Asianet Suvarna News Asianet Suvarna News

Shantharam Siddhi Photo: ಬಸ್ ನಿಲ್ದಾಣದಲ್ಲಿ ಕುಳಿತ ಫೋಟೋ ವೈರಲ್, ಶಾಂತರಾಮ ಸಿದ್ದಿ ಬೇಸರ

 * ಬಸ್ ನಿಲ್ದಾಣದಲ್ಲಿ ಕುಳಿತ ಫೋಟೋ ವೈರಲ್
* ಬೇಸರ ವ್ಯಕ್ತಪಡಿಸಿದ  ಬಿಜೆಪಿ ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ
* ಬಸ್ ನಿಲ್ದಾಣದಲ್ಲಿ ಕುಳಿತ ಫೋಟೋ ವೈರಲ್

BJP MLC shantharam siddi upsets over  Viral His  Photo In on social media rbj
Author
Bengaluru, First Published Dec 29, 2021, 12:03 AM IST
  • Facebook
  • Twitter
  • Whatsapp

ಬೆಂಗಳೂರು, (ಡಿ.28): ತಮ್ಮ ಫೋಟೋಗಳು ವೈರಲ್ ಆಗಿಲಿ ಅಂತ ಕೆಲರು ಏನೆಲ್ಲಾ ಮಾಡ್ತಾರೆ. ಅದರಲ್ಲೂ ರಾಜಕಾರಣಿಗಳದ್ದು ನೋಡಿದ್ರೆ, ಕೆಲಸ ಮಾಡಿದ್ದು ಕಡಿಮೆ, ಸಾಮಾಜಿ ಜಾಲತಾಣಗಳಲ್ಲಿ (Socila Media) ಫೋಟೋ ಹಾಕಿಕೊಳ್ಳುವುದು ಮಾತ್ರ  ಡಬಲ್, ಡಬಲ್. ಇದರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ತಮ್ಮ ಫೋಟೋ ವೈರಲ್ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
 
ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ(Shantharam Siddi) ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿರುವ ಫೋಟೊ ಒಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

ಶಾಂತಾರಾಮ ಸಿದ್ದಿ ಅವರ ಈ ಸರಳತೆಗೆ ಮೆಚ್ಚುಗೆ ಸೂಚಿಸಿ ಹಲವು ಮಂದಿ ಫೋಟೊ ಹಂಚಿಕೊಂಡಿದ್ದರು. ವಿಧಾನ ಪರಿಷತ್ ಸದಸ್ಯರ ಸರಳತೆ, ಜೀವನಶೈಲಿಯ ಬಗ್ಗೆ ಹೊಗಳಿಕೆಯ ನುಡಿಗಳನ್ನು ಬರೆದುಕೊಂಡಿದ್ದಾರೆ.

ಸೋಲಿಸಿದ್ರೂ ಕ್ಷೇತ್ರದ ಜನರ ನೆರವಿಗೆ ನಿಂತ ದತ್ತಣ್ಣನ ದೊಡ್ಡತನಕ್ಕೆ ಚಿತ್ರಗಳೇ ಸಾಕ್ಷಿ

ಈ ಫೋಟೊ ವೈರಲ್ ಆಗಿರುವುದರ ಬಗ್ಗೆ ಇದೀಗ ಸ್ವತಃ ಶಾಂತರಾಮ ಸಿದ್ದಿ ಪ್ರತಿಕ್ರಿಯಿಸಿದ್ದು, ಫೋಟೊ ವೈರಲ್ ಆಗಿರುವುದು ಸರಿ ಕಂಡಿಲ್ಲ, ಇದರಿಂದ ಬೇಸರವಾಗಿದೆ ಎಂದಿದ್ದಾರೆ.

ಕಳೆದ ಎರಡು ದಿನಗಳಿಂದ ರಾಣೆಬೆನ್ನೂರಿನ ಬಸ್ ಸ್ಟಾಂಡ್​ನಲ್ಲಿ ಬಸ್​ಗೆ ಕಾಯುತ್ತಿರುವ ಫೋಟೊ ಹಾಕಿ ಹೊಗಳಿಕೆ ಮಾತು ಬರೆದಿದ್ದೀರಿ. ನನಗೆ ಅದು ಅಷ್ಟೊಂದು ಖುಷಿ ಕೊಟ್ಟಿಲ್ಲ. ಸಂಘದ ಸ್ವಯಂ ಸೇವಕರಿಗೆ ಈ ಥರದ್ದು ಹೊಸದಲ್ಲ. ಮೊದಲು ಹೀಗೆ ಓಡಾಡುತ್ತಿದ್ದೆ. ಈಗಲೂ ಓಡಾಡ್ತಿದ್ದೇನೆ. ಮುಂದೆ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಮುಗಿದ ಮೇಲೆ ಮತ್ತೆ ಹೀಗೆ ಓಡಾಡಲೇಬೇಕು ಎಂದು ಶಾಂತರಾಮ ಸಿದ್ದಿ ಹೇಳಿದ್ದಾರೆ.

ತಳಮಟ್ಟದ ವ್ಯಕ್ತಿ, ಪ್ರಾಮಾಣಿಕ, ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಬಿಜೆಪಿ ಪಕ್ಷ ಅಚ್ಚರಿ ಮೂಡಿಸಿದೆ. ಹಿಂದುಳಿದ ಬುಡಕಟ್ಟು ಸಮಾಜದ ಸಿದ್ದಿ ಸಮುದಾಯಕ್ಕೆ ಸೇರಿದ ಶಾಂತಾರಾಮ ಸಿದ್ದಿ ಹೆಸರಿನ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ಪುರ್ಲೆಮನೆ ಪುಟ್ಟ ಊರಿನ ವ್ಯಕ್ತಿ.

ಇವರು ಈ‌ ಮೊದಲು ವನವಾಸಿ ಕಲ್ಯಾಣ ಸಂಸ್ಥೆಯನ್ನ ರಾಜ್ಯದಲ್ಲಿ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಪಗಿ ಗ್ರಾಮದಿಂದ ಆರಂಭ ಮಾಡಿದರು, ಈಗ ರಾಜ್ಯಾದ್ಯಂತ ವಿಶಾಲವಾಗಿ ಬೆಳೆದಿರುವ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ವನವಾಸಿ ಕಲ್ಯಾಣ ಸಂಸ್ಥೆಯನ್ನ ಕಳೆದ 32 ವರ್ಷದ ಹಿಂದೆ ಕರ್ನಾಟಕದಲ್ಲಿ ಮೊಟ್ಟ ಮೊದಲು ಬೆಳಕಿಗೆ ತಂದ ಕೀರ್ತಿ ಶಾಂತಾರಾಮ ಸಿದ್ದಿಗೆ ಸಲ್ಲುತ್ತದೆ.

ಈ ಸಂಸ್ಥೆ ಮೂಲಕ ಬುಡಕಟ್ಟು ಜನಾಂಗದ ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಸಾವಿರಾರು ಬುಡಕಟ್ಟು ಜನರಿಗೆ  ವಸತಿ ನಿಲಯದಲ್ಲಿ ಇಟ್ಟು ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಿ ಇವತ್ತು ಸಾವಿರಾರು ಜನ ಶಿಕ್ಷಣ ಪಡೆದು ಮುನ್ನೆಲೆಗೆ ಬಂದಿದ್ದಾರೆ. ಬಳಿಕ ಇವರು ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರು ಹಾಗು ಕೊಂಕಣಿ‌ ಅಕಾಡಮಿಯ ಸದಸ್ಯರಾಗಿ, ಕಾರ್ಯ ನಿರ್ವಹಿಸಿದ್ದಾರೆ. ವನವಾಸಿ ಕಾಲ್ಯಾಣ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ತಂದ ಬಳಿಕವೇ ಇವತ್ತು ಬುಡಕಟ್ಟು ಜನಾಂಗದ ಒಂದಿಷ್ಟು ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿದೆ.

ಸಿದ್ದಿ ಸಮುದಾಯ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ದಾಂಡೇಲಿ, ಭಾಗದಲ್ಲಿ ವಾಸವಾಗಿದ್ದಾರೆ. ಕೇವಲ‌ ಕಾಡಿನ ಮದ್ಯೆ ನಾಲ್ಕು ಚೌಕಟ್ಟಿನಲ್ಲೆ ಇದ್ದ ಜಮೀನಿನಲ್ಲಿ ಕೃಷಿ ಮಾಡಿ ಬದುಕು ಕಟ್ಟಿಕೊಂಡವರು, ಕೃಷಿ ಬಿಟ್ಟರೆ ಇವರಿಗೆ ಬೇರೆ ಕಾಯಕದ ಬಗ್ಗೆ ಮಾಹಿತಿ ಕಡಿಮೆ. ಶಿಕ್ಷಣದಲ್ಲಿ ಮುನ್ನಲೆಗೆ ಬಂದವರು ಕೇವಲ‌ ಬೆರಳೆಣಿಕೆ ಜನ‌ಮಾತ್ರ. ಹೀಗೆ ಹತ್ತು ಹಲವು ವಿಭಾಗದಲ್ಲಿ ಸಿದ್ದಿ ಸಮುದಾಯ ಇವತ್ತು ಕಾನನದ ಮದ್ಯೆ ಬದುಕು ಕಟ್ಟಿಕೊಂಡವರಾಗಿದ್ದಾರೆ.ಆದರೆ, ಇವತ್ತು ಇವರನ್ನ ರಾಜಕೀಯವಾಗಿ ರಾಜಧಾನಿಯಲ್ಲಿ ಗುರುತಿಸಿದ್ದು ಹೆಮ್ಮೆಯ ಸಂಗತಿ.

Follow Us:
Download App:
  • android
  • ios