ಆಡಳಿತವಿದ್ದ ರಾಜ್ಯಗಳಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಏಕೆ ನೀಡಿಲ್ಲ?: ನಟಿ ತಾರಾ

ಕಾಂಗ್ರೆಸ್‌ ಸರ್ಕಾರವಿದ್ದಾಗ ವಿಶ್ವಬ್ಯಾಂಕ್‌ನಿಂದ ಸಾಕಷ್ಟು ಸಾಲ ಮಾಡಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್‌ನವರು ಮಾಡಿರುವ ಸಾಲವನ್ನು ತೀರಿಸಬೇಕಾಯಿತು. ವಿಶ್ವಬ್ಯಾಂಕ್‌ನವರು ಭಾರತಕ್ಕೆ ಸಾಲವನ್ನು ನೀಡಲು ಹಿಂದೇಟು ಹಾಕುತ್ತಿತ್ತು. ಈಗ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ವಿಶ್ವಬ್ಯಾಂಕ್‌ನವರು ಸಾಲವನ್ನು ನೀಡಲು ಮುಂದಾಗಿದ್ದಾರೆ ಇದು ಬಿಜೆಪಿಯ ಗ್ಯಾರಂಟಿ: ತಾರಾ 

BJP Star Campaigner Tara Slams Congress grg

ಮುಧೋಳ(ಮೇ.08): ಈಗಾಗಲೇ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುತ್ತಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ನೀಡಿಲ್ಲ ಯಾಕೆ? ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡಲು ಕಾಂಗ್ರೆಸ್‌ ಹೊರಟಿದೆ. ಅದಕ್ಕೆ ತಾವು ಮೋಸ ಹೋಗಬಾರದು ಎಂದು ಚಿತ್ರನಟಿ, ಬಿಜೆಪಿ ಸ್ಟಾರ್‌ ಪ್ರಚಾರಕಿ ತಾರಾ ಹೇಳಿದರು.

ಭಾನುವಾರ ಬೆಳಿಗ್ಗೆ ಸಚಿವ ಗೋವಿಂದ ಕಾರಜೋಳ ಅವರ ಮುಧೋಳದ ಸ್ವಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರವಿದ್ದಾಗ ವಿಶ್ವಬ್ಯಾಂಕ್‌ನಿಂದ ಸಾಕಷ್ಟು ಸಾಲ ಮಾಡಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್‌ನವರು ಮಾಡಿರುವ ಸಾಲವನ್ನು ತೀರಿಸಬೇಕಾಯಿತು. ವಿಶ್ವಬ್ಯಾಂಕ್‌ನವರು ಭಾರತಕ್ಕೆ ಸಾಲವನ್ನು ನೀಡಲು ಹಿಂದೇಟು ಹಾಕುತ್ತಿತ್ತು. ಈಗ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ವಿಶ್ವಬ್ಯಾಂಕ್‌ನವರು ಸಾಲವನ್ನು ನೀಡಲು ಮುಂದಾಗಿದ್ದಾರೆ ಇದು ಬಿಜೆಪಿಯ ಗ್ಯಾರಂಟಿ ಎಂದು ಹೇಳಿದರು.

ಭೂಮಿ ಕಸಿದ ಬಿಜೆಪಿಗೆ ತಕ್ಕಪಾಠ ಕಲಿಸಿ: ಎಸ್‌.ಆರ್‌.ಪಾಟೀಲ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದನಂತರ ಬಜರಂಗದಳವನ್ನು ನಿಷೇಧಿಸುವ ಕುರಿತು ಹೇಳಿರುವುದು ಸರಿಯಾದುದಲ್ಲ. ಕಾರಣ ಭಾರತ ಹಿಂದುಗಳ ರಾಷ್ಟ್ರ, ಹಿಂದುಸ್ಥಾನದಲ್ಲಿ ಹಿಂದುಗಳ ದೇವಾಲಯಗಳನ್ನು, ಹಿಂದುಗಳನ್ನು ರಕ್ಷಿಸುವಂತಹ ಸಂಘಟನೆಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಹಿಂದುಪರ ಸಂಘಟನೆಗಳು ಈ ಚುನಾವಣೆಯಲ್ಲಿ ತಮಗೆ ತಕ್ಕಪಾಠ ಕಲಿಸಲಿದ್ದಾರೆ. ದೇಶವಿರೋಧಿ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ನಿಷೇಧಿಸಲು ತಮ್ಮ ಬೆಂಬಲವಿದೆ. ಕಾಂಗ್ರೆಸ್‌ ಸೋಲಿನ ಬೀತಿಯಲ್ಲಿ ಇಂತಹವುಗಳನ್ನು ಹೇಳುತ್ತಿದ್ದಾರೆಂದು ಹೇಳಿದರು.

ಬಿಜೆಪಿ ಹೈಕಮಾಂಡ್‌ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸಬರಿಗೆ ಮತ್ತು ಯುವಕರಿಗೆ ಹೆಚ್ಚಿನ ಅವಕಾಶ ನೀಡಿದೆ. ಇದನ್ನು ಗಮನಿಸಿದರೆ ಬಿಜೆಪಿ ಕುಟುಂಬ ರಾಜಕೀಯ ಮಾಡುವುದಿಲ್ಲ. ಎಲ್ಲರಿಗೂ ಸೂಕ್ತ ಸಮಯ ಮತ್ತು ಸಂದರ್ಭದಲ್ಲಿ ಅವಕಾಶ ನೀಡುತ್ತಿದೆ. ಅಳಿದು ತೂಗಿ ಮೀಸಲಾತಿ ವರ್ಗೀಕರಣ ಮಾಡಿದೆ. ಬಿ.ಎಸ್‌.ಯಡಿಯೂರಪ್ಪನವರು ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದರು.

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮುರುಗೇಶ ನಿರಾಣಿ

ನಾನು ಈ ಹಿಂದೆ ಮುಧೋಳಕ್ಕೆ ಬಂದಾಗ ಸರಿಯಾದ ರಸ್ತೆಗಳು ಇರಲಿಲ್ಲ. ಈಗ ಕ್ಷೇತ್ರದ ಯಾವುದೇ ಭಾಗಕ್ಕೂ ಹೋಗಲಿ ಎಲ್ಲ ರಸ್ತೆಗಳು ಡಾಂಬರೀಕಣಗೊಂಡಿವೆ. ಇದಕ್ಕೆ ಮೂಲಕ ಕಾರಣ ಸಚಿವ ಗೋವಿಂದ ಕಾರಜೋಳ ಅವರು. ಅವರು ವಿವಿಧ ಇಲಾಖೆಗಳ ಸಚಿವರಾಗಿ, ಉಪ-ಮುಖ್ಯಮಂತ್ರಿಗಳಾಗಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಮತಹಾಕುವಂತೆ ತಾವು ತನ್ಮೂಲಕ ವಿನಂತಿಸುವುದಾಗಿ ಮನವಿ ಮಾಡಿದರು.

ಈ ವೇಳೆ ರತ್ನಕ್ಕ ರಾಮಣ್ಣ ತಳೇವಾಡ, ಡಾ.ಪುಷ್ಪಾ ಅರುಣ ಕಾರಜೋಳ, ಡಾ.ನಿವೇದಿತಾ ಗೋಪಾಲ ಕಾರಜೋಳ, ಡಾ.ಅಶ್ವಿನಿ ಉದಯ ಕಾರಜೋಳ, ಶ್ರೀದೇವಿ ಉಮೇಶ ಕಾರಜೋಳ ಹಾಗೂ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

Latest Videos
Follow Us:
Download App:
  • android
  • ios