ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವಾಗ್ದಾಳಿ
ಮಾಜಿ ಸಿಎಂ ಒಬ್ಬರು ನಾ ಕೊಟ್ಟೆ, ನಾ ಕೊಟ್ಟೆ ಅಂತಾರೆ. ಅನ್ನಭಾಗ್ಯ ಕೊಟ್ಟೆ ಅಂತ ಎದೆ ಬಡಕೋಂತಾರೆ. ಏನಾಗಿದೆಯೋ ಅನ್ನೋ ತರ ಬಡಕೊಂಡ್ರು ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸಿ.ಟಿ.ರವಿ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಮಾ.14): ಎಲ್ಲಾ ಕಡೆಗೆ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಕೇಳುವುದು ತಪ್ಪಲ್ಲ, ಪಕ್ಷ ಸಂಘಟನೆ ಮಾಡಿ ಟಿಕೆಟ್ ಕೇಳೋದು ಸರಿ. ಪಕ್ಷ ಸಂಘಟನೆ ಮಾಡದೆ ಟಿಕೆಟ್ ಕೇಳುವುದು ಸರಿ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ನಿನ್ನೆ(ಸೋಮವಾರ) ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಬಿಜೆಪಿ ವಿಜಯ ಸಂಕಲ್ಪಯಾತ್ರೆ ಅಂಗವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಜಮಖಂಡಿ ಮತಕ್ಷೇತ್ರದಲ್ಲಿ 21 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಎಂದ ಸಿ.ಟಿ ರವಿ, ಟಿಕೆಟ್ ಸಿಕ್ಕವರನ್ನು ಗೆಲ್ಲಿಸಿ ತರೋದು ಎಲ್ಲ ಆಕಾಂಕ್ಷಿಗಳ ಕರ್ತವ್ಯ ಎಂದು ಆಕಾಂಕ್ಷಿಗಳಿಗೆ ವೇದಿಕೆ ಭಾಷಣದ ಮೂಲಕವೇ ಚಾಟಿ ಬೀಸಿದರು.
ದೇವರು ವರ ಕೊಡಬೇಕಾದ್ರೆ ನೋಡಿ ಕೊಡಬೇಕು. ಹಾಗೆ ಟಿಕೆಟ್ ನೋಡಿ ಕೊಡಬೇಕು, ಗೆಲ್ಲುವಂತವರಿಗೆ ಟಿಕೆಟ್ ಕೊಡಬೇಕು. ಪಕ್ಷ ನಿಷ್ಠೆ ಇರುವವರಿಗೆ ಟಿಕೆಟ್ ನೀಡುತ್ತೇವೆ ಎಲ್ಲರೂ ಸಹಕರಿಸಿ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಕಿಸಿಯಲಿಲ್ಲ....
ಇನ್ನು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇದ್ದಾಗೇನು ಕಿಸಿಲಿಲ್ಲ. ಮಾಜಿ ಸಿಎಂ ಒಬ್ಬರು ನಾ ಕೊಟ್ಟೆ, ನಾ ಕೊಟ್ಟೆ ಅಂತಾರೆ. ಅನ್ನಭಾಗ್ಯ ಕೊಟ್ಟೆ ಅಂತ ಎದೆ ಬಡಕೋಂತಾರೆ. ಏನಾಗಿದೆಯೋ ಅನ್ನೋ ತರ ಬಡಕೊಂಡ್ರು ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಅಲ್ಲದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಅರ್ಕಾವತಿ ಹಗರಣ ನಡೆಯಿತು. ಹಗರಣ ನಡೆದಾಗ ನೀವೇ ಸಿಎಂ ಇದ್ರಿ,ನಿಮ್ಮ ಆಪ್ತ ಜಾರ್ಜ್, ಮಹಾದೇವಪ್ಪ ಇದ್ದರು. ಇದ್ದ ಮೂವರಲ್ಲಿ ಕದ್ದವರಾರು ಯಾರು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಜಾತಿ ನೋಡದೇ ಅಭಿವೃದ್ಧಿ ಮಾಡಿದ್ದು ಮೋದಿ ಮಾತ್ರ ಎಂದರು.
ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕರುಣಿಸಿದ್ದು ಕಾಂಗ್ರೆಸ್: ಸಿ.ಟಿ.ರವಿ
ಸಿದ್ದರಾಮಯ್ಯ ಅಲ್ಲ ಸಿದ್ದರಾಮುಲ್ಲಾಖಾನ್...
ಇನ್ನು ವೇದಿಕೆ ಭಾಷಣ ಮುಂದುವರೆಸಿದ ಸಿ.ಟಿ.ರವಿ ಅವರು, ದೇಶದ ಪ್ರಧಾನಿ ಮೋದಿ ಅಂತವರನ್ನು ಕೋಮುವಾದಿ ಅಂದರು ಸಿದ್ದರಾಮಯ್ಯ, ಶಾದಿಭಾಗ್ಯ ಜಾರಿಗೆ ತಂದದ್ದು ಕೋಮುವಾದ ಅಲ್ಲವೆ ? ಟಿಪ್ಪುಗೆ ಯಾವುದೇ ನಿಯತ್ತು ಇರಲಿಲ್ಲ. ಸಿದ್ದರಾಮಯ್ಯನವರು ಸಿದ್ದರಾಮಯ್ಯ ಆಗಾಕೆ ನೀವು ಲಾಯಕಲ್ಲ. ನೀವೇನಿದ್ರು ಸಿದ್ದರಾಮುಲ್ಲಾಖಾನ್ ಎಂದರು.
ಕಾಂಗ್ರೆಸ್ ನಿಯತ್ತು ಸುಳ್ಳು ಹೇಳಿ ಓಟ್ ಪಡೆಯೋಕೆ.
ಗ್ಯಾರಂಟಿ ಕಾರ್ಡ್ ಅಂತೆ ಏನು ಇಲ್ಲ. ಡಿಕೆಶಿ ಪವರ್ ಮಿನಿಸ್ಟರ್ ಆಗಿದ್ದಾಗ. ಗಿರಿಧರ ರೈ ಅನ್ನೋರು ಮಾತನಾಡಿ, ಮೂರು ದಿನ ಕರೆಂಟ್ ಇಲ್ಲ, ಕರೆಂಟ್ ಕೊಡಿ ಸರ್ ಅಂದ್ರು. ಡಿಕೆಶಿ ರಾತ್ರೋರಾತ್ರಿ ಅವರನ್ನು ಕರೆಯಿಸಿ ಕರೆಂಟ್ ನೀಡದೇ, ಅವರಿಗೆ ಕರೆಂಟ್ ಶಾಖ್ ಕೊಡಿಸಿದ್ರು. ಇದು ಕಾಂಗ್ರೆಸ್ ಹಣೆಬರಹ. ಇವರು ಅಧಿಕಾರ ಇದ್ದಾಗ ಕಿಸಿಯಲಿಲ್ಲ, ಈಗ ಕೊಡ್ತಿದಿವಿ ಅಂತಿದ್ದಾರೆ.ಕಾಂಗ್ರೆಸ್ ಎಕ್ಸಪೈರಿ ಡೇಟ್ ಮುಗಿದಿದೆ. ಕಾಂಗ್ರೆಸ್ ಗೂಟ ಕಿತುಕೊಂಡು ಹೋಗೋದೊಂದೆ ಬಾಕಿ ಎಂದರು.
ಜೆಡಿಎಸ್ ಟಿಕೆಟ್ ದೊಡ್ಡ ಗೌಡ್ರಗೆ, ಮದೀಗೌಡ್ರಗೆ ಸೀಮಿತ...
ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ. ರವಿ, ಜೆಡಿಎಸ್ ನಲ್ಲಿ ಟಿಕೆಟ್ ಏನೇ ಇದ್ರೂ ಮರೀಗೌಡ್ರ, ದೊಡ್ಡ ಗೌಡ್ರಿಗೆ. ಗೆಲ್ಲುವ ಕಡೆಗೆ ಮನೆಗೆ ಟಿಕೆಟ್ ಕೊಡ್ತಾರೆ. ಉಳಿದ ಕಡೆ ಬೇಕಾದವರಿಗೆ ಅಂತಾರೆ ಎಂದು ಹರಿಹಾಯ್ದರು. ಏನೇ ಆಗಲಿ ಈ ಬಾರಿ ಜಮಖಂಡಿಯಲ್ಲೂ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಏನೇ ಮಾಡಿದ್ರೂ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ, ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರು ಸಿದ್ದರಾಮಯ್ಯ ಏನು ಹೇಳುತ್ತಾರೋ ಅದರ ವಿರುದ್ಧವಾಗಿ ಹಿಂದೆಯೂ ಸಹ ನಡೆದಿದೆ ಎಂದರು.
ಯಡಿಯೂರಪ್ಪ ಅವರಪ್ಪರಾಣೆ ಸಿಎಂ ಆಗಲ್ಲ ಅಂದ್ರು, ಬಿಎಸ್ ವೈ ಸಿಎಂ ಆದರು. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗ್ತೀನಿ ಅಂದ್ರು, ಅವರು ಆಗಲಿಲ್ಲ. ಮೋದಿ ಪ್ರಧಾನಿ ಆಗೋಕೆ ಸಾಧ್ಯನೇ ಇಲ್ಲ ಅಂದಿದ್ರು, ಅವರು ಆದರು. ಈ ರಾಜ್ಯದಲ್ಲಿ ಅವರು ಏನು ಹೇಳ್ತಾರೋ ಅದರ ಉಲ್ಟಾ ಆಗುತ್ತೆ ಎಂದರು.
ಜಾರಕಿಹೊಳಿಗೆ ಕಾಂಗ್ರೆಸ್ ವರ್ಕಿಂಗ್ ಸ್ಟೈಲ್ ಗೊತ್ತಿದೆ...
ಇನ್ನು ಮತ್ತೊಂದು ಸಿಡಿ ಮೂಲಕ ಡಿಕೆಶಿ ನಮ್ಮ ಮಂತ್ರಿಯೊಬ್ಬರನ್ನ ಹೆದರಿಸುತ್ತಿದ್ದಾರೆಂದ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜಾರಕಿಹೊಳಿ ಅವರು ಮೊದಲು ಕಾಂಗ್ರೆಸನಲ್ಲಿ ಇದ್ದವರು, ಹೀಗಾಗಿ ಅವರಿಗೆ ಕಾಂಗ್ರೆಸ್ ವರ್ಕಿಂಗ್ ಸ್ಟೈಲ್ ಗೊತ್ತಿದೆ. ಅದಕ್ಕಾಗಿಯೇ ಅವರು ಹೀಗೆ ಹೇಳಿರಬಹುದು. ಈ ಬಗ್ಗೆ ನನ್ನತ್ರ ಮಾಹಿತಿ ಇಲ್ಲ ಎಂದು ಸಿ.ಟಿ.ರವಿ ಹೇಳಿದರು.
ಸಿದ್ದರಾಮಯ್ಯರಿಂದ ಬುರುಡೆ ಬಿಡುವ ಕೆಲಸ: ಸಿ.ಟಿ.ರವಿ ಆರೋಪ
ನಮ್ಮ ರಾಮನಿಗೆ ಕಿವಿ ಕೇಳುತ್ತೆ...
ಇತ್ತ ಈಶ್ವರಪ್ಪ ಅಲ್ಲಾಗೆ ಕಿವಿ ಕೇಳಲ್ಲ ಎಂಬ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ನನಗಂತೂ ಗೊತ್ತಿಲ್ಲ. ನಮ್ಮ ರಾಮನಿಗೆ ಮಾತ್ರ ಕಿವಿ ಕೇಳುತ್ತೆ ಎಂದ ಅವರು, ಕೇಳುತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಅವರಿಗೆ ಕೇಳುತ್ತೇ ಇಲ್ಲಾ ಅಂತ ನಾನು ಹೇಗೆ ಹೇಳೋಕೆ ಆಗುತ್ತೆ. ಆದರೆ ನಮ್ಮ ರಾಮನಿಗೆ ಮಾತ್ರ ಕಿವಿ ಕೇಳುತ್ತೇ ಎಂದರು.
ಹಗರಣಗಳು ಆಗಿದ್ದೇ ಕಾಂಗ್ರೆಸ್ ಕಾಲದಲ್ಲಿ...
ಇನ್ನು ತೆಲಂಗಾಣದಲ್ಲಿ ಅಮಿತ್ ಶಾ ಆಗಮನ ವೇಳೆ ವಾಷಿಂಗ್ ಪೌಡರ್ ಜಾಹೀರಾತಿನಲ್ಲಿ ಬಾಲಕಿ ಬದಲಾಗಿ ಮಾಡಾಳ್ ವಿರುಪಾಕ್ಷಪ್ಪ ಫೋಟೋ ಹಾಕಿ ಪ್ರದರ್ಶನ ಮಾಡಿರೋ ಬಗ್ಗೆ ಮಾತನಾಡಿದ ಸಿ.ಟಿ.ರವಿ ಅವರು, ಯಾಕೆ ಆಂಜನೇಯ, ಮಹಾದೇವಪ್ಪ, ಸಿದ್ದರಾಮಯ್ಯ ಇವರೆಲ್ಲರಿಗೂ ವಾಶ್ ಮಾಡೋದು ಬೇಡವಾ ಎಂದು ಪ್ರಶ್ನಿಸಿದರು. ಇನ್ನು ಜನ ಅವರನ್ನ ಯಾಕೆ 2018ರಲ್ಲಿ ಸೋಲಿಸಿದ್ದು. ಈ ರೀಡೋ ಹಗರಣ, ಹಾಸಿಗೆ ದಿಂಬು ಹಗರಣ, ಮರಳು ಹಗರಣ ಸಾಲದ್ದಕ್ಕೆ ನೀರಾವರಿ ಇಲಾಖೆ ಹಗರಣಗಳಿಂದಲೇ ಕಾಂಗ್ರೆಸ್ ಸೋತಿದ್ದು ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.