Asianet Suvarna News Asianet Suvarna News

ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರ್ತಾರೆ: ಆರ್‌.ಅಶೋಕ್‌

ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರುತ್ತಾರೆ. ಒಬ್ಬರು ಆಯ್ಕೆಯಾದಾಗ ಹೀಗೆ ಹೇಳುತ್ತಾರೆ. ಹಾಗೇ ಕಾಂಗ್ರೆಸ್‌ನಲ್ಲೂ ಡಿಕೆಶಿ ಸಿದ್ದರಾಮಯ್ಯ, ಪರಮೇಶ್ವರ ಸಿದ್ದರಾಮಯ್ಯ ಪರ ವಿರೋಧ ಇದೆ. ಇವೆಲ್ಲವೂ ರಾಜಕಾರಣದಲ್ಲಿ ಕಾಮನ್ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು. 
 

BJP Opposition Leader R Ashok Slams On Congress Govt AT Belagavi gvd
Author
First Published Dec 9, 2023, 2:00 AM IST

ಬೆಳಗಾವಿ (ಡಿ.09): ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರುತ್ತಾರೆ. ಒಬ್ಬರು ಆಯ್ಕೆಯಾದಾಗ ಹೀಗೆ ಹೇಳುತ್ತಾರೆ. ಹಾಗೇ ಕಾಂಗ್ರೆಸ್‌ನಲ್ಲೂ ಡಿಕೆಶಿ ಸಿದ್ದರಾಮಯ್ಯ, ಪರಮೇಶ್ವರ ಸಿದ್ದರಾಮಯ್ಯ ಪರ ವಿರೋಧ ಇದೆ. ಇವೆಲ್ಲವೂ ರಾಜಕಾರಣದಲ್ಲಿ ಕಾಮನ್ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು. ಸಭಾತ್ಯಾಗ ವಿಚಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ಯತ್ನಾಳ ಅವರು ನನ್ನ ಹತ್ತಿರ ಬಂದು ಹೇಳಿದರು. ಪ್ರತಿದಿನ ಧರಣಿ ಮಾಡಿದರೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಆಗಲ್ಲ. ನೀವು ಸದನದ ಬಾವಿಗೆ ಇಳಿದರೆ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. 

ಉತ್ತರ ಕರ್ನಾಟಕದ ಬಗ್ಗೆ ನಾನು ಮಾತಾಡಬೇಕು. ಹೀಗಾಗಿ ಧರಣಿ ಬೇಡ ಎಂದು ಯತ್ನಾಳ ಹೇಳಿದರು. ನಾನು ಅದಕ್ಕೆ ಮುಂದಿರುವವರನ್ನು ಕರೆದು ಚರ್ಚೆ ಮಾಡಿದೆ. ಇದರಿಂದ ಹಿಂದಿರೋರು ಮುಂದಿರೋರರ ಮಧ್ಯೆ ಕಮ್ಯೂನಿಕೇಷನ್ಸ್ ಗ್ಯಾಪ್ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ದೂರನ್ನು ತಿರುಚುವ ಪ್ರಯತ್ನ ಪೊಲೀಸ್‌ ಮಾಡಿದ್ದಾರೆ. ನಾವು ಕೊಟ್ಟ ದೂರನ್ನು ತಮಗೆಷ್ಟು ಬೇಕು ಅಷ್ಟು ತಗೊಂಡಿದ್ದಾರೆ. ಸದನದಲ್ಲಿ ಏನ್ ಬೇಕಿದೆ ಅಷ್ಟು ಮಾತ್ರ ಗೃಹ ಸಚಿವರು ಓದಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು‌ ಹೋರಾಟ ಮಾಡುತ್ತೇವೆ ಎಂದರು.

ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಮಾತನಾಡುವ ಯತ್ನಾಳ್‌: ಸಚಿವ ಸಂತೋಷ್‌ ಲಾಡ್

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಬರ ಪರಿಹಾರಕ್ಕೆ ಕಾಯದೆ ಸಮೀಕ್ಷೆ ನಡೆಸಿದ ಒಂದೆರಡು ತಿಂಗಳಲ್ಲೇ ರೈತರಿಗೆ ಎನ್‌ಡಿಆರ್‌ಎಫ್‌ ನಿಯಮದ ದರಕ್ಕಿಂತ ದುಪ್ಪಟ್ಟು ಬೆಳೆ ಪರಿಹಾರವನ್ನು ರೈತರಿಗೆ ನೀಡಿದ್ದೆವು. ನಿಮಗೇನು ಸಮಸ್ಯೆ, ತೋರಿಕೆಗಷ್ಟೆ ರೈತರಿಗೆ ತಲಾ 2000 ರು. ತಾತ್ಕಾಲಿಕ ಬೆಳೆ ನಷ್ಟ ಪರಿಹಾರ ಘೋಷಿಸಿರುವುದು ಅವಮಾನಕರ. ಸರ್ಕಾರ ಕೂಡಲೇ ರೈತರ ಬೆಳೆ ನಷ್ಟಕ್ಕೆ ಕೂಡಲೇ ಮೂರು ಪಟ್ಟು ಪರಿಹಾರ ಘೋಷಿಸಬೇಕು...’

ಇದು, ನೂತನ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪರಿ. ಬರ ನಿರ್ವಹಣೆ ಕುರಿತು ತಾವು ಮಂಡಿಸಿದ್ದ ಮೊದಲ ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆಯೇ ತಮ್ಮ ರಾಜ್ಯಪ್ರವಾಸದ ವೇಳೆ ಕಂಡುಬಂದ ರೈತರ ಸಂಕಷ್ಟ, ವಿದ್ಯುತ್‌ ಸಮಸ್ಯೆ, ಕುಡಿಯುವ ನೀರು, ಮೇವಿನ ಸಮಸ್ಯೆ ಮತ್ತಿತರ ವಿಚಾರಗಳನ್ನು ಸುಧೀರ್ಘವಾಗಿ ಮಂಡಿಸುತ್ತಾ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.

ಶಾಸಕ ಯತ್ನಾಳ ಆರೋಪ ಸತ್ಯಕ್ಕೆ ದೂರ: ಸಚಿವ ಜಮೀರ್ ಅಹ್ಮದ್ ಖಾನ್

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಫೂರ್ಣ ವಿಫಲವಾಗಿದೆ. ಅಧಿವೇಶನ ನಡೆಯುತ್ತಿದೆ ವಿಪಕ್ಷದವರು ಕೇಳುತ್ತಾರೆ ಎನ್ನುವ ಕಾರಣಕ್ಕೆ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ತಾತ್ಕಾಲಿಕವಾಗಿ ತಲಾ 2000 ರು. ಪರಿಹಾರ ಘೋಷಿಸಿದ್ದೀರಿ. ಅದೂ ಕೂಡ ಇನ್ನೂ ಫಲಾನುಭವಿಗೆ ತಲುಪಿಲ್ಲ. ಬರ ನಿರ್ವಹಣೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ. ಆದರೆ, ಸರ್ಕಾರ ಅದನ್ನು ಸಮರ್ಪಕವಾಗಿ ಖರ್ಚು ಮಾಡಲು ಆದೇಶ ನೀಡಿಲ್ಲ. ಅಧಿಕಾರಿಗಳಿಗೂ ಖರ್ಚು ಮಾಡುವ ಮನಸ್ಸಿಲ್ಲ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರ ನಿರ್ವಹಣೆಗೆ 700 ಕೋಟಿಗೂ ಹೆಚ್ಚು ಹಣವಿದೆ ಅನ್ನುತ್ತಾರೆ. ಜಿಲ್ಲಾಧಿಕಾರಿಗಳು ಪ್ರತಿ ತಾಲ್ಲೂಕಿಗೆ ಕೇವಲ 25 ಲಕ್ಷ ರು. ಕುಡಿಯುವ ನೀರಿಗೆ ನೀಡಿದ್ದಾರೆ. ಈ ಹಣದಲ್ಲಿ ಯಾವ ರೀತಿ ಬರ ನಿರ್ವಹಣೆ ಮಾಡಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.

Follow Us:
Download App:
  • android
  • ios