ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕು: ಜಾರಕಿಹೊಳಿ

ಬೆಳಗಾವಿ ಗ್ರಾಮೀಣ ಶಾಸಕರನ್ನು ವೀರರಾಣಿ ಚನ್ನಮ್ಮಳಿಗೆ ಹೋಲಿಸುವುದು ಎಂತಹ ದುರ್ದೈವ: ರಮೇಶ ಜಾರಕಿಹೊಳಿ

BJP Must Win in Belagavi Rural Constituency Says Ramesh Jarkiholi grg

ಬೆಳಗಾವಿ(ಫೆ.17):  ಬೆಳಗಾವಿ ಗ್ರಾಮೀಣ ಶಾಸಕರನ್ನು ವೀರರಾಣಿ ಚನ್ನಮ್ಮಳಿಗೆ ಹೋಲಿಸುವುದು ಎಂತಹ ದುರ್ದೈವ. ಈ ಮೂಲಕ ಚನ್ನಮ್ಮಳಿಗೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ. ಈ ಅಮ್ಮನಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಪರೋಕ್ಷವಾಗಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಕಿಡಿಕಾರಿದರು.

ಗುರುವಾರ ಸಂಜೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದವರು ಏರ್ಪಡಿಸಿದ್ದ ಅಭಿಮಾನದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಒಳ್ಳೆದಾಗಬೇಕಾದರೆ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಈ ಬಾರಿ ಸೋಲಲೇಬೇಕಾಗಿದೆ. ಉಚಗಾವಿಯಲ್ಲಿ ಮತ್ತೊಂದು ಸಮಾವೇಶ ನಡೆಸುತ್ತೇವೆ. ನಂತರ ಬಿಜೆಪಿ ವತಿಯಿಂದ ಪಕ್ಷದ ಸಮಾವೇಶ ಮಾಡುತ್ತೇವೆ. ಪಕ್ಷ ಸೂಚಿಸಿದ ಉತ್ತಮ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸೋಣ ಎಂದು ಮನವಿ ಮಾಡಿದರು.

ಹೊಡಿ, ಬಡಿ ಸಂಸ್ಕೃತಿ ಉಳ್ಳವರು ಬಿಜೆಪಿಗರು: ಸಿದ್ದರಾಮಯ್ಯ

ತೀರಾ ಕೆಳಮಟ್ಟಕ್ಕೆ ಇಳಿದ ಕಾಂಗ್ರೆಸ್‌:

ಸುಳೇಬಾವಿ ಹಾಗೂ ಹಿಂಡಲಗಾದಲ್ಲಿ ನಡೆದ ಎರಡು ಸಮಾವೇಶದಲ್ಲಿ ನಾನು ಮಾತನಾಡಿರುವೆ. ಆ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ನನ್ನ ವಿರುದ್ಧ ರಾಜ್ಯಮಟ್ಟದಲ್ಲಿ ವಾಗ್ದಾಳಿ ನಡೆಸಿದರು. ನನ್ನ ಮೇಲೆ ದೂರು ಸಹ ದಾಖಲು ಮಾಡಿದರು. ಕಾಂಗ್ರೆಸ್‌ ಪಕ್ಷ ಇಂದು ತೀರಾ ಕೆಳಮಟ್ಟಕ್ಕೆ ಇಳಿದಿದೆ. ನಾನು ಬಹಳ ಕಳಪೆ ಮಟ್ಟದ ಭಾಷಣಕ್ಕೆ ಹೋಗುವುದಿಲ್ಲ. ಆದರೆ ಅವರಿಗೆ ಉತ್ತರ ಕೊಡಲೇಬೇಕಾಗಿದೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರ ಬಗ್ಗೆ ವೈಯಕ್ತಿಕವಾಗಿ ನಾನು ಮಾತನಾಡಲಾರೆ. ರಸ್ತೆ ಅಭಿವೃದ್ಧಿ ಮಾತ್ರ ಕ್ಷೇತ್ರದ ಅಭಿವೃದ್ಧಿ ಕೆಲಸವಲ್ಲ. ಪ್ರತಿವರ್ಷ ಶಾಸಕರ ಅನುದಾನ ಬರುತ್ತದೆ. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಯಾವುದೇ ಶಾಸಕರು ಇರಲಿ. ಸರ್ಕಾರ ಅನುದಾನ ಬಿಡುಗಡೆಗೊಳಿಸುತ್ತದೆ. ಈ ನಿಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೂ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಅಭಿವೃದ್ಧಿಪರ ಕೆಲಸಗಳಿಗೆ ನಾನು ಎಂದಿಗೂ ಅಡ್ಡಿ ಮಾಡಿಲ್ಲ ಎಂದು ಹೇಳಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾವು ಈ ಕ್ಷೇತ್ರವನ್ನು ಗೆಲ್ಲಲೇ ಬೇಕಾಗಿದೆ. ಬಿಜೆಪಿಯ ವರಿಷ್ಠರು ಬೆಳಗಾವಿ ಗ್ರಾಮೀಣಕ್ಕೆ ಅತ್ಯುತ್ತಮ ಅಭ್ಯರ್ಥಿಯನ್ನು ನೀಡಬೇಕು. ನಾವು ಇಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಪಣ ತೊಡೋಣ. ಮಹಾ ನಾಯಕರು ಇರಲಿ ಅಥವಾ ಸ್ಥಳೀಯ ಶಾಸಕರ ಇರಲಿ. ಎಷ್ಟುಕೆಳಮಟ್ಟದ ರಾಜಕಾರಣ ಮಾಡುತ್ತಾರೆ. ಶಾಸಕರ ಸ್ಥಾನಕ್ಕೆ ನಾವು ಗೌರವ ಕೊಡೋಣ. ಆದರೆ ಅವರು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಎಂಬಂತೆ ನಡೆಸಲು ಬಿಡೆವು ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ನಾವು ಗೆಲ್ಲಲೇ ಬೇಕು. ಇಲ್ಲವಾದರೆ ನಿಮ್ಮ ಜಮೀನುಗಳೆಲ್ಲ ಹೋಗುತ್ತದೆ. ಬೆಂಗಳೂರು ಸುತ್ತಮುತ್ತ ಅವರ ಬಾಸ್‌ ಇದ್ದಾರಲ್ಲ. ಹೇಗೆ ಅತಿಕ್ರಮಣ ಮಾಡಿಕೊಂಡಿದ್ದರೋ ಶಾಸಕರ ಸಂಬಂಧಿಗಳು ಸಹ ನಿಮ್ಮ ಹೊಲವನ್ನು ಬಿಡಬೇಕಾಗುತ್ತದೆ. ನೀವು ಯಾವುದೇ ಆಮಿಷಕ್ಕೂ ಈ ಬಾರಿ ಬಲಿಯಾಗಬೇಡಿ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮತದಾರರಲ್ಲಿ ಅವರು ಮನವಿ ಮಾಡಿಕೊಂಡರು.

ಚುನಾವಣೆ ಹೊಸ್ತಿಲಲ್ಲಿ ಬಾಲ ಬಿಚ್ಚಿದ MES: 'ಚಲೋ ಮುಂಬೈ' ಮೂಲಕ ಮಹಾರಾಷ್ಟ್ರ ಸಿಎಂ ಭೇಟಿ

ಈ ವೇಳೆ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೊಳಕರ, ಜಿಪಂ ಸದಸ್ಯ ಶಂಕರಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಜೇಂದ್ರ ಅಂಕಲಗಿ, ಸುಳೇಭಾವಿ ಜಿಪಂ ಸದಸ್ಯೆ ಲಕ್ಷ್ಮಿ ಪಾರ್ವತಿ, ಹಲಗಾ ಜಿಪಂ ಸದಸ್ಯ ನಾಗರಾಜ ಪಾಟೀಲ, ಬಿಜೆಪಿ ಧುರೀಣರಾದ ರಾಮಚಂದ್ರ ಮನ್ನೋಳಕರ, ಬಡಸ ತಾಪಂ ಸದಸ್ಯ ಮಹಾಂತೇಶ ಅಲಾಬದಿ, ಮಾಜಿ ಜಿಪಂ ಸದಸ್ಯ ರಮೇಶ ಸರವದೆ, ಮಾಜಿ ಜಿಪಂ ಅಧ್ಯಕ್ಷ ಉಳವಪ್ಪ ನಂದಿ, ನಿರ್ದೇಶಕ ಪ್ರಶಾಂತ ದೇಸಾಯಿ, ಹಿರೇಬಾಗೇವಾಡಿ ಎಪಿಎಂಸಿ ಮಾಜಿ ಅಧ್ಯಕ್ಷೆ ರೇಣುಕಾ ಪಡಿಗೌಡ ಪಾಟೀಲ, ಬೆಳಗಾವಿ ಟಿ,ಎ,ಪಿ,ಸಿ,ಎಮ್‌,ಎಸ್‌,ಉಪಾಧ್ಯಕ್ಷ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಬಿಜೆಪಿ ಸಂಘಟನೆ ಕುಂಠಿತವಾಗಿತ್ತು. ಆದರೆ ಮೂರ್ನಾಲ್ಕು ತಿಂಗಳಿನಿಂದ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ನಾವು ಅತ್ಯಂತ ಸಮರ್ಥವಾಗಿ ಕೆಲಸ ಮಾಡೋಣ. ರಾಜ್ಯದಲ್ಲಿ ಮಾದರಿಯಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸೋಣ ಅಂತ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios