Asianet Suvarna News Asianet Suvarna News

ಸದನದಲ್ಲಿ ಜಮೀರ್‌, ಜಿನ್ನಾ, ಒವೈಸಿ ಚಿತ್ರ ಹಾಕಿ: ಪ್ರತಿಪಕ್ಷ ನಾಯಕ ಅಶೋಕ್‌ ಕಿಡಿ

ರಾಜ್ಯದಲ್ಲಿ ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಸಭಾಧ್ಯಕ್ಷರ ಪೀಠದ ಹಿಂಭಾಗ ಸಚಿವ ಜಮೀರ್‌ ಅಹಮದ್‌ಖಾನ್‌, ಪಾಕಿಸ್ತಾನ ರಚನೆಗೆ ಕಾರಣರಾದ ಮೊಹಮ್ಮದ್‌ ಅಲಿ ಜಿನ್ನಾ, ಎಐಎಂಐಎಂ ಪಕ್ಷದ ಅಸಾದುದ್ದೀನ್‌ ಓವೈಸಿ ಫೋಟೋಗಳನ್ನು ಹಾಕಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. 
 

BJP Opposition Leader R Ashok Slams On Congress Govt At Belagavi gvd
Author
First Published Dec 12, 2023, 4:00 AM IST

ವಿಧಾನಸಭೆ (ಡಿ.11): ರಾಜ್ಯದಲ್ಲಿ ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಸಭಾಧ್ಯಕ್ಷರ ಪೀಠದ ಹಿಂಭಾಗ ಸಚಿವ ಜಮೀರ್‌ ಅಹಮದ್‌ಖಾನ್‌, ಪಾಕಿಸ್ತಾನ ರಚನೆಗೆ ಕಾರಣರಾದ ಮೊಹಮ್ಮದ್‌ ಅಲಿ ಜಿನ್ನಾ, ಎಐಎಂಐಎಂ ಪಕ್ಷದ ಅಸಾದುದ್ದೀನ್‌ ಓವೈಸಿ ಫೋಟೋಗಳನ್ನು ಹಾಕಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಸೋಮವಾರ ಸಚಿವ ಜಮೀರ್‌ ಅಹಮದ್‌ ಹೇಳಿಕೆ ಖಂಡಿಸಿ ಹಾಗೂ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವ ವೇಳೆ ಸ್ಪೀಕರ್‌ ಯು.ಟಿ. ಖಾದರ್‌ ಅವರನ್ನು ಉದ್ದೇಶಿಸಿ ಅಶೋಕ್‌ ಮಾತನಾಡಿದರು.

ಸದನದ ಬಾವಿಯಲ್ಲೇ ನಿಂತು ಮಾತನಾಡಿದ ಅಶೋಕ್‌, ಜಮೀರ್ ಅಹಮದ್‌ ಖಾನ್‌ ಅವರ ಹೇಳಿಕೆಯನ್ನು ಸ್ಪೀಕರ್‌ ಆದ ನೀವು ಕನಿಷ್ಠ ತಪ್ಪು ಎಂದೂ ಕೂಡ ಹೇಳಿಲ್ಲ. ಅವರ ಫೋಟೋ ಅನ್ನು ನಿಮ್ಮ ಪೀಠದ ಹಿಂಭಾಗದಲ್ಲಿ ಬಸವಣ್ಣನವರ ಪಕ್ಕದಲ್ಲಿ ಹಾಕಿಕೊಳ್ಳಿ. ಸಾವರ್ಕರ್‌ ಫೋಟೋ ಪಕ್ಕದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹಾಗೂ ಓವೈಸಿ ಫೋಟೋ ಹಾಕಿ. ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೂ ಸಾರ್ಥಕ ಆಗುತ್ತದೆ ಎಂದು ಹೇಳಿದರು.

ಕೊಬ್ಬರಿಗೆ ಬೆಂಬಲ ಬೆಲೆಗಾಗಿ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ: ಎಚ್‌ಡಿಕೆ

ಸ್ಪೀಕರ್‌ ಅವರಿಗೆ ಸಲಾಂ ವಾಲೆಕುಂ!: ಇನ್ನು ಮುಂದೆ ಸ್ಪೀಕರ್‌ ಅವರಿಗೆ ನಮಸ್ಕಾರ ಹೇಳುವುದಿಲ್ಲ. ಬದಲಿಗೆ ‘ಸಲಾಂ ವಾಲೆಕ್ಕುಂ ಸಲಾಂ’ ಎಂದು ಹೇಳುತ್ತೇವೆ. ಮುಖ್ಯಮಂತ್ರಿಗಳು ಮೌಲ್ವಿಗಳ ಬಳಿಗೆ ಹೋಗಿ 10 ಸಾವಿರ ಕೋಟಿ ರು. ಮುಸ್ಲಿಮರಿಗೆ ನೀಡುವುದಾಗಿ ಹೇಳಿದ್ದಾರೆ. ಅದನ್ನು ಒಂದು ಲಕ್ಷ ಕೋಟಿ ರು.ಗಳಿಗೆ ಹೆಚ್ಚಳ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್‌, ‘ಸಭಾಧ್ಯಕ್ಷ ಸಾಬ್ ಹಮಾರಾ ಬಾತ್‌ ಸುನೋ ಸಾಬ್‌’ ಎಂದು ಉರ್ದು ಭಾಷೆಯಲ್ಲೇ ಮಾತನಾಡಲು ಯತ್ನಿಸುವ ಮೂಲಕ ಅಸಮಾಧಾನ ಹೊರ ಹಾಕಿದರು.

ಸರ್ಕಾರ ಪತನ ಆಗಲಿದೆಯೆಂದು ಎಚ್‌ಡಿಕೆ ಕನಸು ಕಾಣುತ್ತಲೇ ಇರಲಿ: ಸಚಿವ ಚಲುವರಾಯಸ್ವಾಮಿ

ಈ ಹಂತದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್‌ ಖಾದರ್‌, ನೀವು ಯಾವುದೇ ನೋಟಿಸ್‌ ನೀಡದೆ ಪ್ರಶ್ನೋತ್ತರ ಮಧ್ಯದಲ್ಲೇ ಎದ್ದು ಮಾತನಾಡಲು ಶುರು ಮಾಡಿದ್ದೀರಿ. ರಾಜ್ಯದ ಹೊರಗೆ ಅವರು ಕೊಟ್ಟಿರುವ ಹೇಳಿಕೆಗೆ ಈಗಾಗಲೇ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ನಾನೂ ಆ ಬಗ್ಗೆ ಮಾತನಾಡಿದ್ದೇನೆ. ಅಧಿವೇಶನ ಶುರುವಾಗಿ ಒಂದು ವಾರ ಕಳೆದರೂ ಈ ವಿಚಾರ ಪ್ರಸ್ತಾಪ ಮಾಡಿರಲಿಲ್ಲ. ಇದೀಗ ಬರದ ಬಗ್ಗೆ ಚರ್ಚೆ ನಡೆಸುವಾಗ ಅನಗತ್ಯ ವಿಚಾರ ತೆಗೆದುಕೊಂಡಿದ್ದೀರಿ. 20 ಕೋಟಿ ರು. ಖರ್ಚು ಮಾಡಿ ಅಧಿವೇಶನ ಮಾಡುತ್ತಿದ್ದರೆ ನಯಾಪೈಸೆಗೆ ಉಪಯೋಗವಿಲ್ಲದ ವಿಷಯ ಚರ್ಚಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios