Anti Conversion Bill: ಓದದೇ ಸಹಿ ಹಾಕಿದೆ ಎನ್ನುವ ಸಿದ್ದು ಹೆಬ್ಬೆಟ್ಟಿನವರಾ?: ಸಿ.ಟಿ.ರವಿ ಪ್ರಶ್ನೆ

*    ಮತಾಂತರ ನಿಷೇಧ ಬಿಲ್‌ ಜಾರಿಗೆ ಸಿದ್ದರಾಮಯ್ಯ ಸಹಿ 
*    ದಡ್ಡತನ ಎಂದು ಒಪ್ಪಲು ಸಾಧ್ಯವಿಲ್ಲ, ಮೂರ್ಖರಾಗಿಸಲು ಆಗುವುದಿಲ್ಲ
*    ಮತಾಂತರ ನಿಷೇಧ ವಿಧೇಯಕ ವಿರುದ್ಧ ಕಾಂಗ್ರೆಸ್‌ ಉಗ್ರ ಹೋರಾಟ
 

BJP National General Secretary CT Ravi React on Siddaramaiah Statement grg

ಚಿಕ್ಕಮಗಳೂರು(ಡಿ.25): ಒಂದು ಲೆಟರ್‌ ನೀಡಬೇಕಾದರೆ ಓದಿ ಸಹಿ ಹಾಕುತ್ತೇವೆ. ಆದರೆ, ಮತಾಂತರ ನಿಷೇಧದಂತಹ ಬಿಲ್‌(Anti Conversion Bill) ಜಾರಿಗೆ ತರಬೇಕಾದರೆ ಓದದೇ ಸಹಿ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು(Siddaramaiah) ಹೇಳುವ ಮೂಲಕ ರಾಜ್ಯದ ಮರ್ಯಾದೆ ತೆಗೆಯುತ್ತಿದ್ದಾರೆ ಎಂದು ಬಿಜೆಪಿ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊತ್ತಿಲ್ಲದೇ ಸಹಿ ಹಾಕಿದೆ ಎಂದರೆ ಸಿದ್ದರಾಮಯ್ಯನವರು ಹೆಬ್ಬೆಟ್ಟಿನವರಾ? ಹೆಬ್ಬೆಟ್ಟಿನವರಾದರೂ ಏನು ಬರೆದಿದೆ ಮಗಾ ಎಂದು ಕೇಳುತ್ತಾರೆ. ಸಿದ್ದರಾಮಯ್ಯನವರು ಲಾ ಗ್ರಾಜುಯೇಟ್‌, ಪ್ರಾಕ್ಟೀಸಿಂಗ್‌ ಲಾಯರ್‌. ಎಲ್ಲರ ಜಾತಕದ ಬಗ್ಗೆಯೂ ನನಗೆ ಗೊತ್ತಿದೆ ಎಂದು ಭವಿಷ್ಯ, ಭೂತ, ವರ್ತಮಾನದ ಬಗ್ಗೆ ಮಾತನಾಡುವಂತ ದೊಡ್ಡ ನಾಯಕರು. ಇಂತಹ ನಾಯಕರು ನಾನು ಓದದೇ ಸಹಿ ಹಾಕಿದೆ ಎಂದರೆ ಇದಕ್ಕೆ ಏನು ಹೇಳಬೇಕು. ದಡ್ಡತನ ಎಂದು ಯಾರೂ ಒಪ್ಪಲು ಸಾಧ್ಯವಿಲ್ಲ. ಎಲ್ಲರನ್ನು ಮೂರ್ಖರನ್ನಾಗಿಸಲು ಆಗುವುದಿಲ್ಲ ಎಂದರು.

Siddu VS HDK:ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ

ಈ ರೀತಿ ಓದದೇ ಇನ್ನೇನಕ್ಕೆ ಸಹಿ(Signature) ಹಾಕಿದ್ದಾರೊ ಗೊತ್ತಿಲ್ಲ. ಓದದೇ ಸಹಿ ಹಾಕಿದೆ ಎಂದರೆ ಯಾವ ಸ್ಥಾನಕ್ಕಾದರೂ ಮಾರ್ಯಾದೆ ಬರುತ್ತದಾ ಆ ಪೋಸ್ಟಿಗೆ ಲಾಯಕ್ಕಾ ಎಂದು ಅವರೆ ಪ್ರಶ್ನೆ ಮಾಡಿಕೊಳ್ಳಬೇಕು. ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದ್ದರೂ ಯಾರು ಬಲತ್ಕಾರವಾಗಿ ಮತಾಂತರ(Conversion) ಮಾಡುತ್ತಾರೋ ಅವರಿಗೆ ಶಿಕ್ಷೆ ಅನ್ವಯ ಆಗುತ್ತದೆ. ಅವರವರ ಧರ್ಮದ ಪ್ರಕಾರ ನಡೆದುಕೊಳ್ಳುವವರು ಭಯ ಬೀಳಬೇಕಾದ ಅವಶ್ಯಕತೆ ಇಲ್ಲ. ಯಾರನ್ನೊ ಮೆಚ್ಚಿಸಲು ಕಾಂಗ್ರೆಸ್ಸಿಗರು(Congress) ರಾಜಕಾರಣ(Politics) ಮಾಡುತ್ತಿದ್ದಾರೆ. ಮೆಚ್ಚಿಸೋ ರಾಜಕಾರಣದಿಂದಾಗಿ ಸಮಾಜದಲ್ಲಿ ಅನುಮಾನ ಸೃಷ್ಟಿಸುವಂತಾ, ಭಯ ಹಾಗೂ ಅಪನಂಬಿಕೆ ಹುಟ್ಟು ಹಾಕುವಂತ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ ಎಂದರು.

ಕಳ್ಳರಂತೆ ಮತಾಂತರ ನಿಷೇಧ ಕಾಯ್ದೆ ಜಾರಿ

ಬೆಳಗಾವಿ: ಬಿಜೆಪಿ ಸರ್ಕಾರ(BJP Government) ಮತಾಂತರ ಕಾಯ್ದೆಯನ್ನು ಕಳ್ಳರ ರೀತಿ ಜಾರಿಗೆ ತರಲು ಹೊರಟಿದೆ. ಇದರ ವಿರುದ್ಧ ಸದನದ ಹೊರ, ಒಳಗೆ ಹಾಗೂ ಕಾನೂನು ರೀತಿಯಲ್ಲೂ ಹೋರಾಟ ಮಾಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.  

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಮತಾಂತರ ನಿಷೇಧದ ವಿಚಾರವಾಗಿ ಬಿಜೆಪಿ ಸರ್ಕಾರ ಸಂವಿಧಾನ ಬಾಹಿರ ಕಾನೂನು ತರುತ್ತಿದೆ. ಈವರೆಗೆ ಆಮಿಷ ಹಾಗೂ ಪ್ರಚೋದನೆಗಳಿಗೆ ಒಳಗಾಗಿ ಮತಾಂತರವಾಗಿದಕ್ಕಿಂತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಿಂದಾದ ಅವಮಾನ ಹಾಗೂ ಆರ್ಥಿಕ, ಸಾಮಾಜಿಕ ಅಸಮಾನತೆಯಿಂದ ಮತಾಂತರ ಆಗಿದ್ದೇ ಜಾಸ್ತಿ ಎಂದರು.

ರಾಜ್ಯದಲ್ಲಿ(Karnataka) ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಜನರ ಗಮನ ಬೇರೆಡೆ ತಿರುಗಿಸಲು ಬಿಜೆಪಿ ಸರ್ಕಾರ ಹೊರಟಿದೆ. ಮತಾಂತರ ನಿಷೇಧ ಕಾಯ್ದೆ ಸಂವಿಧಾನ ಬಾಹಿರ ಮತ್ತು ಖಂಡನೀಯ. ನಾವು ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು.

Karnataka Politics: ಜೆಡಿಎಸ್ ಮುಳುಗುವ ಹಡಗು ಎಂದ ಸಿದ್ದುಗೆ ಕುಮಾರಸ್ವಾಮಿ ಟಾಂಗ್‌

ಹಿಂದೂ ಧರ್ಮದಲ್ಲಿನ(Hinduism) ನ್ಯೂನತೆಗಳನ್ನು ಸರಿಪಡಿಸಲು ಯತ್ನಿಸಿದರೂ ಸುಧಾರಣೆ ಸಾಧ್ಯವಾಗಲಿಲ್ಲ. ಹೀಗಾಗಿ ತಾವು ಮತಾಂತರ ಆಗಿದ್ದಾಗಿ ಡಾ.ಅಂಬೇಡ್ಕರ್‌(Dr BR Ambedkar) ತಿಳಿಸಿದ್ದಾರೆ. ಜಾತಿ, ವರ್ಣ ವ್ಯವಸ್ಥೆಯ ನಡುವೆ ಗೌರವದಿಂದ ಬದುಕಲು ಸಾಧ್ಯವಿಲ್ಲ, ಅವಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಬಹುತೇಕರು ಮತಾಂತರ ಆಗಿದ್ದಾರೆ. ಆಮಿಷ, ಹೆದರಿಕೆಗೆ ಮತಾಂತರ ಆಗಿರುವುದು ಬಹಳ ಕಡಿಮೆ ಎಂದರು ಸಿದ್ದರಾಮಯ್ಯ.

ಮತಾಂತರ ನಿಷೇಧ ವಿಧೇಯಕ ವಿರುದ್ಧ ಕಾಂಗ್ರೆಸ್‌ ಉಗ್ರ ಹೋರಾಟ

ಮತಾಂತರ ನಿಷೇಧ ವಿಧೇಯಕದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ತೀವ್ರವಾಗಿ ವಿರೋಧಿಸಲು  ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಯಿತು.
 

Latest Videos
Follow Us:
Download App:
  • android
  • ios