Asianet Suvarna News Asianet Suvarna News

ಶಾಸಕ ಯತ್ನಾಳ ಆರೋಪ ಸತ್ಯಕ್ಕೆ ದೂರ: ಸಚಿವ ಜಮೀರ್ ಅಹ್ಮದ್ ಖಾನ್

ಐಸಿಸ್‌ ಜೊತೆಗೆ ಮೌಲ್ವಿ ತನ್ವೀರ್‌ ಪೀರಾ ನಂಟಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಸತ್ಯಕ್ಕೆ ದೂರವಾಗಿದೆ. ಬೇಕಂತಲೇ ಮೌಲ್ವಿ ಅವರನ್ನು ಯತ್ನಾಳ ಟಾರ್ಗೆಟ್ ಮಾಡಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

Minister Zameer Ahmed Khan Slams On Basanagouda Patil Yatnal At Belagavi gvd
Author
First Published Dec 8, 2023, 11:01 PM IST

ಬೆಳಗಾವಿ (ಡಿ.08): ಐಸಿಸ್‌ ಜೊತೆಗೆ ಮೌಲ್ವಿ ತನ್ವೀರ್‌ ಪೀರಾ ನಂಟಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಸತ್ಯಕ್ಕೆ ದೂರವಾಗಿದೆ. ಬೇಕಂತಲೇ ಮೌಲ್ವಿ ಅವರನ್ನು ಯತ್ನಾಳ ಟಾರ್ಗೆಟ್ ಮಾಡಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಮೌಲ್ವಿ ಕೂಡ ವಿಜಯಪುರ ಮೂಲದವರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮೌಲ್ವಿ ಶ್ರಮಪಟ್ಟಿದ್ದರು. ಹೀಗಾಗಿ ಹೊಟ್ಟೆ ಕಿಚ್ಚಿನಿಂದ ಈ ರೀತಿ ಯತ್ನಾಳ ಹೇಳುತ್ತಿದ್ದಾರೆ ಎಂದು ದೂರಿದರು.

ಸ್ಪೀಕರ್‌ಗೆ ನಮಸ್ಕಾರ ಹೇಳಿಕೆಯಲ್ಲಿ ತಪ್ಪೇನಿದೆ?: ತೆಲಂಗಾಣದ ಪ್ರಚಾರ ಸಭೆಯಲ್ಲಿ ಓರ್ವ ಮುಸ್ಲಿಂ ಮುಖಂಡ ಒಂದು ಮಾತು ಹೇಳಿದರು. ಮುಸ್ಲಿಮರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ. ಆದರೆ, ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲ್ಲ ಅಂದರು. ಆಗ ನಾನು ಕರ್ನಾಟಕದ ಉದಾಹರಣೆ ನೀಡಿದೆ ಎಂದು ವಸತಿ ಸಚಿವ ಜಮೀರ್‌ ಹೇಳಿದರು. ಈ ಮೂಲಕ ಸ್ಪೀಕರ್‌ಗೆ ಬಿಜೆಪಿ ಶಾಸಕರು ಎದ್ದು ನಿಂತು ಕೈ ಮುಗಿಯುತ್ತಾರೆಂಬ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಶಾಸಕ ಯತ್ನಾಳ್ ಮಹಾ ಸುಳ್ಳುಗಾರ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 17 ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿತ್ತು, ಅದರಲ್ಲಿ 9 ಜನ ಗೆದ್ದಿದ್ದಾರೆ. ಒಂಬತ್ತು ಜನರ ಪೈಕಿ ಐದು ಜನರಿಗೆ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ ಎಂದು ಹೇಳಿದೆ. ನನ್ನ, ರಹೀಂಖಾನ್ ಮಂತ್ರಿ ಮಾಡಿದ್ದಾರೆ, ಸರ್ಕಾರದ ಮುಖ್ಯಸಚೇತಕ ಹುದ್ದೆ ಸಲೀಂ ಅಹ್ಮದ್‌ಗೆ ನೀಡಿದ್ದಾರೆ. ನಾಸೀರ್ ಅಹ್ಮದ್‌ಗೆ ಸಿಎಂ ಪೊಲಿಟಿಕಲ್ ಸೆಕ್ರೆಟರಿ ಮಾಡಿದ್ದಾರೆ. ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಖಾದರ್‌ಗೆ ಸ್ಪೀಕರ್ ಮಾಡಿದ್ದಾರೆ. ಸ್ಪೀಕರ್ ಖಾದರ್‌ಗೆ ಆಡಳಿತ ಪಕ್ಷ ಸೇರಿ ಬಿಜೆಪಿ ಶಾಸಕರು ಎದ್ದು ನಮಸ್ಕಾರ ಮಾಡ್ತಾರೆ ಎಂದಿದ್ದೇನೆ. 

ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಹೇಳಿ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಸ್ಪೀಕರ್ ಹುದ್ದೆ ಆ ಥರ ಇದೆ, ಇತಿಹಾಸದಲ್ಲಿ ಯಾರು ಕೂಡ ಮುಸ್ಲಿಮರಿಗೆ ಸ್ಪೀಕರ್ ಹುದ್ದೆ ನೀಡಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಸ್ಪೀಕರ್ ಹುದ್ದೆ ನೀಡಿದೆ. ಆ ಹುದ್ದೆಗೆ ನಮಸ್ಕಾರ ಮಾಡುವುದು ಎಂದಿದ್ದೇನೆ. ಬಿಜೆಪಿಯವರು ಏನಾದರೂ ಹೇಳಿಕೆ ನೀಡಲಿ. ನನ್ನ ಸೇರಿ ಬಿಜೆಪಿ ಶಾಸಕರು ನಮಸ್ಕಾರ ಮಾಡುತ್ತಾರೆ ಎಂದಿದ್ದೇನೆ. ನಮಸ್ಕಾರ ಯುಟಿ ಖಾದರಗೆ ಅಲ್ಲ, ಸ್ಪೀಕರ್ ಹುದ್ದೆಗೆ ಎಂದಿದ್ದೇನೆ, ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮಂಗಳೂರಲ್ಲಿ ಮುಂದುವರಿದ ಧರ್ಮ ದಂಗಲ್‌ ವಿವಾದ: ಕಾಂಗ್ರೆಸ್‌ ಸರ್ಕಾರ ವಿರುದ್ಧ ಮುಸ್ಲಿಂ ವ್ಯಾಪಾರಿಗಳ ಆಕ್ರೋಶ

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ₹4 ಸಾವಿರ ಕೋಟಿ ಘೋಷಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ವಿರೋಧ ಮಾಡುತ್ತಿರುವ ಬಿಜೆಪಿ ನಾಯಕರನ್ನೇ ನೀವೇ ಪ್ರಶ್ನಿಸಿ ನನ್ನ ಕೇಳಬೇಡಿ. 2013ರಲ್ಲಿ ಸಿಎಂ ಆಗಿದ್ದಾಗ ಮೈನಾರಿಟಿ ಗ್ರ್ಯಾಂಟ್ ₹400 ಕೋಟಿ ಇತ್ತು. ನಾನು ಸಿಎಂ ಆದ ಬಳಿಕವೇ ₹3150 ಕೋಟಿ ಗ್ರ್ಯಾಂಟ್ ನೀಡಿದ್ದೇನೆ. ಈ ವರ್ಷ 4 ಸಾವಿರ ಕೋಟಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. 5 ವರ್ಷದಲ್ಲಿ ₹ 6ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದರು.

Follow Us:
Download App:
  • android
  • ios