ಬೆಂಗಳೂರು, (ಜ23):  ಪ್ರಧಾನಿ ನರೇಂದ್ರ ಮೋದಿಗೆ ಸೆಲೆಬ್ರಿಟಿಗಳ ಮದುವೆಗೆ ಹೋಗಲು ಮಾತ್ರ ಸಮಯವಿದೆ ಎಂದು ಡಿಸಿಎಂ ಜಿ. ಪರಮೇಶ್ವರ್​​ ನೀಡಿರುವ ಹೇಳಿಕೆಗೆ ಸಂಸದ ಪ್ರತಾಪ್​ ಸಿಂಗ್​ ತಿರುಗೇಟು ನೀಡಿದ್ದಾರೆ.

ಶ್ರೀ ದರ್ಶನಕ್ಕೆ ಪ್ರಧಾನಿ ಮೋದಿ ಬರಲ್ಲ, ಕಾರಣಕೊಟ್ಟ ಯಡಿಯೂರಪ್ಪ

 ನಿಮ್ಮ ಸೋನಿಯಾಜೀ, ರಾಹುಲ್​ಜೀ ಎಲ್ಲಿ ಹೋಗಿದ್ದರು? ಅವರು ಬಂದ್ರಾ? ಇದಕ್ಕೆ ದಯವಿಟ್ಟು ಉತ್ತರ ಕೊಡ್ತೀರಾ? ಎಂದು ಪ್ರತಾಪ್​ ಸಿಂಹ ಟ್ವಿಟರ್​ನಲ್ಲಿ ಪ್ರಶ್ನಿಸಿದ್ದಾರೆ.

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗದ ಹಿನ್ನೆಲೆ ಪ್ರಧಾನಿ ವಿರುದ್ಧ ಡಿಸಿಎಂ ಜಿ.ಪರಮೇಶ್ವರ್​​ ವಾಗ್ದಾಳಿ ನಡೆಸಿ ಟ್ವೀಟ್​​ ಮಾಡಿದ್ದರು. 

ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳ ಮದುವೆ ಸಮಾರಂಭ, ಸಿನಿಮಾ ನಟರನ್ನ ಭೇಟಿಯಾಗಲು ಕಾಲಾವಕಾಶ ಇದೆ. ಆದ್ರೆ ನಮ್ಮ ನಡೆದಾಡುವ ದೇವರ ದರ್ಶನಕ್ಕೆ ಬರಲು ಅವರ ಬಳಿ ಸಮಯವಿಲ್ಲ ಎಂದು ಕಿಡಿಕಾರಿದ್ದರು.

ಕಾಶಿಯಲ್ಲಿ ಶ್ರೀಗಳ ನೆನೆದ ಪ್ರಧಾನಿ ನರೇಂದ್ರ ಮೋದಿ

 ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಸತತ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಲರ್​​ ಪ್ರಶಸ್ತಿಗೆ ನೀವು ನಿಜಕ್ಕೂ ಅರ್ಹರು ಎಂದು ಪರೋಕ್ಷವಾಗಿ ಕುಟುಕಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರೋ ಪ್ರತಾಪ್ ಸಿಂಹ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಕೂಡ ಶ್ರೀಗಳ ದರ್ಶನಕ್ಕೆ ಬರಲಿಲ್ಲವಲ್ಲ, ಇದಕ್ಕೆ ಉತ್ತರಿಸಿ ಎಂದು ಕೌಂಟರ್ ಕೊಟ್ಟಿದ್ದಾರೆ.