ಬಿಜೆಪಿಯವರು ಭಾವನಾತ್ಮಕ ವಿಷಯ ಕೆದಕಿ ಚುನಾವಣೆ ನಡೆಸ್ತಾರೆ: ಸಚಿವ ಸಂತೋಷ ಲಾಡ್
ಚುನಾವಣೆ ಬಂದಾಗಲೇ ರಾಮಮಂದಿರ, ಹಿಂದೂ- ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನದ ವಿಷಯಗಳೆಲ್ಲ ಬರುತ್ತವೆ. ಇವುಗಳನ್ನೇ ಬಿಜೆಪಿ ಅವರೇ ಮಾಡುವುದು. ಯಾವುದೇ ಚುನಾವಣೆಯಾದರೂ ಭಾವನಾತ್ಮಕ ವಿಷಯಗಳನ್ನೇ ಎತ್ತಿಕೊಂಡು ಚುನಾವಣೆ ನಡೆಸುತ್ತಾರೆ ಎಂದು ಟೀಕಿಸಿದ ಸಚಿವ ಸಂತೋಷ ಲಾಡ್
ಹುಬ್ಬಳ್ಳಿ(ಫೆ.25): ಚುನಾವಣೆ ಬಂದಾಗ ಹಿಂದೂ- ಮುಸ್ಲಿಂ ಗದ್ದಲ ಆಗುತ್ತದೆ. ಇದನ್ನು ಬಿಜೆಪಿಯವರು ಮಾಡುವುದು ಎಂಬುದು ಗೊತ್ತು. ಅವರು ಬರೀ ಭಾವನಾತ್ಮಕ ವಿಷಯಗಳನ್ನೇ ಇಟ್ಟುಕೊಂಡು ಚುನಾವಣೆ ನಡೆಸುತ್ತಾ ಬಂದಿದ್ದಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗಲೇ ರಾಮಮಂದಿರ, ಹಿಂದೂ- ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನದ ವಿಷಯಗಳೆಲ್ಲ ಬರುತ್ತವೆ. ಇವುಗಳನ್ನೇ ಬಿಜೆಪಿ ಅವರೇ ಮಾಡುವುದು. ಯಾವುದೇ ಚುನಾವಣೆಯಾದರೂ ಭಾವನಾತ್ಮಕ ವಿಷಯಗಳನ್ನೇ ಎತ್ತಿಕೊಂಡು ಚುನಾವಣೆ ನಡೆಸುತ್ತಾರೆ ಎಂದು ಟೀಕಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಹಳ್ಳ ಹಿಡಿದಿವೆ. ಸಾಲ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಹಾಗಾದರೆ, ದೇಶದ ಸಾಲ ಎಷ್ಟಿದೆ ಎಂಬುದನ್ನು ಜೋಶಿಯವರು ಹಾಗೂ ಬಿಜೆಪಿಯವರು ಹೇಳಲಿ ಎಂದು ಸವಾಲೆಸೆದರು.
ಪ್ರಧಾನಿ ಮೋದಿಯವರ 10 ವರ್ಷದ ಸಾಧನೆ ಶೂನ್ಯ: ಸಚಿವ ಸಂತೋಷ್ ಲಾಡ್
ಚುನಾವಣೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ಅದನ್ನು ಮಾಡುತ್ತಿಲ್ಲ. ಮೋದಿ ಸರ್ಕಾರ ಬಂದು 10 ವರ್ಷವಾಗಿದೆ. ಏನೆಲ್ಲ ಅಭಿವೃದ್ಧಿಯಾಗಿದೆ ಅದರ ಬಗ್ಗೆ ಚರ್ಚೆ ನಡೆಸಲಿ. ಮೇಕ್ ಇನ್ ಇಂಡಿಯಾ ಬಗ್ಗೆ ಏನೆಲ್ಲ ಹೇಳಿದರು, ಏನಾಗಿದೆ?. ಮೇಕ್ ಇನ್ ಇಂಡಿಯಾಗೆ 450 ಕೋಟಿ ಖರ್ಚಾಗಿದೆ. ಆದರೆ, ಎಲ್ಲ ಸರಕುಗಳು ಈಗಲೂ ಚೀನಾದಿಂದಲೇ ಬರುತ್ತವೆ. ಮೇಕ್ ಇನ್ ಇಂಡಿಯಾ ಎಲ್ಲಿದೆ? ಇದರ ಬಗ್ಗೆ ಏಕೆ ಬಿಜೆಪಿಯವರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.