Asianet Suvarna News Asianet Suvarna News

'ರಾಜೀನಾಮೆ ನೀಡಲು ಯಡಿಯೂರಪ್ಪಗೆ RSS ಮನವೊಲಿಸಿದೆ'

* ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಹೇಳಿದ್ದೇ ತಡ ರಾಜಕೀಯದಲ್ಲಿ ಸಂಚಲನ
* ಸಿಎಂ ಬಿಎಸ್‌ವೈ ಹೇಳಿಕೆಯನ್ನು ಸ್ವಾಗತಿಸಿದ ಬಿಜೆಪಿ ಹಿರಿಯ ನಾಯಕ
* ಹೇಳಿರುವುದು ಯಡಿಯೂರಪ್ಪರ ದೊಡ್ಡ ಮಾತು ಎಂದ ಎಂಎಲ್‌ಸಿ

BJP MLC H Vishwanath Reacts On CM BSY resign Statement rbj
Author
Bengaluru, First Published Jun 6, 2021, 5:07 PM IST

ಮೈಸೂರು, (ಜೂನ್.6): ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಹೇಳಿದ್ದೇ ತಡ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.

ಇನ್ನು ಈ ಬಗ್ಗೆ ವಿಧಾನಪರಿಷತ್ ಸದಸ್ಯ ಎಚ್‌ ವಿಶ್ವನಾಥ್ ಮೈಸೂರಿನಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ್ದು, ದೆಹಲಿ ಹೇಳಿದಂತೆ ಕೇಳುವುದು ಮೊದಲಿಂದಲೂ ಇರುವ ಪರಿಪಾಠ. ರಾಜ್ಯದಲ್ಲಿ ಪರ್ಯಾಯ ನಾಯಕರನ್ನು ಮಾಡುತ್ತಾರೆ ಎಂದಿರುವುದು ಸ್ವಾಗತಾರ್ಹ. ನನಗೆ ಪರ್ಯಾಯ ನಾಯಕರಿದ್ದಾರೆ ಎಂದು ಹೇಳಿರುವುದು ಯಡಿಯೂರಪ್ಪರ ದೊಡ್ಡ ಮಾತು ಎಂದು ಹೇಳಿದರು.

ಸಿಎಂ ರಾಜೀನಾಮೆ ಹೇಳಿಕೆ ಹಿಂದಿನ ಸ್ಫೋಟಕ ರಹಸ್ಯ ಏನು ಗೊತ್ತಾ..?

 ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎಂದಿರುವುದನ್ನು ನಾನು ಸ್ವಾಗತ ಮಾಡುವೆ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಬಹಳ ದಿನದಿಂದ ನಡೆಯುತ್ತಿತ್ತು. ನಾಡಿನ ಹಿತದಿಂದ ಯಡಿಯೂರಪ್ಪ ರಾಜೀನಾಮೆ ಕೊಡುತ್ತೇನೆ ಎಂದಿರುವುದು ನಾಡಿನ ಜನ ಸ್ವಾಗತ ಮಾಡುತ್ತದೆ. ಆರ್ ಎಸ್‌ಎಸ್ ಕೂಡ ಅವರ ಮನ ಒಲಿಸಿದೆ ಎಂದು ತಿಳಿಸಿದರು.

ಸೈನಿಕ ದೆಹಲಿಗೆ ಹೋಗಿ ಬಂದರೂ ಅಂತ ಅವರು ರಾಜೀನಾಮೆ ಕೊಡುತ್ತಿಲ್ಲ. ಯಾರೋ ಮಾತನಾಡಿದರೂ ಎಂದು ಅವರು ರಾಜೀನಾಮೆ ಕೊಡುತ್ತಿಲ್ಲ. ಅವರಿಗೆ ವಯಸ್ಸಿನ ಕಾರಣವಿದೆ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ. ಆದರೆ ಯಡಿಯೂರಪ್ಪ ಅವರಿಗೆ ಒಂದು ವಿನಾಯತಿ ಕೊಟ್ಟಿದ್ದರು. ಅವರ ವಯಸ್ಸು, ಆರೋಗ್ಯ ನಾಡಿನ ಅಭಿವೃದ್ಧಿ, ಆಡಳಿತದ ಮೇಲಿನ ಪರಿಣಾಮ ನೋಡಿ ಆರ್ ಎಸ್ ಎಸ್, ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದರು.

ನನಗೆ ಯಡಿಯೂರಪ್ಪ ಮೇಲೆ ಅನುಕಂಪವಿದೆ. ಅವರ ವಯಸ್ಸಿನ ಕಾರಣ ಮಾತನಾಡುತ್ತಿದ್ದೇನೆ. ಅವರು ಅದಕ್ಷರು, ಅಪ್ರಾಮಾಣಿಕರು ಎಂದಲ್ಲ. ರಾಜೀನಾಮೆ ಕೊಟ್ಟರು ತೆಗೆದುಕೊಂಡರು ಎನ್ನುವುದಲ್ಲ, ಪಕ್ಷದ ಹಿತದೃಷ್ಟಿ ಮುಖ್ಯ ಅಷ್ಟೇ ಎಂದು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
 

Follow Us:
Download App:
  • android
  • ios