ಇಡೀ ಜಾಗತಿಕ ಮಟ್ಟದಲ್ಲಿ ಬೀಗುತ್ತಿದ್ದ ದೇಶಗಳೇ ಕೊರೋನಾ ನಂತರದಲ್ಲಿ ಅಧೋಗತಿಗಿಳಿದಿವೆ. ಸಂದರ್ಭದಲ್ಲಿ ಭಾರತ ವಿಶ್ವದ ಪ್ರಭಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಇಷ್ಟೊಂದು ಗೌರವ ಸಿಗುತ್ತಿದೆ ಎಂದರೆ ಅದಕ್ಕೆ ಮೋದಿ ನಾಯಕತ್ವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಬೆಸೆದಿರುವ ಬಾಂಧವ್ಯ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ನೀಡಿದರು. 

ಹಾಸನ (ಫೆ.22): ಇಡೀ ಜಾಗತಿಕ ಮಟ್ಟದಲ್ಲಿ ಬೀಗುತ್ತಿದ್ದ ದೇಶಗಳೇ ಕೊರೋನಾ ನಂತರದಲ್ಲಿ ಅಧೋಗತಿಗಿಳಿದಿವೆ. ಸಂದರ್ಭದಲ್ಲಿ ಭಾರತ ವಿಶ್ವದ ಪ್ರಭಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಇಷ್ಟೊಂದು ಗೌರವ ಸಿಗುತ್ತಿದೆ ಎಂದರೆ ಅದಕ್ಕೆ ಮೋದಿ ನಾಯಕತ್ವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಬೆಸೆದಿರುವ ಬಾಂಧವ್ಯ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ನೀಡಿದರು. 

ಬಿ.ಎಂ. ರಸ್ತೆ ಬಳಿ ಇರುವ ಶ್ರೀಕೃಷ್ಣ ಹೊಟೇಲ್‌ ಹಿಂಭಾಗ ಜಿಲ್ಲೆಯ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಬೂತ್‌ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವ ಕೋವಿಡ್‌ನಿಂದ ಕಂಗೆಟ್ಟಾಗ ಭಾರತ ಯಶಸ್ವಿಯಾಗಿ ಸಾಂಕ್ರಾಮಿಕ ಸೋಂಕನ್ನು ಎದುರಿಸಿತು. ಅಮೆರಿಕಾದಲ್ಲಿ ಶೇ 76ರಷ್ಟು, ಯುರೋಪ್‌ ರಾಷ್ಟ್ರಗಳಲ್ಲಿ ಶೇ 67 ಮಂದಿಗೆ ಮಾತ್ರ ಕೋವಿಡ್‌ ಲಸಿಕೆ ಹಾಕಲು ಸಾಧ್ಯವಾದರೆ, ಭಾರತದಲ್ಲಿ ಶೇ 100ರಷ್ಟು ಉಚಿತವಾಗಿ ಎರಡು ಡೋಸ್‌ ಲಸಿಕೆ ನೀಡಲಾಯಿತು. 

ಮುಂದಿನ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಖಚಿತ: ಡಿ.ಕೆ.ಶಿವಕುಮಾರ್‌

ರಷ್ಯಾ ಉಕ್ರೇನ್‌ ಯುದ್ಧದ ವೇಳೆ ಪ್ರಧಾನಿ ಎರಡೂ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಯುದ್ಧಕ್ಕೆ ವಿರಾಮ ನೀಡಿ, ಯುದ್ಧಭೂಮಿಯಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಯಿತು. ಭಾರತ 200 ವರ್ಷಗಳ ಕಾಲ ಬ್ರಿಟಿಷರ ದಾಸ್ಯದಲ್ಲಿತ್ತು. ಪ್ರಸ್ತುತ ಕಾಲಚಕ್ರ ಬದಲಾಗಿದ್ದು, ಬ್ರಿಟನ್‌ ದೇಶವನ್ನು ಹಿಂದಿಕ್ಕಿ ಭಾರತ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಮೋದಿಯವರ ಅಂತಾರಾಷ್ಟ್ರೀಯ ಬಾಂದವ್ಯ ನಿರ್ವಹಣೆ ಹಾಗೂ ಅವರ ನಾಯಕತ್ವವೇ ಕಾರಣ ಎಂದು ಬಣ್ಣಿಸಿದರು.

ಕಾಂಗ್ರೆಸ್‌ ಪಕ್ಷ, ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತ ಬಂದಿರುವುದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ಸ್ಥಾಪನೆ ಮಾಡಿದ್ದರು. ಹಾಸನ ಶಿವಮೊಗ್ಗ ಕೆಂಪೇಗೌಡ ಟರ್ಮಿನಲ್‌ 2 ಅಭಿವೃದ್ಧಿ ಮಾಡಿದ್ದೇವೆ. ವಂದೇ ಮಾತರಂ ರೈಲ್ವೆ ಮಾಡಿದ್ದೇವೆ. ಹಾಸನ ಜಿಲ್ಲೆಯನ್ನು ಟೆಕ್ಸ್‌ಟೈಲ್‌ ಸೆಂಟರ್‌ ಆಗಿ ಅಭಿವೃದ್ಧಿಪಡಿಸಲಾಗುವುದು. ಬಿಜೆಪಿ ಸರ್ಕಾರದ ಅಭಿವೃದ್ಧಿ ಮಾನದಂಡವನ್ನಿಟ್ಟುಕೊಂಡು ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಶಕ್ತಿ ತುಂಬುವಂತೆ ಕರೆ ಕೊಟ್ಟರು.

ಸಿದ್ದು ಅಧಿಕಾರಕ್ಕೆ ಬರಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮಾತನಾಡುತ್ತಾ, ಕಾಂಗ್ರೆಸ್‌ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಏನೇ ಕಸರತ್ತು ಮಾಡಿದರೂ ಅ​ಧಿಕಾರಕ್ಕೆ ಬರಲ್ಲ. ಜೆಡಿಎಸ್‌ ಮುಳುಗುತ್ತಿರುವ ಹಡಗು. ಇಂತಹ ವೇಳೆ ಬಿಜೆಪಿ ಮಾತ್ರ ಸದೃಢ, ಸಮರ್ಥ ಸರ್ಕಾರ ನೀಡಲು ಸಾಧ್ಯ. ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ದಿನೇದಿನೆ ಮುಳುಗಿ ಹೋಗುತ್ತಿದೆ. ಇನ್ನು ಬಿಜೆಪಿ ಅ​ಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ಉಜ್ವಲ್‌ ಯೋಜನೆಯಡಿ ಗ್ಯಾಸ್‌ ಆಯುಷ್‌ ಮಾನ್‌ ಭಾರತ್‌ ಯೋಜನೆ ನೀಡಿದ್ದೇವೆ. ಕೇಂದ್ರ ಬಿಜೆಪಿ ಸರ್ಕಾರದ ಅವ​ಧಿಯಲ್ಲಿ ಬೆಂಗಳೂರು - ಮೈಸೂರು ಅಭಿವೃದ್ಧಿ ಮಾಡಿಕೊಟ್ಟಿದ್ದೇವೆ. ಇದಲ್ಲದೇ ಅನೇಕ ಅಭಿವೃದ್ಧಿ ಕೆಲಸಗಳು ಬಿಜೆಪಿಯಿಂದ ಆಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್‌ ಕಟಿಲ್‌ ಮಾತನಾಡಿ, ಈ ದಿನ ಹಾಸನ ಜಿಲ್ಲೆ ಬದಲಾವಣೆ ಕಂಡು ಹಾಸನ ಜಿಲ್ಲೆ ಕೇಸರಿಮಯವಾಯವಾಗಿದೆ. ಬೇಲೂರು ಹಾಗೂ ಹಾಸನ ನಗರದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನೋಡಿ ಮತ್ತೊಮ್ಮೆ ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಪತಾಕೆ ಹಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಮಾತನಾಡಿ, 1999 ರಲ್ಲಿ ಹಾಸನ ಜಿಲ್ಲೆಯ ಜನ ಬಿಜೆಪಿಗೆ 4 ಸ್ಥಾನ ಗೆಲ್ಲಿಸಿಕೊಟ್ಟಿದ್ದರು. ಪ್ರಧಾನಿ ಭಾರತದಲ್ಲಿ ವಿಶ್ವಕ್ಕೆ ಗೌರವ ತಂದುಕೊಡುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಉತ್ತಮ ಬಜೆಟ್‌ ನೀಡಿದ್ದಾರೆ. 

ಒಡೆದಾಳು​ವುದು ಕಾಂಗ್ರೆ​ಸ್‌ನ ಟ್ರೇಡ್‌ ಮಾರ್ಕ್: ಜೆ.ಪಿ.ನಡ್ಡಾ

ಹಾಸನ ಜಿಲ್ಲೆಯ ರಾಗಿ ಬೆಳೆಯುವ ರೈತರಿಗೆ ಕ್ವಿಂಟಾಲ್‌ಗೆ 3500 ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ್ದೇವೆ. ಕರ್ನಾಟಕ ರಾಜ್ಯದ 52 ಲಕ್ಷ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ 6 ಸಾವಿರ ರಾಜ್ಯ ಸರ್ಕಾರ 4 ಸಾವಿರ ರುಗೌರವಧನ ನೀಡುತ್ತಿದ್ದೇವೆ. ಇನ್ನೂ 60 ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ 140 ಸ್ಥಾನ, ಹಾಸನ ಜಿಲ್ಲೆಯಲ್ಲಿ 7 ಸ್ಥಾನ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ. ಬಿಜೆಪಿ ಜಿಲ್ಲಾಧ್ಯಕ್ಷರಾದ ಹುಲ್ಲಹಳ್ಳಿ ಸುರೇಶ್‌, ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ. ಮೈ.ವಿ. ರವಿಶಂಕರ್‌, ಯೋಗಾರಮೇಶ್‌, ಸಿದ್ದೇಶ್‌ ನಾಗೇಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.