Asianet Suvarna News Asianet Suvarna News

ಚಿತ್ತಾಪುರಕ್ಕೂ ಕಾಲಿಟ್ಟ ಗಿಫ್ಟ್‌ ರಾಜಕಾರಣ: ಕುಕ್ಕರ್‌ ಹಂಚಿದ ಬಿಜೆಪಿ ಎಂಎಲ್‌ಸಿ ವಲ್ಯಾಪುರೆ

ಚಿತ್ತಾಪುರ ಮತಕ್ಷೇತ್ರದಿಂದ ಸ್ಪ​ರ್ಧಿಸುವ ಬಯಕೆ ವ್ಯಕ್ತಪಡಿಸಿರುವ ವಿಧಾನ ಪರಿಷತ್‌ ಸದಸ್ಯ ಸುನೀಲ್‌ ವಲ್ಯಾಪುರೆ, ಕಳೆದ ಐದಾರು ತಿಂಗಳಿಂದ ಗುಪ್ತವಾಗಿ ಕ್ಷೇತ್ರದ ಸುತ್ತಾಟದಲ್ಲಿ ತೊಡಗಿದ್ದು ಗುಟ್ಟಾಗಿ ಉಳಿದಿಲ್ಲ. ತಮ್ಮ ಜನ್ಮದಿನದ ನೆನಪಿನ ಕಾಣಿಕೆ ರೂಪದಲ್ಲಿ ವಿವಿಧ ಗ್ರಾಮಗಳ ಮಹಿಳಾ ಸಂಘಗಳಿಗೆ ಕುಕ್ಕರ್‌ ವಿತರಣೆ ಮಾಡುವ ಮೂಲಕ ವಲ್ಯಾಪುರೆ ಚರ್ಚೆಗೆ ಗ್ರಾಸವಾಗಿದ್ದಾರೆ.

BJP MLC Sunil Valyapure Cooker Gift to Women Associations at Chittapur in Kalaburagi grg
Author
First Published Mar 14, 2023, 1:50 PM IST

ಚಿತ್ತಾಪುರ(ಮಾ.14):  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸದ್ದು ಮಾಡಿದ ಕುಕ್ಕರ್‌ ಗಿಫ್ಟ್‌ ರಾಜಕಾರಣ, ಈಗ ಚಿತ್ತಾಪುರ ಮೀಸಲು ಮತಕ್ಷೇತ್ರಕ್ಕೂ ಕಾಲಿಟ್ಟಿದೆ. ಬೆಳಗಾವಿಯಲ್ಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಅವರು ಮಹಿಳೆಯರಿಗೆ ಕುಕ್ಕರ್‌ ಗಿಫ್ಟ್‌ ನೀಡಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದರೆ. ಚಿತ್ತಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಸುನೀಲ್‌ ವಲ್ಯಾಪುರೆ ಮಹಿಳಾ ಸಂಘಗಳಿಗೆ ಕುಕ್ಕರ್‌ ಹಂಚಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಲು ದಿನಗಣನೆ ಶುರುವಾಗುತ್ತಿದ್ದಂತೆ ಚಿತ್ತಾಪುರ ಮತಕ್ಷೇತ್ರದ ಕಮಲ ಪಾಳೆಯದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತ್ಯೇಕವಾಗಿ ಕ್ಷೇತ್ರ ಸಂಚಾರ ಕೈಗೊಳ್ಳುವ ಮೂಲಕ ಗ್ರಾಮೀಣ ಜನರ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಚಿತ್ತಾಪುರ ಮತಕ್ಷೇತ್ರದಿಂದ ಸ್ಪ​ರ್ಧಿಸುವ ಬಯಕೆ ವ್ಯಕ್ತಪಡಿಸಿರುವ ವಿಧಾನ ಪರಿಷತ್‌ ಸದಸ್ಯ ಸುನೀಲ್‌ ವಲ್ಯಾಪುರೆ, ಕಳೆದ ಐದಾರು ತಿಂಗಳಿಂದ ಗುಪ್ತವಾಗಿ ಕ್ಷೇತ್ರದ ಸುತ್ತಾಟದಲ್ಲಿ ತೊಡಗಿದ್ದು ಗುಟ್ಟಾಗಿ ಉಳಿದಿಲ್ಲ. ತಮ್ಮ ಜನ್ಮದಿನದ ನೆನಪಿನ ಕಾಣಿಕೆ ರೂಪದಲ್ಲಿ ವಿವಿಧ ಗ್ರಾಮಗಳ ಮಹಿಳಾ ಸಂಘಗಳಿಗೆ ಕುಕ್ಕರ್‌ ವಿತರಣೆ ಮಾಡುವ ಮೂಲಕ ವಲ್ಯಾಪುರೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಕಲಬುರಗಿ: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಕೊನೆಗೂ ದಕ್ಕಿದ ಸರ್ಕಾರದ ನೆರವು

ಕ್ಷೇತ್ರದ ಕೆಲ ಬಿಜೆಪಿ ಮುಖಂಡರ ಮತ್ತು ತಮ್ಮ ಬೆಂಬಲಿಗರ ಬಳಗವನ್ನು ಕಟ್ಟಿಕೊಂಡು ಈಗಾಗಲೇ ಹಳಕರ್ಟಿ, ಲಾಡ್ಲಾಪುರ, ರಾವೂರ, ಬಳವಡಗಿ, ನಾಲವಾರ, ಚಿತ್ತಾಪುರ ಪಟ್ಟಣ ಸೇರಿದಂತೆ ಇತರ ಗ್ರಾಮಗಳಿಗೆ ತೆರಳಿ ದಿನವಿಡೀ ಕುಕ್ಕರ್‌ ಹಂಚುವ ಕಾರ್ಯದಲ್ಲಿ ತೊಡಗಿದ್ದು ಬೆಳಕಿಗೆ ಬಂದಿದೆ. ಸಾವಿರಾರು ಕುಕ್ಕರ್‌ ಬಾಕ್ಸ್‌ ತುಂಬಿದ ಮಿನಿ ಗೂಡ್ಸ್‌ ವಾಹನಗಳು ಗ್ರಾಮೀಣ ಭಾಗದಲ್ಲಿ ಸಂಚರಿಸಿವೆ. ಸ್ವತಹಃ ಸುನೀಲ್‌ ವಲ್ಯಾಪುರೆ ಅವರೇ ಅಭಿಮಾನಿಗಳ ಸಮ್ಮುಖದಲ್ಲಿ ಮಹಿಳೆಯರಿಗೆ ಕುಕ್ಕರ್‌ ವಿತರಿಸುವ ಮೂಲಕ ತಮಗೆ ಆಶೀರ್ವಾದ ಮಾಡುವಂತೆ ಬೇಡಿಕೊಂಡಿದ್ದಾರೆ. ಈಗ ಮುಂದುವರೆದ ಭಾಗ ಕೊಲ್ಲೂರ, ತರಕಸಪೇಟ್‌, ರಾಂಪೂರಹಳ್ಳಿ, ಶಾಂಪೂರಹಳ್ಳಿ ಸೇರಿದಂತೆ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿನ ಮಹಿಳಾ ಸಂಘಗಳ ಸದಸ್ಯರಿಗೆ ವಲ್ಯಾಪೂರೆ ಬೆಂಬಲಿಗ ಬಿಜೆಪಿ ಮುಖಂಡರು ಕುಕ್ಕರ್‌ ಹಂಚುವ ಕಾರ್ಯ ಮುಂದುವರೆಸಿರುವುದು ಕಂಡುಬಂದಿದೆ.

ನಾನೇನು ರಾಜಕೀಯ ಸನ್ಯಾಸಿ ಅಲ್ಲ ನನಗೂ ಚಿತ್ತಾಪುರ ಕ್ಷೇತ್ರದಿಂದ ಸ್ಪ​ರ್‍ಸುವ ಆಸೆ ಇದೆ ನಾನು ಪಕ್ಕದ ಶಹಾಬಾದ ಕ್ಷೇತ್ರದಿಂದ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ ಹೀಗಾಗಿ ಈ ಭಾಗ ನನಗೇನು ಹೊಸದಲ್ಲ ಎಲ್ಲ ಹಳ್ಳಿಗಳ ಹಾಗೂ ಮುಖಂಡರ, ಕಾರ್ಯಕರ್ತರ ಪರಿಚಯವಿದೆ ಎಂದು ಈಗಾಗಲೇ ವಲ್ಯಾಪೂರೆ ತಮ್ಮ ಮನದಾಳ ಮಾತು ಬಿಚ್ಚಿಟ್ಟಿದ್ದಾರೆ. ಹೀಗಿರುವಾಗ ಬರುವ ದಿನಗಳಲ್ಲಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳ ನಡುವೆ ತೀವ್ರ ಪæೖಪೋಟಿ ಏರ್ಪಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಚುನಾವಣೆ ವೇಳಾಪಟ್ಟಿಘೋಷಣೆಯಾಗಿ ಬಿಜೆಪಿ ಟಿಕೇಟ್‌ ಅಂತಿಮವಾಗುವರೆಗೂ ರಾಜಕೀಯ ಜಿದ್ದಾಜಿದ್ದಿ ನಡೆಯಲಿದ್ದು ಕೊನೆಗೆ ಬಿಜೆಪಿ ಹೈಕಮಾಂಡ್‌ ಕೃಪಕಟಾಕ್ಷ ಯಾರ ಮೇಲಾಗಲಿದೆ ಎಂಬುದು ಕಾದು ನೋಡಬೇಕಿದೆ.

Follow Us:
Download App:
  • android
  • ios