ಕರ್ನಾಟಕದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ರೆ ಕಂಟ್ರಾಕ್ಟರ್‌ಗಳನ್ನ ಏಕೆ ಬೀದಿ ಪಾಲು ಮಾಡ್ತೀರಾ?: ಡಿಕೆಶಿಗೆ ಸಿ.ಟಿ. ರವಿ ತಿರುಗೇಟು
ಕೇಂದ್ರ ಸರ್ಕಾರ 100 ಲಕ್ಷ ಕೋಟಿ ಗತಿ ಶಕ್ತಿ ಯೋಜನೆ ಮೂಲಕ ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿದೆ, ನೀವೇನು ಮಾಡಿದ್ದೀರಾ?. ಬೆಂಗಳೂರಿನ ಗುಂಡಿ ಮುಚ್ಚುವ ಯೋಗ್ಯತೆಯೂ ನಿಮಗಿಲ್ಲ: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ
ಚಿಕ್ಕಮಗಳೂರು(ನ.02): ರಾಜ್ಯದ ಆರ್ಥಿಕತೆ ದೇಶಕ್ಕಿಂತ ಚೆನ್ನಾಗಿದೆ. ಡಿಕೆಶಿಯವರೇ, ನೀರಾವರಿ ಇಲಾಖೆಯಲ್ಲಿ ಹತ್ರತ್ರ 20 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ರೆ ಕಂಟ್ರಾಕ್ಟರ್‌ಗಳನ್ನ ಏಕೆ ಬೀದಿ ಪಾಲು ಮಾಡ್ತೀರಾ?. ಲೋಕೋಪಯೋಗಿ 5000, ಬೇರೆ-ಬೇರೆ ಇಲಾಖೆ 30-35 ಸಾವಿರ ಕೋಟಿ ಪೆಂಡಿಂಗ್ ಬಿಲ್ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದು, ಖಜಾನೆ ತುಂಬಿ ತುಳುಕುತ್ತಿದ್ದರೆ ಅವರಿಗೆ ಏಕೆ ಅನ್ಯಾಯ ಮಾಡುತ್ತೀರಾ?. ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ರೆ ನಿಮ್ಮ ಶಾಸಕರೇ ಅಭಿವೃದ್ಧಿ ಕೆಲಸ ಆಗ್ತಿಲ್ಲ ಎಂದಿದ್ದಾರೆ, ಅವರಿಗೆ ಏನು ಹೇಳ್ತೀರಾ?. ನಿಮ್ಮ ಪಕ್ಷದ ಶಾಸಕರು ಕೂಡ ಹೊಟ್ಟೆಕಿಚ್ಚಿಗೆ ಧ್ವನಿ ಎತ್ತಿದ್ದಾರಾ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ಕೇಂದ್ರ ಸರ್ಕಾರ 100 ಲಕ್ಷ ಕೋಟಿ ಗತಿ ಶಕ್ತಿ ಯೋಜನೆ ಮೂಲಕ ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿದೆ, ನೀವೇನು ಮಾಡಿದ್ದೀರಾ?. ಬೆಂಗಳೂರಿನ ಗುಂಡಿ ಮುಚ್ಚುವ ಯೋಗ್ಯತೆಯೂ ನಿಮಗಿಲ್ಲ. ನಿಮ್ಮ ಮುಖ್ಯಮಂತ್ರಿಗಳೇ ಈ ವರ್ಷ ಏನು ಕೇಳಬೇಡಿ, ಎಲ್ಲಾ ಹಣ ಗ್ಯಾರೆಂಟಿಗೆ ಖರ್ಚು ಮಾಡುತ್ತಿದ್ದೀವಿ ಎಂದು ಶಾಸಕರಿಗೆ ಪಾಠ ಹೇಳಿದ್ರು. ಎಲ್ಲಾ ಸರಿ ಇಲ್ಲದ ಕಾರಣಕ್ಕೆ ತಾನೇ ನಿಮ್ಮ ಮುಖ್ಯಮಂತ್ರಿಗಳು ಪಾಠ ಹೇಳುವ ಸ್ಥಿತಿಗೆ ಬಂದಿರುವುದು ಎಂದು ಟೀಕಿಸಿದ್ದಾರೆ.
ಮೋದಿಯನ್ನ ಟೀಕಿಸೋದು ಆಕಾಶಕ್ಕೆ ಉಗಿದಂತೆ, ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಖಜಾನೆ ತುಂಬಿದ್ರೆ 3-4-5 ತಿಂಗಳಿಗೆ ಕೊಡುವ ಗೃಹಲಕ್ಷ್ಮಿ ಯೋಜನೆ ಹಣ ಹಾಕಿ. ಖಜಾನೆ ತುಂಬಿದ್ರೆ ರೈತರ ಪ್ರೋತ್ಸಾಹ ಧನ ಏಕೆ ಹಿಡಿದಿದ್ದೀರಾ?. ನಿಮ್ಮ ನಡೆ-ನುಡಿಯಿಂದ ಎಲ್ಲಾ ಸರಿ ಇಲ್ಲ ಅನ್ನೋದು ವ್ಯಕ್ತವಾಗ್ತಿದೆ ಎಂದು ಡಿಕೆಶಿ ವಿರುದ್ಧ ಪರಿಷತ್ ಸದಸ್ಯ ಸಿ.ಟಿ.ರವಿ ಹರಿಹಾಯ್ದಿದ್ದಾರೆ.