Ballari: ಒಂದ್ಕಾಲದಲ್ಲಿ ಬಿಜೆಪಿಯಲ್ಲಿ ಮೆರೆದ್ರೂ ಈಗ ಕೇಳೋರೇ ಇಲ್ಲ: ಕಂಗಾಲಾದ ಗಣಿಧಣಿ ಜನಾರ್ದನ ರೆಡ್ಡಿ..!
* ರಾಜಕೀಯಕ್ಕೆ ಮತ್ತೆ ಬರಲು ಹಾತೊರೆಯುತ್ತಿರೋ ಜನಾರ್ದನ ರೆಡ್ಡಿ:
* ಬಿಜೆಪಿಯಿಂದ ಯಾವುದೇ ನಿರೀಕ್ಷಿತ ಉತ್ತರವಿಲ್ಲದೇ ಕಂಗಾಲು
* ಒಂದು ಕಾಲದ ಕಿಂಗ್ ಮೇಕರ್ ಇವತ್ತು ಕೇಳೋರಿಲ್ಲ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ(ಏ.24): ಒಂದು ಕಾಲದಲ್ಲಿ ಪರೋಕ್ಷವಾಗಿ ದಕ್ಷಿಣ ಭಾರತದಲ್ಲಿ(South India) ಅದರಲ್ಲೂ ಕರ್ನಾಟಕದಲ್ಲಿ(Karnataka) ಬಿಜೆಪಿ ಬರಲು ಕಾರಣರಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ(Gali Janardhana Reddy) ಇದೀಗ ಬಿಜೆಪಿ ಬರಲು ಹರಸಾಹಸ ಪಡುತ್ತಿದ್ರೂ ಪಕ್ಷದಲ್ಲಿ ಯಾವುದೇ ಮನ್ನಣೆ ನೀಡ್ತಿಲ್ಲ. ಒಂದೇ ವಾರದಲ್ಲಿ ರಾಜ್ಯ ಮತ್ತು ವಿಭಾಗೀಯ ಕಾರ್ಯಕಾರಣಿ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ನಡೆದ್ರೂ ಜನಾರ್ದನ ರೆಡ್ಡಿ ಪಕ್ಷಕ್ಕೆ ಕರೆ ತರೋ ವಿಚಾರ ಕನಿಷ್ಠ ಚರ್ಚೆಗೆ ಬರಲೇ ಇಲ್ಲ..
ಬಿಜೆಪಿಯಲ್ಲಿ ಮೆರೆದ್ರೂ ಇದೀಗ ಕೇಳೋರಿಲ್ಲ
ಹೌದು, ಅದು 1999ನೇ ಸಾರ್ವತ್ರಿಕ ಚುನಾವಣೆ(General Election-1999) ಆಗ ಬಳ್ಳಾರಿಯಂದ್ರೇ(Ballari) ಕಾಂಗ್ರೆಸ್. ಕಾಂಗ್ರೆಸ್(Congress) ಅಂದ್ರೇ ಬಳ್ಳಾರಿ ಅನ್ನೋ ಕಾಲವದು. ಆಗ ರಾಜಕೀಯ(Politics) ಮೇಲಾಟದಲ್ಲಿ ಸುಷ್ಮಾ ಸ್ವರಾಜ್ ಮತ್ತು ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿದ್ರು. ಆಗ ಜನಾರ್ದನ ರೆಡ್ಡಿ & ರಾಮುಲು(B Sriramulu) ಟೀಂ ರಾಜಕೀಯ ನೆಲೆ ಕಟ್ಟಿಕೊಳ್ಳಲು ಪ್ರಾರಂಭಿಸಿದ್ರು. ಅಂದಿನ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಮತ್ತು ಶ್ರೀರಾಮುಲು ಇಬ್ಬರು ಸೋತ್ರು. ಆದ್ರೇ ಜನರ ಮನಸ್ಸು ಒಂದಷ್ಟು ಗೆದ್ರು. ಹೀಗಾಗಿ 1999ರಲ್ಲಿ ಸೋತ್ರು. 2004 ರ ಚುನಾವಣೆಯಲ್ಲಿ ಶ್ರೀರಾಮುಲು ಮೊದಲ ಬಾರಿ ಶಾಸಕರಾದ್ರೇ ಜನಾರ್ದನ ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಸಂಸದರಾದ್ರು. ಈ ಮೂಲಕ ಬಿಜೆಪಿಯಲ್ಲಿ ಗಟ್ಟಿಯಾದ ರೆಡ್ಡಿ ಸಹೋದರರು 2008ರ ಚುನಾವಣೆಯಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟೋ ಮೂಲಕ ಬಳ್ಳಾರಿ ಅಷ್ಟೇ ಅಲ್ಲ ಇಡೀ ರಾಜ್ಯ ಬಿಜೆಪಿಯಲ್ಲಿ ಹಿಡಿತ ಸಾದಿಸಿದ್ರು..
ಜನಾರ್ದನ ರೆಡ್ಡಿ ಮಾಡಿದಷ್ಟು ಅಭಿವೃದ್ಧಿ ನಾನು ಮಾಡೋಕೆ ಆಗಿಲ್ಲ: ಶ್ರೀರಾಮುಲು ಶ್ಲಾಘನೆ
ಹತ್ತಿದಷ್ಟೇ ವೇಗದಲ್ಲಿ ಇಳಿದ್ರು
ಇನ್ನೂ 2008ರಲ್ಲಿ ಬಿಜೆಪಿ ಸರ್ಕಾರ(BJP Government) ರಚನೆ ಮಾಡಲು ಕಾರಣಕರ್ತರಾದ ಹಿನ್ನೆಲೆ ಜನಾರ್ದನ ರೆಡ್ಡಿ ಶ್ರೀರಾಮುಲು, ಕರುಣಾಕರ ರೆಡ್ಡಿ ಮಂತ್ರಿಯಾಗೋದ್ರ ಜೊತೆಗೆ ಸೋಮಶೇಖರ್ ರೆಡ್ಡಿ ಕೆಎಂಎಫ್ ಅಧ್ಯಕ್ಷರಾದ್ರು. ನಂತರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು(Jail) ಸೇರಿದ ಬಳಿಕ ನಿಧಾನವಾಗಿ ರೆಡ್ಡಿ & ರಾಮುಲು ಟೀಂಗೆ ಬಿಜೆಪಿಯಲ್ಲಿ ಮರ್ಯಾದೆ ಕಡಿಮೆಯಾಯ್ತು. ಬಿಜೆಪಿ ಬಿಟ್ಟ ರಾಮುಲು ಮತ್ತೊಂದು ಪಕ್ಷ ಕಟ್ಟಿ 2013ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ತಾವು ಗೆದ್ರು ಆದ್ರೇ ತಾವು ಕಟ್ಟಿದ ಪಕ್ಷ ಮುಗ್ಗರಿಸಿತು. ನಂತರ ಅನಿವಾರ್ಯವಾಗಿ ಬಿಜೆಪಿಗೆ ಸೇರ್ಪಡೆಯಾಗೋ ಮೂಲಕ ರಾಮುಲು ಒಂದಷ್ಟು ಪಕ್ಷಕ್ಕೆ ಹತ್ತಿರವಾದರು. 2008 ರಲ್ಲಿ ಮೆರೆದ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಿಜೆಪಿಯಲ್ಲಿ ಕೆಳೋರೇ ಇಲ್ಲದಂತಾಯ್ತು. 2018 ರಲ್ಲಿ ಕರುಣಾಕರ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಗೆದ್ದರೂ, ಪಕ್ಷದಲ್ಲಿ ಹೆಚ್ಚು ಪ್ರಭಾವ ಇಲ್ಲ ಎನ್ನಲಾಗ್ತಿದೆ.
ವಾರದಲ್ಲಿ ಎರಡೆರಡು ಕಾರ್ಯಕಾರಣಿ ನಡೆದ್ರೂ ಚರ್ಚೆಯಿಲ್ಲ
ಇನ್ನು ಕಳೆದ ವಾರ ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಿಣಿ ಆಯ್ತು. ಅದಾದ ಬಳಿಕ ಮೊನ್ನೆ ಬಳ್ಳಾರಿಯಲ್ಲಿ ವಿಭಾಗ ಮಟ್ಟದ ಕಾರ್ಯಕಾರಿಣಿ ಆಯ್ತು. ಆದ್ರೇ ಈ ಎರಡು ಸಭೆಯಲ್ಲಿ ಜನಾರ್ದನ ರೆಡ್ಡಿ ರಾಜಕಾರಣಕ್ಕೆ ಮರು ಎಂಟ್ರಿ ಬಗ್ಗೆ ಪ್ರಸ್ತಾಪವೇ ಆಗಲಿಲ್ಲವಂತೆ ಈ ಕುರಿತು ಶ್ರೀರಾಮುಲು ಅವರೇ ಸ್ಪಷ್ಟ ಪಡಿಸಿದ್ದಾರೆ.
Royalty Tax Fraud: ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಕೇಸ್‌ಗೆ ಸೂಚನೆ
ಕಾರ್ಯಕಾರಿಣಿಯಲ್ಲಿ ಜನಾರ್ದನ ರೆಡ್ಡಿ ಬಗ್ಗೆ ಚರ್ಚೆಯಾಗಿ ಗ್ರೀನ್ ಸಿಗ್ನಲ್ ಸಿಗ್ನಲ್ ಸಿಗುತ್ತೆ ಎಂದುಕೊಂಡಿದ್ದ ರೆಡ್ಡಿ & ಟೀಂಗೆ ಭಾರೀ ಮುಖಭಂಗವಾಗಿದೆ. ರಾಜ್ಯ ಕಾರ್ಯಕಾರಿಣಿಯಲ್ಲಿ ಅಗಲಿಲ್ಲವಾದ್ರೂ ಬಳ್ಳಾರಿಯಲ್ಲಿ ನಡೆದ ವಿಭಾಗ ಮಟ್ಟದ ಕಾರ್ಯಕಾರಣಿಯಲ್ಲಾದ್ರೂ ಚರ್ಚೆಯಾಗ್ತದೆ ಎನ್ನುವ ಆಶಾ ಭಾವನೆ ಇತ್ತು ಆದರೇ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯಕ್ಕೆ ಬರೋ ವಿಚಾರ ಇದು ಸ್ಥಳೀಯ ನಾಯಕರಾದ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್‌ಗೆ ಬಿಟ್ಟ ವಿಚಾರವೆಂದು ರಾಜ್ಯಾಧ್ಯಕ್ಷ ನಣಿನ್ ಕುಮಾರ್ ಕಟೀಲ್(Nalin Kumar Kateel) ಮಾರ್ಮಿಕವಾಗಿ ಹೇಳೋ ಮೂಲಕ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸಲಿಲ್ಲ..
ಹತ್ತು ವರ್ಷ ಬಳ್ಳಾರಿಯಿಂದ ದೂರವಿದ್ದ ಜನಾರ್ದನ ರೆಡ್ಡಿ
ಅಕ್ರಮ ಗಣಿಗಾರಿಕೆ(Illegal Mining Case) ಪ್ರಕರಣದಲ್ಲಿ ಸಿಲುಕಿ, ಹತ್ತು ವರ್ಷ ಬಳ್ಳಾರಿಯಿಂದ ಹೊರಗಿದ್ದ ಜನಾರ್ದನ ರೆಡ್ಡಿ ಕಳೆದ ಆರು ತಿಂಗಳ ಹಿಂದೆ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್(Supreme Court) ಅನುಮತಿ ಕೊಟ್ಟಿತ್ತು. ಅದರ ಬೆನ್ನಲ್ಲೇ ರೆಡ್ಡಿ ಮತ್ತೆ ಬಿಜೆಪಿಯಲ್ಲಿ ಸಕ್ರೀಯವಾಗೋ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ರು. ಈ ಕುರಿತು ದೆಹಲಿಯಲ್ಲಿ ರೆಡ್ಡಿ ಆಪ್ತ ರಾಮುಲು ವರಿಷ್ಠರನ್ನ ಕಂಡು ಮನವಿ ಮಾಡಿದ್ರು. ಆದ್ರೇ ಯಾವುದೇ ಮನ್ನಣೆ ಸಿಕ್ಕಿರಲಿಲ್ಲ. ಕಾರ್ಯಕಾರಣಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗತ್ತದೆಂದು ರೆಡ್ಡಿ ಟೀಂ ನಿರೀಕ್ಷೆ ಇತ್ತು. ಆದ್ರೇ ರೆಡ್ಡಿ ಬಗ್ಗೆ ಯಾವುದೇ ಚರ್ಚೆ ನಡೆಯದೇ ಇರೋದು ಚರ್ಚೆಗೆ ಗ್ರಾಸವಾಗಿದೆ.