ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್‌ ಸಿಂಹ ವಾಗ್ದಾಳಿ

ನನ್ನನ್ನು ಯಾಕೆ ಜನ ಸೋಲಿಸಬೇಕು ಅಂತಾ ಸಿಎಂ ಐದತ್ತು ಕಾರಣ ಕೊಡಲಿ. ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್‌ ಸಿಂಹನನ್ನು ಸೋಲಿಸಬೇಕು ಹೇಳಿ? ಎಂದು ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದರು. 

BJP MP Pratap Simha Slamsd on CM Siddaramaiah gvd

ಮೈಸೂರು (ಸೆ.03): ನನ್ನನ್ನು ಯಾಕೆ ಜನ ಸೋಲಿಸಬೇಕು ಅಂತಾ ಸಿಎಂ ಐದತ್ತು ಕಾರಣ ಕೊಡಲಿ. ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್‌ ಸಿಂಹನನ್ನು ಸೋಲಿಸಬೇಕು ಹೇಳಿ? ಎಂದು ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದರು. ಪ್ರತಾಪ್‌ ಸಿಂಹನನ್ನು ಈ ಬಾರಿ ಸೋಲಿಸಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಹೈವೆ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್‌ ಮೈಸೂರು ಮಾಡಲು ಹೊರಟ್ಟಿದ್ದು ತಪ್ಪಾ? ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟ್ಟಿದ್ದು ತಪ್ಪಾ? 

ಚಾಮುಂಡಿಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ? ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್‌ಸಿಂಹನನ್ನು ಸೋಲಿಸಬೇಕು ಹೇಳಿ ಎಂದು ಪ್ರಶ್ನಿಸಿದರು. ಸಿಎಂ ಯಾವ ಬಡಾವಣೆಯಲ್ಲಿ ನಿಂತು ನನ್ನ ಸೋಲಿಸಿ ಅಂತಾ ಹೇಳಿದ್ದಾರೆ ಎಂಬುದು ನೋಡಿದೆ. ಮೈಸೂರಿನ ಕುವೆಂಪುನಗರದಲ್ಲೋ, ಸರಸ್ವತಿಪುರಂನಲ್ಲೋ, ಸಿದ್ದಾರ್ಥ ಬಡಾವಣೆಯಲ್ಲೋ ಬಂದು ಸಿಎಂ ಈ ರೀತಿ ಹೇಳೋಕೆ ಆಗಲ್ಲ. ಉದಯಗಿರಿಯಲ್ಲಿ ಸಿದ್ದರಾಮಯ್ಯ ಅವರ ಬಾಂಧವರ ಮುಂದೆ ಹೋಗಿ ಕೈ ಮುಗಿದು ನನ್ನ ಸೋಲಿಸಲು ಕರೆ ಕೊಟ್ಟಿದ್ದಾರೆ. ತಮ್ಮ ಬಾಂಧವರ ಉದ್ಧಾರಕ್ಕೆ ಮಾತ್ರ ಸಿದ್ದರಾಮಯ್ಯ ಇರೋದು ಎಂಬುದು ನನಗೆ ಗೊತ್ತು. 

ಕಾವೇರಿ ವಿಚಾರಕ್ಕೆ ನಿಮ್ಮ ಜೊತೆ ಜೈಲಿಗೆ ಬರಲು ಸಿದ್ಧ: ಶಾಸಕ ಜಿ.ಟಿ.ದೇವೇಗೌಡ

ತಮ್ಮ ಬಾಂಧವರ ಮುಂದೆ ಕೈಮುಗಿದು ನನ್ನ ಸೋಲಿಸಿ ಅಂತಾ ಕೇಳುವ ದೈನಾಸಿ ಸ್ಥಿತಿ ಸಿಎಂಗೆ ಬರಬಾರದಿತ್ತು ಎಂದು ಅವರು ವ್ಯಂಗ್ಯವಾಡಿದರು. 40 ವರ್ಷದಿಂದ ಸಿದ್ದರಾಮಯ್ಯ ರಾಜಕೀಯದಲ್ಲಿದ್ದಾರೆ. ಮೈಸೂರಿಗೆ ಮಾಡಿರುವ ಕೆಲಸ ಏನೂ ಎಂಬುದು ಹೇಳಲಿ. ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತಾ ಕೈ ಮುಗಿದು ಸಿಎಂ ಕೇಳಿದರೆ ಜನ ಅದನ್ನು ಒಪ್ಪುತ್ತಾರಾ? ಸಿದ್ದರಾಮಯ್ಯ ಅವರಿಗೆ ಬಡವರ ಮಕ್ಕಳು ಉದ್ಧಾರವಾಗಬಾರದು. ಬಡವರ ಮಕ್ಕಳು ಬೇಳಿಯಬಾರದು. ಅವರು ಅವರ ಮಕ್ಕಳು ಮಾತ್ರ ರಾಜಕಾರಣ ಮಾಡ್ತಾ ಇರಬೇಕು ಅಷ್ಟೆಎಂದು ಅವರು ಕಿಡಿಕಾರಿದರು.

ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್‌ ಹುಸೇನ್‌

ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಯಾಯಿತು. ಇದಕ್ಕೆ ಯಾರು ಕಾರಣ ಎಂದು ಅವರು ಪ್ರಶ್ನಿಸಿದರು. ಸಿದ್ದರಾಮಯ್ಯ ಪ್ರತಿ ಬಾರಿಯು ಮೋದಿ ವಿರುದ್ಧ ಮಾತಾಡುತ್ತಾರೆ. ಇದು ಒಂಥರ ಆಕಾಶದ ಕಡೆ ಮುಖ ಮಾಡಿ ಉಗಿದಂತೆ. ಈ ಕೆಲಸವನ್ನು ನಿರಂತರವಾಗಿ ಸಿದ್ದರಾಮಯ್ಯ ಮಾಡುತ್ತಲೆ ಇದ್ದಾರೆ ಎಂದರು.

Latest Videos
Follow Us:
Download App:
  • android
  • ios