ಹರಕೆ ಕುರಿ ಯಾರೆಂದು ಮತದಾರರೇ ಉತ್ತರ ಕೊಡ್ತಾರೆ: ಸಿ.ಪಿ.ಯೋಗೇಶ್ವರ್
ಇದು ಧರ್ಮ ಯುದ್ಧ. ದೇಶ ವಿಭಜನೆ ಮಾಡಲು ಹೊರಟಿರುವ ಡಿ.ಕೆ.ಸುರೇಶ್ ಅವರ ದರ್ಪ, ದೌರ್ಜನ್ಯ, ದುರಂಹಕಾರಕ್ಕೆಲ್ಲ ಚುನಾವಣೆಯಲ್ಲಿ ಮಣಿಸುವ ಮೂಲಕ ಉತ್ತರ ಕೊಡಲು ಕ್ಷೇತ್ರದ ಜನ ಸಿದ್ಧರಾಗಿದ್ದಾರೆ. ನೂರಕ್ಕೆ ನೂರರಷ್ಟು ಡಿ.ಕೆ.ಸುರೇಶ್ ಸೋಲುತ್ತಾರೆ ಎಂದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್
ರಾಮನಗರ(ಮಾ.16): ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ಇದ್ದಾರೆ. ಯಾರು ಹರಕೆಯ ಕುರಿ ಎಂಬುದು ಚುನಾವಣಾ ಫಲಿತಾಂಶದ ವೇಳೆ ಗೊತ್ತಾಗಲಿದೆ. ಕಾಂಗ್ರೆಸ್‌ನವರ ಉಢಾಪೆ ಮಾತುಗಳಿಗೆ ಪ್ರಜ್ಞಾವಂತ ಮತದಾರರೇ ಉತ್ತರ ಕೊಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಧರ್ಮ ಯುದ್ಧ. ದೇಶ ವಿಭಜನೆ ಮಾಡಲು ಹೊರಟಿರುವ ಡಿ.ಕೆ.ಸುರೇಶ್ ಅವರ ದರ್ಪ, ದೌರ್ಜನ್ಯ, ದುರಂಹಕಾರಕ್ಕೆಲ್ಲ ಚುನಾವಣೆಯಲ್ಲಿ ಮಣಿಸುವ ಮೂಲಕ ಉತ್ತರ ಕೊಡಲು ಕ್ಷೇತ್ರದ ಜನ ಸಿದ್ಧರಾಗಿದ್ದಾರೆ. ನೂರಕ್ಕೆ ನೂರರಷ್ಟು ಡಿ.ಕೆ.ಸುರೇಶ್ ಸೋಲುತ್ತಾರೆ ಎಂದರು.
ಬೆಂಗಳೂರು ಗ್ರಾಮಾಂತರ: ಹ್ಯಾಟ್ರಿಕ್ ಸಂಸದ ಡಿ.ಕೆ.ಸುರೇಶ್ 4ನೇ ಬಾರಿ ಸ್ಪರ್ಧೆ..!
ಸಂಸದ ಡಿ.ಕೆ.ಸುರೇಶ್ ಹತಾಶರಾಗಿ ಮನೆಮನೆಗೆ ಹೋಗಿ ಕಾರ್ಯಕರ್ತರಿಗೆ ಶಾಲು ಹಾಕುತ್ತಿದ್ದಾರೆ. ಅದೇ ಕಾರ್ಯಕರ್ತರು ಬಲವಂತವಾಗಿ ಶಾಲು ಹೊದಿಸುತ್ತಿದ್ದಾರೆಂದು ನನಗೆ ಹೇಳಿದ್ದಾರೆ. ನಾವು ಯಾವುದೇ ರಿವರ್ಸ್ ಆಪರೇಷನ್ ಮಾಡಲ್ಲ, ನಮಗೆ ಜೆಡಿಎಸ್-ಬಿಜೆಪಿ ಪಡೆಯೇ ಸಾಕು ಎಂದು ಹೇಳಿದರು.
ಎನ್‌ಡಿಎ ಅಭ್ಯರ್ಥಿ ಮಂಜುನಾಥ್ ಅವರು ಎಲ್ಲರಿಗೂ ಚಿರಪರಿಚಿತರು. ಅವರ ಒಳ್ಳೆಯತನವೇ ನಮಗೆ ವರ. ರಾಜಕೀಯ ಅವರಿಗೆ ಬೇಕಿತ್ತೊ ಬೇಡವೋ ಎಂಬ ವಿಚಾರ ಮುಖ್ಯವಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಿರುವರು ರಾಜಕೀಯಕ್ಕೆ ಬರಬಾರದು ಅಂತ ಇಲ್ಲವಲ್ಲ. ಮಂಜುನಾಥ್ ಕೇವಲ ಸಂಸದ ಆಗಬೇಕು ಎಂಬುದಷ್ಟೇ ಅಲ್ಲ, ಮುಂದೆ ಮೋದಿಯವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಬೇಕು ಎಂಬುದು ಈ ಜಿಲ್ಲೆಯ ಜನರ ಆಸೆ. ಅವರ ಸೇವೆ ಕೇವಲ ರಾಜ್ಯಕ್ಕಲ್ಲ, ದೇಶಕ್ಕೆ ಬೇಕಿದೆ ಎಂದು ಹೇಳಿದರು.