ಮಾಜಿ ಸಚಿವರ ಜತೆ ಇಂದು ಬಿವೈವಿ ಭೋಜನಕೂಟ: ವರಿಷ್ಠರಿಗೆ ಭಿನ್ನರು ದೂರು ನೀಡಿದ ಬೆನ್ನಲ್ಲೇ ಸಭೆ

ಯತ್ನಾಳ ಬಣದ ಮುಖಂಡರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಈ ಔತಣಕೂಟ ಆಯೋಜಿಸಿರುವುದರಿಂದ ಸಹಜವಾಗಿಯೇ ಕುತೂಹಲ ಹುಟ್ಟು ಹಾಕಿದೆ.

BJP State President BY Vijayendra Hold Dinner Meeting With Former Ministers and MLA's on Jan 10th

ಬೆಂಗಳೂರು(ಜ.10):  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಮಾಜಿ ಸಚಿವರು ಹಾಗೂ ಶಾಸಕರಿಗೆ ಶುಕ್ರವಾರ ಭೋಜನ ಸಭೆ ಆಯೋಜಿಸಿದ್ದಾರೆ.

ಪಕ್ಷದ ಸಂಘಟನೆ ಹಾಗೂ ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗಳನ್ನು ಎದುರಿಸಲು ಸಜ್ಜಾಗುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆಯೇ ಹೊರತು ಯಾವುದೇ ಶಕ್ತಿ ಪ್ರದರ್ಶನದ ಉದ್ದೇಶ ಇಲ್ಲ ಎಂದು ವಿಜಯೇಂದ್ರ ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ವಿಜಯೇಂದ್ರ ವಿರುದ್ಧ ಅಮಿತ್‌ ಶಾಗೆ ಯತ್ನಾಳ್‌ ಟೀಂ ಪ್ರತಿದೂರು

ಯತ್ನಾಳ ಬಣದ ಮುಖಂಡರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಈ ಔತಣಕೂಟ ಆಯೋಜಿಸಿರುವುದರಿಂದ ಸಹಜವಾಗಿಯೇ ಕುತೂಹಲ ಹುಟ್ಟು ಹಾಕಿದೆ.

ಪಕ್ಷದ ಎಲ್ಲ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಅಭ್ಯರ್ಥಿಗಳಿಗೂ ಆಹ್ವಾನ ನೀಡಲಾಗಿದೆ. ಶುಕ್ರವಾರ ಮಧ್ಯಾಹ್ನ ನಗರದ ಹೋಟೆಲ್‌ವೊಂದರಲ್ಲಿ ಭೋಜನಕೂಟ ನಡೆಯಲಿದೆ. ಯಾರೆಲ್ಲ ಆಗಮಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಕಳೆದ ಹಲವು ತಿಂಗಳುಗಳಿಂದ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯನಾಯ್ಡು, ಬಿ.ಸಿ.ಪಾಟೀಲ್ ಮೊದಲಾದವರು ವಿಜಯೇಂದ್ರ ಪರ ಹಾಗೂ ಯತ್ನಾಳ ಬಣದ ವಿರುದ್ಧ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದರು.

100 ಕ್ಷೇತ್ರ ಹೊಣೆಗೆ ಬಿಜೆಪಿ ಭಿನ್ನರ ಬೇಡಿಕೆ: ವಿಜಯೇಂದ್ರ ಬಲಹೀನಕ್ಕೆ ಭಾರೀ ಪ್ಲ್ಯಾನ್‌!

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೂರು ಕ್ಷೇತ್ರಗಳ ಸಂಪೂರ್ಣ ಜವಾಬ್ದಾರಿ ತಮಗೆ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಡಲು ಚಿಂತನೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೆರವಾಗುತ್ತೇವೆ ಎಂಬ ಭರವಸೆ ನೀಡುವ ಉದ್ದೇಶ ಒಂದು ಕಡೆಯಾದರೆ, ವಿಜಯೇಂದ್ರ ಮುಖ್ಯಮಂತ್ರಿ ಗಾದಿಗೆ ಬರದಂತೆ ತಡೆಯ ಬೇಕೆಂಬುದು ಇದರ ಹಿಂದಿನ 2ನೇ ಉದ್ದೇಶವೆನ್ನಲಾಗಿದೆ.

ನೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ತಮಗೆ ಬಿಡಬೇಕು. ಜತೆಗೆ ಆ ಕ್ಷೇತ್ರಗಳ ಖರ್ಚು ವೆಚ್ಚವನ್ನೂ ತಾವೇ ಭರಿಸುತ್ತೇವೆ ಎಂಬ ಭಾರೀ ಬೇಡಿಕೆ ಮುಂದಿಡುವ ಯೋಚನೆಯಿದೆ. ಆದರೆ, ಇದಕ್ಕೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡುವ ಬಗ್ಗೆ ಅನುಮಾನವಿದೆ. 

ನಾಲ್ಕು ದಿನಗಳ ಭೇಟಿಗಾಗಿ ದೆಹಲಿಗೆ ತೆರಳಿದ್ದ ಯತ್ನಾಳ ಬಣದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತಿತರರು ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಡೆಸಿದ ಉಪಾಹಾರ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ. 

ಹೈಕಮಾಂಡ್‌ಗೆ ದೂರು ನೀಡಲ್ಲ, ನಾ ಚಾಡಿಕೋರನಲ್ಲ: ಯತ್ನಾಳ್

ಬಿವೈವಿ ಬಲಹೀನಕ್ಕೆ ಯತ್ನ: 

ವಿಜಯೇಂದ್ರ ಅವರ ಬದಲಾವಣೆ ಸದ್ಯಕ್ಕೆ ಕಷ್ಟ ಎಂಬ ನಿಲುವಿಗೆ ಬಂದಿರುವ ಬಿಜೆಪಿಯ ಯತ್ನಾಳ ಬಣದ ಮುಖಂ ಡರು ಮುಂದಿನ ಚುನಾವಣೆ ಹೊತ್ತಿಗೆ ವಿಜಯೇಂದ್ರರನ್ನು ಬಲಹೀನಗೊಳಿಸಿ, ತಾವು ಮೇಲುಗೈ ಸಾಧಿಸಲು ತಂತ್ರ ರೂಪಿಸುತ್ತಿದ್ದಾರೆ. ಆ ತಂತ್ರದ ಭಾಗವಾಗಿ ಕ್ಷೇತ್ರಗಳ ಜವಾಬ್ದಾರಿ ಕೇಳಲು ಮುಂದಾಗಿದ್ದಾರೆ. 

ಪ್ರಸಕ್ತ ಬಿಜೆಪಿಯಲ್ಲಿನ ಭಿನ್ನಮತ, ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಪ್ರಸ್ತಾಪಿಸಿ ಮಧ್ಯಸ್ಥಿಕೆ ವಹಿಸುವಂತೆ ಕುಮಾರಸ್ವಾಮಿ ಅವರಲ್ಲೂ ಮನವಿ ಮಾಡಿದ್ದಾರೆ. ಇದಕ್ಕೆ ತಾತ್ವಿಕವಾಗಿ ಒಪ್ಪಿ ಕೊಂಡಿರುವ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕ ಅಮಿತ್ ಶಾರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ. 

Latest Videos
Follow Us:
Download App:
  • android
  • ios