ಕಾಂಗ್ರೆಸ್‌ ದೇಶದಲ್ಲಿ ನಾಯಕತ್ವ ಇಲ್ಲದ ಪಕ್ಷ. ಸಮಾಜ ಒಡೆಯುವ ಪಕ್ಷ. ದೇಶವನ್ನು ಇಬ್ಭಾಗಿಸಿದವರನ್ನು ಅಕ್ಕಪಕ್ಕದಲ್ಲಿ ಇಟ್ಟುಕೊಂಡು ರಾಹುಲ್‌ ಗಾಂಧಿಯವರು ಭಾರತ ಜೋಡೋ ಯಾತ್ರೆಗೆ ಹೊರಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಲೇವಡಿ ಮಾಡಿದ್ದಾರೆ.

ವಿಜಯಪುರ (ಜ.22): ಕಾಂಗ್ರೆಸ್‌ ದೇಶದಲ್ಲಿ ನಾಯಕತ್ವ ಇಲ್ಲದ ಪಕ್ಷ. ಸಮಾಜ ಒಡೆಯುವ ಪಕ್ಷ. ದೇಶವನ್ನು ಇಬ್ಭಾಗಿಸಿದವರನ್ನು ಅಕ್ಕಪಕ್ಕದಲ್ಲಿ ಇಟ್ಟುಕೊಂಡು ರಾಹುಲ್‌ ಗಾಂಧಿಯವರು ಭಾರತ ಜೋಡೋ ಯಾತ್ರೆಗೆ ಹೊರಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಲೇವಡಿ ಮಾಡಿದ್ದಾರೆ.

ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ‘ವಿಜಯ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಕಲರ ವಿಕಾಸವೇ ಬಿಜೆಪಿಯ ಮೂಲ ಮಂತ್ರವಾಗಿದೆ. ಸಮಾಜ ಒಡೆಯುವುದು, ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್‌ ಇತಿಹಾಸ. ಬಿಜೆಪಿ ವಿಕಾಸದ ಸಂಕೇತವಾದರೆ, ಕಾಂಗ್ರೆಸ್‌ ವಿನಾಶದ ಸಂಕೇತವಾಗಿದೆ. ಪಾರದರ್ಶಕತೆ, ವಿಕಾಸ ಎನ್ನುವುದೇ ಬಿಜೆಪಿಯ ಇನ್ನೊಂದು ಹೆಸರು. ಭ್ರಷ್ಟಾಚಾರ, ಕಮಿಷನ್‌ ಎಂದರೆ ಕಾಂಗ್ರೆಸ್ಸಿನ ಮತ್ತೊಂದು ಹೆಸರು. ಕಾಂಗ್ರೆಸ್ಸಿನವರಿಗೆ ಕೆಲಸ ಮಾಡುವುದು ಬೇಕಿಲ್ಲ. ಅವರ ಅಜೆಂಡಾ ಕೇವಲ ಕುರ್ಚಿ ಆಗಿದೆ. ಜನಪರ ಕೆಲಸ ಮಾಡುವ ಬಿಜೆಪಿಗೆ ಇನ್ನಷ್ಟುಕೆಲಸ ನೀಡಿ, ಕಾಂಗ್ರೆಸ್ಸನ್ನು ಮನೆಗೆ ಕಳುಹಿಸಿ ಎಂದು ಹೇಳಿದರು.

Bengaluru: ಆರು ವಾರದ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಅರೆಸ್ಟ್!

ಗಮನಾರ್ಹ ಆರ್ಥಿಕ ಪ್ರಗತಿ: ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಜಾಗತಿಕ ವಹಿವಾಟಿನಲ್ಲಿ ಭಾರತದ ಪಾಲು ಶೇ.40 ರಷ್ಟಿದೆ. ಆ ಮೂಲಕ ಭಾರತ ಪ್ರಕಾಶಿಸುತ್ತಿದೆ. ಪ್ರತಿಪಕ್ಷಗಳು ಈ ಹಿಂದೆ ಡಿಜಿಟಲ್‌ ಕ್ರಾಂತಿ ಅಸಾಧ್ಯ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್‌ ಇರುವುದಿಲ್ಲ, ಆಧಾರ್‌ ಲಿಂಕ್‌ ಅಸಾಧ್ಯ ಎನ್ನುತ್ತಿದ್ದವು. ಆದರೀಗ, ಡಿಜಿಟಲ್‌ ಮಾಧ್ಯಮದ ಮೂಲಕ ನೇರವಾಗಿ ವಿವಿಧ ಯೋಜನಾ ಫಲಾನುಭವಿಗಳಿಗೆ . 25 ಲಕ್ಷ ಕೋಟಿಯನ್ನು ಅವರ ಖಾತೆಗೆ ಜಮಾವಣೆ ಮಾಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರಕ್ಕಿದೆ. ಇದು ಡಿಜಿಟಲ್‌ ಕ್ರಾಂತಿ ಎಂದು ಹೇಳಿದರು.

ಈ ಹಿಂದೆ ಕೇವಲ 350 ಕಿ.ಮೀ. ಆಪ್ಟಿಕಲ್‌ ಫೈಬರ್‌ ಜಾಲವಿತ್ತು. ಈಗ ಭಾರತದಲ್ಲಿ 2.83 ಲಕ್ಷ ಕಿ.ಮೀ. ಆಪ್ಟಿಕಲ್‌ ಫೈಬರ್‌ ಜಾಲವಿದೆ. 2014ರಲ್ಲಿ ಶೇ.92 ರಷ್ಟುಪ್ರಮಾಣದಲ್ಲಿ ಮೊಬೈಲ್‌ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಶೇ.96 ರಷ್ಟು ಪ್ರಮಾಣದಲ್ಲಿ ಮೊಬೈಲ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ ಎಂದರು. ಆರು ಲಕ್ಷ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಭಾರತ ಉತ್ಪಾದಿಸುತ್ತಿದೆ. ಕಬ್ಬಿಣ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತ ಇಂದು ದ್ವಿತೀಯ ಸ್ಥಾನದಲ್ಲಿದೆ. ಜಪಾನ್‌ ರಾಷ್ಟ್ರವನ್ನು ಹಿಂದಿಕ್ಕಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಿದೆ. 

ಸಿಎಂ ಬೊಮ್ಮಾಯಿ ಮನೆ ಹಾಳಾಗ ಎಂದ ಸಿದ್ದುಗೆ ತಿರುಗೇಟು ನೀಡಿದ ಸಚಿವ ಸೋಮಣ್ಣ

ಅರ್ಥ ವ್ಯವಸ್ಥೆಯಲ್ಲಿ ನಮ್ಮನ್ನು ಆಳಿದ ಬ್ರಿಟನ್‌ ಅನ್ನು ಹಿಂದಿಕ್ಕಿ ಐದನೇ ಸ್ಥಾನದಲ್ಲಿದೆ. ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ 12 ಕೋಟಿ, ಕರ್ನಾಟಕದಲ್ಲಿ 23 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದರು. ಜನರ ಆರೋಗ್ಯದ ಕಡೆಗೆ ಬಿಜೆಪಿ ಕಾಳಜಿ ಹೊಂದಿದೆ. ಇದರಿಂದಾಗಿ ಮೋದಿಯವರು ಆಯುಷ್ಮಾನ್‌ ಭಾರತ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಗಂಭೀರ ಸ್ವರೂಪದ ರೋಗಗಳ ಚಿಕಿತ್ಸೆಗೆ ಈ ಯೋಜನೆ ಅಡಿ ಪ್ರತಿ ವರ್ಷ ಬಡ ಕುಟುಂಬಗಳಿಗೆ 5 ಲಕ್ಷ ಹಣ ಒದಗಿಸಲಾಗುತ್ತದೆ. ಕರ್ನಾಟಕ ಸರ್ಕಾರವೂ ವೈದ್ಯಕೀಯ ಚಿಕಿತ್ಸೆಗೆ ಯಶಸ್ವಿನಿ ಯೋಜನೆ ಅನುಷ್ಠಾನಗೊಳಿಸಿದೆ ಎಂದರು.