎಂದು ಟೀಕಿಸಿದ್ದಾರೆ. 

Lok Sabha Election 2024 Result: ಸಚಿವರ ಮಕ್ಕಳಿಗೆ ಸೋಲು, ಗೆಲುವಿನ ರುಚಿ ತೋರಿಸಿದ ಮತದಾರರು..!

ಈ ಗೆಲುವಿಗೆ ಕಾರಣವಾದ ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ಜನರಿಗೆ ನಾವು ಆಭಾರಿಯಾಗಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಎಷ್ಟು ಸ್ಥಾನ ಗೆಲ್ತೇವೆ ಅಂದಿದ್ರು?. ಗ್ಯಾರಂಟಿ ಆರ್ಭಟದ ನಡುವೆ ಈ ಸಂಖ್ಯೆ ನಮಗೆ ತೃಪ್ತಿ ಇದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios