Asianet Suvarna News Asianet Suvarna News

ಡಿನ್ನರ್ ಕೂಟದಲ್ಲಿ ಮುಳುಗಿದ ರಾಜ್ಯ ಸರ್ಕಾರ: ಆರ್.ಅಶೋಕ್ ಆರೋಪ

ಡಿನ್ನರ್ ಕೂಟದಲ್ಲಿ ರಾಜ್ಯ ಸರ್ಕಾರ ಮುಳುಗಿದ್ದು ಮುಖ್ಯಮಂತ್ರಿ ಇಳಿತಾರೋ, ಏರುತಾರೋ ಎಂಬ ಗೊಂದಲ್ಲಿ ನಿತ್ಯ ಕಾಲಹರಣ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು. 

BJP Opposition Leader R Ashok Slams On Congress Govt At Chitradurga gvd
Author
First Published Nov 27, 2023, 12:30 AM IST

ಚಿತ್ರದುರ್ಗ (ನ.27): ಡಿನ್ನರ್ ಕೂಟದಲ್ಲಿ ರಾಜ್ಯ ಸರ್ಕಾರ ಮುಳುಗಿದ್ದು ಮುಖ್ಯಮಂತ್ರಿ ಇಳಿತಾರೋ, ಏರುತಾರೋ ಎಂಬ ಗೊಂದಲ್ಲಿ ನಿತ್ಯ ಕಾಲಹರಣ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು. ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಪದವಿ ಗ್ರಾಮ ಪಂಚಾಯತಿ ಚುನಾವಣೆಯಂತಾಗಿದೆ. ಕೆಲವರು ಸರ್ಕಾರದ ವಿರುದ್ಧ ದುಬೈಗೆ ಹೊರಟು ಹೋಗಿದ್ದಾರೆ. ದಾವಣಗೆರೆಯಲ್ಲಿ ಒಬ್ಬ ಶಾಸಕ ಪರಿಹಾರ ಕೊಡದಿದ್ದರೆ ರಾಜೀನಾಮೆ ಅಂತಾರೆ. ಮಂಡ್ಯದಲ್ಲಿ ಒಬ್ಬ ಶಾಸಕ ಸಿಎಂ ಬದಲಿಸಿ ಅಂತಾರೆ. ಇವೆಲ್ಲ ಏನು ಎಂದು ಪ್ರಶ್ನಿಸಿದರು.

ಡಿಕೆಶಿಗೆ ಸಿಬಿಐ ತನಿಖೆಯಿಂದ ಮುಕ್ತಿ ಕೊಡಲು ಹೋರಾಟ ನಡೆಸಲಾಗುತ್ತಿದೆ. ಬಳ್ಳಾರಿ ಸಚಿವ ನಾಗೇಂದ್ರನದ್ದೂ 25 ಕೇಸು ಸಿಬಿಐ ತನಿಖೆ ಹಂತದಲ್ಲಿದೆ. ಆತನಿಗೂ ಮುಕ್ತಿಗೊಂಡಬೇಕಿತ್ತು. ಇದೊಂದು ಮುಕ್ತಿಯ ಕ್ಯಾಬಿನೆಟ್ ಎಂದು ಬೋರ್ಡ್ ಹಾಕಬಹುದು. ಜನಾರ್ಧನರೆಡ್ಡಿಗೆ ಮುಕ್ತಿ ಕೊಟ್ಟರೆ ಎಲ್ಲರಿಗೂ ಮುಕ್ತಿ ಕೊಟ್ಟಂತೆ ಎಂದು ವ್ಯಂಗ್ಯವಾಡಿದರು.

ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆ: ಸಚಿವ ಸಂತೋಷ್‌ ಲಾಡ್‌

ಜಾತಿ ಜನಗಣತಿ ಯಾರದ್ದೋ ಮನೆಯಲ್ಲಿ ಕುಳಿತು ಮಾಡಿದಂಗಿದೆ. ಸಿದ್ದರಾಮಯ್ಯ ಅವರದ್ದೇ 5 ವರ್ಷ ಸರ್ಕಾರವಿದ್ದಾಗ ಏಕೆ ಮಾಡಲಿಲ್ಲ. ಈಗ ಜಾತಿ ಗಣತಿ ವರದಿ ಕಳ್ಳತನ ಆಗಿದೆ ಅಂತಾರೆ. ಕಾರ್ಯದರ್ಶಿ ಸಹಿ ಹಾಕದೆ ಓಡಿಹೋಗಿದ್ದಾರೆ. ಓರಿಜಿನಲ್ ವರದಿ ಇಲ್ಲ, ನಕಲಿ ಇದೆ ಎಂದು ಹೇಳುತ್ತಿದ್ದಾರೆ. ನಕಲಿಯನ್ನು ಹೇಗೆ ನಂಬುವುದು ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದರು.

ಜಾತಿ ಜನಗಣತಿ ವಿಚಾರದಲ್ಲಿ ಒಕ್ಕಲಿಗ, ಲಿಂಗಾಯತ, ರೆಡ್ಡಿ ಯಾವ ಸಮುದಾಯದವರಿಗೆ ಕೇಳಿದರೂ ಮನೆ ಬಳಿ ಬಂದಿಲ್ಲ ಅಂತಾರೆ. ಜಾತಿ ಜನಗಣತಿ ಅವೈಜ್ಞಾನಿಕವಾಗಿ ಮಾಡಲಾಗಿದೆ.10ವರ್ಷದ ಹಿಂದೆ ಜಾತಿ ಜನಗಣತಿ ಮಾಡಲಾಗಿದೆ. ಡಿಕೆಶಿ ಜಾತಿ ಜನಗಣತಿ ಒಪ್ಪಲ್ಲ ಎಂದರೆ, ಸಿದ್ದರಾಮಯ್ಯ ಬುಲೆಟ್ ಟ್ರೈನ್ ತರ ತುದಿಗಾಲಲ್ಲಿದ್ದಾರೆ. ಶಾಮನೂರು ಒಪ್ಪಲ್ಲ ಎಂದಿದ್ದು ಕಾಂಗ್ರೆಸ್ ಪಕ್ಷದಲ್ಲೇ ಒಡಕಿದೆ ಎಂದು ಅಶೋಕ್ ಹೇಳಿದರು.

ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್

ಕಳೆದ ಸಲ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತ ಸಮುದಾಯ ಒಡೆಯಲು ಹೋದರು. ಅವಮಾನ ಆಗಿ ಸೋತರು. ಈಗಲೂ ಅದೇ ರೀತಿ ಆಗಲಿದೆ. ಶಾಮನೂರು ಹೇಳಿದಂತೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನೆಡೆ ಆಗಲಿದೆ ಎಂದರು. ಲೋಕಸಭೆ ಚುನಾವಣೆ ಬಳಿಕ ವಿಜಯೇಂದ್ರ ಅಧ್ಯಕ್ಷರಾಗಿರುವುದಿಲ್ಲವೆಂಬ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ, ಬೆಂಗಳೂರಿನ ಎಂ.ಜಿ ರೋಡಲ್ಲಿ ಪಾಟೀಲ್ ಜೋತಿಷ್ಯ ಅಂಗಡಿ ಇಡಲಿ ಎಂದು ಅಶೋಕ್ ವ್ಯಂಗ್ಯವಾಡಿದರು.

Follow Us:
Download App:
  • android
  • ios