ಬೆಂಗಳೂರು[ಜ.15]  ದೇವೇಗೌಡರಿಗೆ ಕರೆ ಮಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಳವಣಿಗೆಗಳ ವಿವರಣೆ ಪಡೆದುಕೊಂಡಿದ್ದಾರೆ. ‘ವಾಟ್ ಈಸ್ ಹ್ಯಾಪನಿಂಗ್’ ಎಂದು ಗೌಡರನ್ನು ಕೇಳಿದ್ದಾರೆ.

ಇದಕ್ಕೆ ಉತ್ತರ ನೀಡಿದ ಗೌಡರು, ನಾನು ಟೀ ಕುಡಿಯುತ್ತಾ ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿರುವೆ.. ನೆಮ್ಮದಿಯಾಗಿ ಸಂಕ್ರಾಂತಿ ಆಚರಣೆ ಮಾಡ್ತಾ ಇದೀನಿ ಎಂದು ನಸು ನಗುತ್ತಲೇ ಉತ್ತರಿಸಿದ ಉತ್ತರಿಸಿದ್ದಾರೆ.

ಗೌಡರ ಆಟ ಬಲ್ಲವರಾರು?: ಮಗನೊಂದಿಗೆ ಮಾತುಕತೆ ಜೋರು!

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವೆ ಎಂದು ಉತ್ತರಿಸಿದ ದೇವೇಗೌಡ, ಬಿಜೆಪಿಯ ಯಾವ ತಂತ್ರಗಳು ಸಫಲ ಆಗಲ್ಲ. ಪರಿಸ್ಥಿತಿ ಕೈ ಮೀರದಂತೆ ಎಲ್ಲ ರೀತಿ ಎಚ್ಚರ ವಹಿಸಲಾಗುತ್ತಿದೆ.ನೀವೇನು ಚಿಂತೆ ಮಾಡಬೇಡಿ ಎಂದಿದ್ದಾರೆ. ದೇವೇಗೌಡರಿಗೆ ದೂರವಾಣಿಯಲ್ಲಿ ಅಭಯ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ ಪಕ್ಷದ ಮುಖಂಡರು ಎಲ್ಲ ಮಾಹಿತಿ ಪಡೆದುಕೊಂಡಿದ್ದು ಕಾದುನೋಡೋಣ ಎಂದಿದ್ದಾರೆ.