Asianet Suvarna News Asianet Suvarna News

120 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಹೆಗ್ಗುರಿ : ಈಶ್ವರಪ್ಪನವರಿಗೆ ಋಣಿ ಎಂದ ನಿರಾಣಿ

 • ಈಶ್ವರಪ್ಪನವರ ಅಭಿಮಾನಕ್ಕೆ ನಾನು  ಋಣಿ ಎಂದ ಸಚಿವ ಮುರುಗೇಶ್ ನಿರಾಣಿ
 •  ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದು ನಮ್ಮ ಮುಂದಿನ ಗುರಿ
 •   2023ರ ಚುನಾವಣೆಯಲ್ಲಿ 120 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಹೆಗ್ಗುರಿ - 
BJP Should win 120 Seats in Assembly election 2023 says Minister Murugesh Nirani snr
Author
Bengaluru, First Published Nov 29, 2021, 3:08 PM IST
 • Facebook
 • Twitter
 • Whatsapp

ಬಾಗಲಕೋಟೆ (ನ.29) : ತಾವು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ (Karnataka CM) ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa)  ಹೇಳಿಕೆಗೆ ಪ್ರತಿಕ್ರಿಯಿಸಿದ  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ನನ್ನ ಮೇಲೆ  ಪ್ರೀತಿ, ವಿಶ್ವಾಸವಿಟ್ಟು ಅವರು ಹೇಳಿರಬಹುದು ಎಂದರು. ಬಾಗಲಕೋಟೆಯಲ್ಲಿಂದು (Bagalakote) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನನ್ನ ತವರು ಕ್ಷೇತ್ರವಾದ ಬೀಳಗಿಯಲ್ಲಿ ಬಿಜೆಪಿಯ (BJP) ಹಿಂದುಳಿದ ವರ್ಗಗಳ ಮೊರ್ಚಾ ಸಭೆಯನ್ನು ಆಯೋಜಿಸಲಾಗಿತ್ತು .ಆ ವೇಳೆ ಮಾತನಾಡುವಾಗ ಈಶ್ವರಪ್ಪನವರು (Eshwarappa) ನಾನು  ಮುಂದಿನ ಸಿಎಂ ಎಂದು ಹೇಳಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಕಳೆದ ಹಲವು ವರ್ಷಗಳಿಂದ ನಾವು ಮಾಡಿಕೊಂಡು ಬಂದಿರುವ ಸಾರ್ವಜನಿಕ ಸೇವೆ, ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಅವರು ಅಭಿಮಾನದಿಂದ ಹೇಳಿರಬಹುದೆಂದು ಸಚಿವ ಮುರುಗೇಶ್ ನಿರಾಣಿ  ಅಭಿಪ್ರಾಯಪಟ್ಟರು. 

ಕಳೆದ 5 ದಶಕಗಳಿಂದ ರಾಜ್ಯದಲ್ಲಿ ಮಾಜಿ ಸಿಎಂ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪ (BS Yediyurappa), ಕೇಂದ್ರ ಮಾಜಿ ಸಚಿವ ದಿವಂಗತ ಅನಂತ ಕುಮಾರ್ (Ananth Kumar) ಅವರ ಜೊತೆ ಈಶ್ವರಪ್ಪನವರು (KS eshwarapp) ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರೊಬ್ಬ ಹಿರಿಯ ನಾಯಕರು.  ನನ್ನ ಮೇಲಿನ  ಅಭಿಮಾನಕ್ಕೆ ನಾನು ಋಣಿ ಎಂದ ಅವರು, ನನಗೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಣಿ ಖಾತೆಯನ್ನು ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ. ಯಾವುದೇ ಖಾತೆ ನೀಡಿದರೂ ನಾನು ತೃಪ್ತಿಯಿಂದ ಕೆಲಸ ಮಾಡುತ್ತೇನೆ. ಈಗಲೂ ಅತ್ಯಂತ  ಸಂತೋಷದಿಂದ  ಇಲಾಖೆಯನ್ನು ನಿರ್ವಹಣೆ ಮಾಡುತ್ತಿದ್ದೇನೆ.  

ಬಿಜೆಪಿ ಗೆಲ್ಲಿಸುವ ಹೆಗ್ಗುರಿ  : ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಬಿಜೆಪಿಯನ್ನು (BJP) ಸ್ವಂತ ಬಲದ ಮೇಲೆ ಅಧಿಕಾರಕ್ಕೆ  ತರುವುದೇ ನಮ್ಮ ಮುಂದಿನ ಗುರಿಯಾಗಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ನಾವೆಲ್ಲರೂ ಸಾಥ್ ನೀಡಿ 2023ರ  ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 120 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ  ತರುವುದೇ ನಮ್ಮ ಮುಂದಿನ ಸವಾಲು ಎಂದು ತಿಳಿಸಿದರು. 

2024ರ ಲೋಕಸಭೆ ಚುನಾವಣೆಯಲ್ಲಿ (Loksabha Election 2024) ಪುನಃ 25 ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ (Election) 25 ಸ್ಥಾನಗಳನ್ನು ಗೆದ್ದಿದ್ದೇವೆ. ಮತ್ತೆ ಅದಕ್ಕಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲ್ಲು ಕಾರ್ಯತಂತ್ರವನ್ನು ರೂಪಿಸಿದ್ದೇವೆ  ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. 

 ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಕೋವಿಡ್‍ನಿಂದ (Covid ) ಹಿಡಿದು ರಾಜ್ಯದಲ್ಲಿ ಪ್ರವಾಹ (Flood) ಉಂಟಾದ ವೇಳೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಒಂದು ಕಡೆ ಕೋವಿಡ್ ನಿರ್ವಹಣೆ ಮತ್ತೊಂದು ಕಡೆ ಪ್ರವಾಹದಿಂದ  ಸಂಕಷ್ಟಕ್ಕೆ ಸಿಲುಕಿದ ಜನತೆಯನ್ನು ರಕ್ಷಣೆ ಮಾಡಿ ಅವರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಜೊತೆಗೆ ಜೊತೆಗೆ ರಾಜ್ಯದ  ಅಭಿವೃದ್ಧಿ ಕಡೆಯೂ ವಿಶೇಷ ನಿಗಾ ವಹಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಯೂ ಹಿನ್ನಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು ಸಚಿವ ಮುರುಗೇಶ್ ನಿರಾಣಿ. 

 • ಈಶ್ವರಪ್ಪನವರ ಅಭಿಮಾನಕ್ಕೆ ನಾನು  ಋಣಿ ಎಂದ ಸಚಿವ ಮುರುಗೇಶ್ ನಿರಾಣಿ
 •  ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದು ನಮ್ಮ ಮುಂದಿನ ಗುರಿ
 •   2023ರ ಚುನಾವಣೆಯಲ್ಲಿ 120 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಹೆಗ್ಗುರಿ - 
Follow Us:
Download App:
 • android
 • ios