ಬಿಜೆಪಿಯವರು ದ್ವೇಷದ ರಾಜಕಾರಣ ಬಿಡಬೇಕು: ಗೃಹ ಸಚಿವ ಪರಮೇಶ್ವರ್

ಬಿಜೆಪಿಯವರ ಮನಸ್ಸಿನಲ್ಲಿ ದ್ವೇಷ ಅಸೂಯೆ ಬಿಟ್ಟರೆ ಬೇರೇನೂ ಇಲ್ಲ. ಇದರಿಂದ ದೇಶ ಉಳಿಯುವುದಿಲ್ಲ. ಬಿಜೆಪಿಯವರು ಇನ್ನಾದರೂ ದ್ವೇಷದ ರಾಜಕಾರಣ ಬಿಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. 

BJP should stop politics of hate Says Home Minister Dr G Parameshwar gvd

ಬೆಂಗಳೂರು (ಫೆ.25): ಬಿಜೆಪಿಯವರ ಮನಸ್ಸಿನಲ್ಲಿ ದ್ವೇಷ ಅಸೂಯೆ ಬಿಟ್ಟರೆ ಬೇರೇನೂ ಇಲ್ಲ. ಇದರಿಂದ ದೇಶ ಉಳಿಯುವುದಿಲ್ಲ. ಬಿಜೆಪಿಯವರು ಇನ್ನಾದರೂ ದ್ವೇಷದ ರಾಜಕಾರಣ ಬಿಡಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು. ಸುದ್ದಿಗಾರರ ಜೊತೆ ಹೊಸಪೇಟೆ ರೈಲಿನ ಮೇಲೆ ದಾಳಿ ಪ್ರಕರಣ ಪ್ರಕರಣದ ಬಗ್ಗೆ ಮಾತನಾಡಿ, ಈಗಾಗಲೇ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೊಂದು ರೈಲು ನಿಂತಿತ್ತು. 

ರೈಲ್ವೆ ಉದ್ಯೋಗಿಯೊಬ್ಬರು ಪಾದಚಾರಿ ಮಾರ್ಗ ಬಳಸದೆ ರೈಲಿನಿಂದ ಹಾದು ಹೋಗಿದ್ದಾರೆ. ಆ ವ್ಯಕ್ತಿಯನ್ನು ಇವರೆಲ್ಲರೂ ಬೈದಿದ್ದಾರೆ. ಅಷ್ಟಕ್ಕೆ ರೈಲು ಸುಟ್ಟು ಹಾಕುತ್ತೇನೆ ಎಂದಿದ್ದಾನೆ ಎಂಬುದು ಇವರ ಆರೋಪ. ರೈಲ್ವೆ ಉದ್ಯೋಗಿ ಆದ ಕಾರಣ ಠಾಣಾ ಜಾಮೀನು ಮೇರೆ ಬಿಟ್ಟು ಕಳುಹಿಸಿದ್ದಾರೆ. ಇಂತಹವುಗಳಿಗೆ ಬಿಜೆಪಿಯವರು ದ್ವೇಷ ಹಾಗೂ ರಾಜಕೀಯದ ಬಣ್ಣ ಬಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಮತ ಕೇಳಲು ಹಿಂಜರಿಕೆಯ ಅವಶ್ಯಕತೆ ಇಲ್ಲ: ಶೋಭಾ ಕರಂದ್ಲಾಜೆ

40 ಸಾವಿರ ನಿವೇಶನ ಹಂಚುವ ಗುರಿ: ತುಮಕೂರು ಜಿಲ್ಲೆಯಲ್ಲಿ ಸುಮಾರು 40 ಸಾವಿರ ನಿವೇಶನಗಳನ್ನು ಬಡವರಿಗೆ ಹಂಚುವ ಕೆಲಸವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತಿಯೊಂದಿಗೆ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ವಸತಿ ಹೀನ ಬಡ ಕುಟುಂಬಗಳನ್ನು ಗುರುತಿಸಿ ನಿವೇಶಗಳನ್ನು ಹಂಚುವ ಕೆಲಸವನ್ನು ಮಾಡಲಾಗುವುದು, ಇದಕ್ಕಾಗಿ ಜಿಲ್ಲೆಯ ಪತ್ರಿ ತಾಲೂಕುಗಳಲ್ಲಿ ಸರ್ಕಾರಿ ಭೂಮಿಗಳನ್ನು ಗುರುತಿಸಲಾಗಿದೆ. 

ಅವುಗಳಲ್ಲಿ ನಿವೇಶನ ಮಾಡಿ ಬಡವರಿಗೆ ಹಂಚಿಕೆ ಮಾಡಲಾಗುವುದು ಹಾಗೂ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕೊರಟಗೆರೆ ತಾಲೂಕಿನಲ್ಲೂ 1600 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ರಾಜ್ಯದಲ್ಲಿ ಗ್ಯಾರಂಟಿಗಳ ಅನುಷ್ಠಾನಗಳೊಂದಿಗೆ ಬಡವರ ಇತರ ಕಲ್ಯಾಣ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದರು. ಈ ಬಾರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರದ ಅಯವ್ಯಯದಲ್ಲಿ ಎಲ್ಲಾ ವರ್ಗಗಳ ಜನರಿಗೆ, ರೈತರಿಗೆ, ಮಹಿಳೆಯರಿಗೆ ಅನುಕೂಲವಾಗುವಂತೆ ಮಂಡಿಸಿದ್ದಾರೆ ಎಂದರು.

ಸರ್ಕಾರದ ಬಳಿ ಹಣ ಇಲ್ಲ ಆರೋಪಕ್ಕೆ ಕಾಮಗಾರಿ ಉತ್ತರ: ಸಚಿವ ಕೆ.ಎನ್.ರಾಜಣ್ಣ

ಕೊರಟಗೆರೆ ಪಟ್ಟಣದ ಅಭಿವೃದಿಗೆ, ವೈಟ್‌ಟ್ಯಾಪಿಂಗ್‌ ರಸ್ತೆಗೆ, ಸ್ಲಮ್‌ಬೋರ್ಡ್‌ ಮನೆಗಳ ನಿರ್ಮಾಣಕ್ಕೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಈಗಾಗಲೇ 30ಕೋಟಿ ರು.ಗಳ ವಿಶೆಷ ಅನುದಾನ ಮಂಜೂರು ಮಾಡಿಸಿದ್ದೇನೆ, ಪಟ್ಟಣದ ಬಸ್ವಾಂಡ್ ಸರ್ಕಲ್‌ನಲ್ಲಿ ಹಲವಾರು ವರ್ಷಗಳಿಂದ ವಾಸಿಸಲು ಯೋಗ್ಯವಿಲ್ಲದ ಸರ್ಕಾರಿ ಕಟ್ಟಡಗಳನ್ನು ತರೆವು ಮಾಡಲಾಗಿದೆ, ಮುಂದೆ ಅಲ್ಲಿ ಬೃಹತ್‌ ಕಲಾಭವನವನ್ನು, ಪಟ್ಟಣ ಪಂಚಾಯತಿಗೆ ಆದಾಯತರುವ ನಿಟ್ಟಿನಲ್ಲಿ ಶಾಪಿಂಗ್‌ಮಾಲ್‌ಗಳನ್ನು ಮತ್ತು ಇತರ ವ್ಯಾಪಾರಿ ಕೆಂದ್ರಗಳನ್ನು ಮಾಡಲಾಗುವುದು ಮತ್ತು ಪ್ರಯಾಣಿಕರಿಗೆ ಉತ್ತಮ ತಂಗುದಾನಗಳ ನಿರ್ಮಾಣವನ್ನು ಮಾಡಲಾಗುವುದು ಎಂದರು.

Latest Videos
Follow Us:
Download App:
  • android
  • ios