Asianet Suvarna News Asianet Suvarna News

ಭೂಮಿ ಕಸಿದ ಬಿಜೆಪಿಗೆ ತಕ್ಕಪಾಠ ಕಲಿಸಿ: ಎಸ್‌.ಆರ್‌.ಪಾಟೀಲ

ರೈತರಾದ ನಾವು ಭೂಮಿಯನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ. ಅದನ್ನು ಕಳೆದುಕೊಂಡರೆ ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತೆ ನಮ್ಮ ಸರಕಾರ ಬಂದರೆ ಕೇವಲ ಮೂರ್ನಾಲ್ಕು ತಿಂಗಳಲ್ಲಿ ಜಮೀನು ಬಿಡಿಸಿ ಕೊಡುತ್ತೇವೆ. ಜಮೀನು ಕಸಿದುಕೊಳ್ಳುವ ಬಿಜೆಪಿ ಸರಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರೈತರೆಲ್ಲರೂ ಒಗ್ಗೂಡಿ ರೈತರ ಅಭಿವೃದ್ಧಿ ಪರ ಕೆಲಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಬೇಕೆಂದ ಎಸ್‌.ಆರ್‌. ಪಾಟೀಲ 

Congress Leader SR Patil Slams Minister Murugesh Nirani grg
Author
First Published May 7, 2023, 10:35 PM IST

ಕೆರೂರ(ಮೇ.07): ನಾನೂಬ್ಬ ರೈತನ ಮಗನಾಗಿದ್ದು, ಬದುಕಿಗೆ ಆಸರೆಯಾದ ಭೂಮಿಯನ್ನು ಕಳೆದುಕೊಂಡವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಬಂಡವಾಳ ಶಾಯಿ ಧೋರಣೆ ಹೊಂದಿರುವ ಇಂದಿನ ಸಚಿವ ನಿರಾಣಿಗೆ ತಿಳಿಯುವುದಿಲ್ಲ ಎಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ನಿರಾಣಿ ವಿರುದ್ಧ ಕಿಡಿಕಾರಿದರು.

ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಶಾಸಕ ಜೆ.ಟಿ.ಪಾಟೀಲ ಪರ ಮತಯಾಚಿಸಿ ಮಾತನಾಡಿದ ಅವರು, ರೈತರಾದ ನಾವು ಭೂಮಿಯನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ. ಅದನ್ನು ಕಳೆದುಕೊಂಡರೆ ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತೆ ನಮ್ಮ ಸರಕಾರ ಬಂದರೆ ಕೇವಲ ಮೂರ್ನಾಲ್ಕು ತಿಂಗಳಲ್ಲಿ ಜಮೀನು ಬಿಡಿಸಿ ಕೊಡುತ್ತೇವೆ. ಜಮೀನು ಕಸಿದುಕೊಳ್ಳುವ ಬಿಜೆಪಿ ಸರಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರೈತರೆಲ್ಲರೂ ಒಗ್ಗೂಡಿ ರೈತರ ಅಭಿವೃದ್ಧಿ ಪರ ಕೆಲಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಬೇಕೆಂದರು.

ಬಾಗಲಕೋಟೆ ‘ಕಮಲ’ ಕೋಟೆ ಭೇದಿಸಲು ‘ಕೈ’ ರಣತಂತ್ರ

ಗ್ರಾಮದ ರೈತ ಮುಖಂಡ ಶಂಕ್ರಪ್ಪ ಶಾಸನ್ನವರ ಮಾತನಾಡಿ, ವಿಮಾನ ನಿಲ್ದಾಣದ ಉದ್ದೇಶಕ್ಕಾಗಿ ಹಲಕುರ್ಕಿ ಗ್ರಾಮದ ನಮ್ಮ ಫಲವತ್ತದ ಭೂಮಿಯನ್ನು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸ್ವಾಧೀನ ಪಡಿಸಿಕೊಂಡು, ಬೀದಿಪಾಲು ಮಾಡಲು ಹೊರಟಿದ್ದಾರೆ. ಇದನ್ನು ವಿರೋಧಿ​ಸಿ ನಾವು 7 ತಿಂಗಳುಗಳ ಕಾಲ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ, ಡಿ.ಸಿ.ಕಚೇರಿ ಮುಂದೆ ಪ್ರತಿಭಟನೆ ಮಾಡುವಾಗಲೂ ನಮ್ಮ ಸಮಸ್ಯಗೆ ಸ್ಪಂದಿಸದ ಮುರಗೇಶ ನಿರಾಣಿಯವರನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು

ಮಾಜಿ ಶಾಸಕ ಜೆ.ಟಿ ಪಾಟೀಲ ಮಾತನಾಡಿ, ನಾನು ಅಧಿ​ಕಾರದಲ್ಲಿದ್ದಾಗ ಹಲಕುರ್ಕಿ ಗ್ರಾಮದಲ್ಲಿ ಸಾಕಷ್ಟುಜನಪರ ಕೆಲಸ ಮಾಡಿದ್ದೇನೆ. ಈಗ ನಿಮ್ಮೆಲ್ಲರ ಬೇಡಿಕೆಯಂತೆ ಕಾಂಗ್ರೆಸ್‌ ಸರಕಾರ ಬಂದ ಕೂಡಲೇ ಹಲಕುರ್ಕಿ ಗ್ರಾಮದ ಭೂಸ್ವಾಧೀನ ವಿಚಾರವನ್ನು ವಿಧಾನಸಭೆ ಅ​ವೇಧಿಶನದಲ್ಲಿ ಇಟ್ಟು ರದ್ದುಪಡಿಸುವುದಾಗಿ ರೈತರಿಗೆ ಬರವಸೆ ನೀಡಿದರು.

ಯತ್ನಾಳರೇ ಧಮ್‌ ಇದ್ರೆ ನನ್ನ ಮೇಲೆ ಗುಂಡು ಹಾಕಿ: ಅಸಾದುದ್ದಿನ್‌ ಒವೈಸಿ ಸವಾಲು

ಕಾರ್ಯಕ್ರಮಕ್ಕೊ ಮುಂಚೆ ಮಹರ್ಷಿ ವಾಲ್ಮೀಕಿ ಹಾಗೂ ಸಂಗೊಳ್ಳಿ ರಾಯಣ್ಣರ ಭಾವ ಚಿತ್ರಕ್ಕೆ ಜೆ.ಟಿ.ಪಾಟೀಲ ಪುಷ್ಪಾರ್ಪಚನೆ ಮಾಡಿ ಭರ್ಜರಿ ರೋಡ್‌ ಶೋ ಮೂಲಕ ಜೆ ಟಿ ಪಾಟೀಲ ಮತಯಾಚಿಸಿದರು.

ಮುಖಂಡರಾದ ಬಸವಫ್ರಭು ಸರನಾಡಗೌಡ,ಸುಭಾಸ್‌ ಮೆಳ್ಳಿ,ಮಹೇಶ ನಾಡಗೌಡ, ಗಿರೀಶ ನಾಡಗೌಡ, ರಾಮಚಂದ್ರ ಯಡಹಳ್ಳಿ, ಧರ್ಮಣ್ಣ ಭಗವತಿ, ರುದ್ರಗೌಡ ಪಾಟೀಲ, ಶಿವಪ್ಪ ಉಂಡಿ, ಯಂಕಣ್ಣ ದಳವಾಯಿ,ಮಾರುತಿ ಹೊಸಮನಿ,ಶಂಕ್ರಪ್ಪ ಪೂಜಾರ,ಉಮೇಶ ಬೆನ್ನಪ್ಪನವರ,ಸೋಮವ್ವ ಹಿರೇತಳವಾರ,ಅಶೋಕ ಆಡಗಲ್‌,ನೀಲಪ್ಪ ಕೊಟ್ಟಿ ಮೊದಲದವರಿದ್ದರು.

Follow Us:
Download App:
  • android
  • ios