ಪಾದಯಾತ್ರೆ ತಡೆಯದಿದ್ರೆ ದುರ್ಬಲ ಸರ್ಕಾರ ಅಂತ ಒಪ್ಪಿಕೊಳ್ಳುವೆ: ಬಿಜೆಪಿ ನಾಯಕ ಯೋಗೇಶ್ವರ್
* ಕೈ ನಾಯಕರ ವಿರುದ್ಧ 4ನೇ ಎಫ್ಐಆರ್
* ದೊಂಬರಾಟ ಮಾಡುತ್ತಿರುವ ಡಿಕೆ ಸಹೋದರರು
* ಸಿದ್ದರಾಮಯ್ಯ ಮೇಲೆ ಶಕ್ತಿ ಸಾಧಿಸಲು ಹೊರಟಿರುವ ಡಿಕೆ ಬ್ರದರ್ಸ್
ರಾಮನಗರ(ಜ.13): ಇಂದು ಸರ್ಕಾರ ಮೇಕೆದಾಟು ಪಾದಯಾತ್ರೆಯನ್ನ(Mekedatu Padayatra) ತಡೆಯಲೇಬೇಕು. ತಡೆಯದಿದ್ದರೇ ನಮ್ಮದು ದುರ್ಬಲ ಸರ್ಕಾರ(Government of Karnataka) ಅಂತ ಭಾವಿಸಬೇಕಾಗುತ್ತದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ(CP Yogeeshwara) ಹೇಳಿದ್ದಾರೆ. ಇಂದು(ಗುರುವಾರ) ನಗರದ ಹೊರವಲಯದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್(Covid19) ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಪಾದಯಾತ್ರೆ ನಿಲ್ಲಲೇಬೇಕಾಗಿದೆ ಎಂದು ತಿಳಿಸಿದ್ದಾರೆ.
"
ಸಿದ್ದರಾಮಯ್ಯ(Siddaramaiah) ಸಿಎಂ ಆಗಿದ್ದ ವೇಳೆ ಒಂದು ವರ್ಷದ ಕಾಲ ಡಿ.ಕೆ.ಶಿವಕುಮಾರ್(DK Shivakumar) ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಿಲ್ಲ. ಭ್ರಷ್ಟರೊಬ್ಬರನ್ನು ಸೇರಿಸಿಕೊಳ್ಳಬೇಕೆ ಅಂತ ಯೋಚನೆ ಅವರಿಗಿತ್ತು. ಸಿದ್ದರಾಮಯ್ಯ ಅವರ ಬಗ್ಗೆ ಆಭಿಮಾನವಿದೆ. ಈ ಪುಂಡರೊಡನೆ ಸೇರಬಾರದು, ಪಾದಯಾತ್ರೆ ಮೊಟಕುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಸಿ.ಪಿ.ಯೋಗೇಶ್ವರ ಮನವಿ ಮಾಡಿದ್ದಾರೆ.
ನಮ್ಮ ಸರ್ಕಾರ ಪಾದಯಾತ್ರೆ ತಡೆಯುವ ವಿಚಾರದಲ್ಲಿ ವಿಫಲವಾಗಿಲ್ಲ. ತಾಳ್ಮೆಯಿಂದ ಕಾದು ನೋಡಿದೆ ಎಂದು ಹೇಳಿದ್ದಾರೆ.
News Hour:ರಾಮನಗರ ಜಿಲ್ಲಾಡಳಿತಕ್ಕೆ ಫುಲ್ ಪವರ್, ಹಿಂದೆ ಸರಿಯಲ್ಲ ಅಂದ್ರು ಡಿಕೆ ಬ್ರದರ್!
"
ಡಿಕೆ ಪಟಾಲಂ ಬಂಧಿಸಿ, ಸರ್ಕಾರ ಯಾತ್ರೆ ನಿಲ್ಲಿಸಲಿ
ಕಾಂಗ್ರೆಸ್(Congress) ನಾಯಕರು ಮೇಕೆದಾಟು ಪಾದಯಾತ್ರೆ ಹೆಸರಿನಲ್ಲಿ ಸರ್ಕಾರವನ್ನ ಅಭದ್ರಗೊಳಿಸುವ ಹುನ್ನಾರ ನಡೆಸುತ್ತಿದೆ. ಸರ್ಕಾರ ಕೂಡಲೇ ಡಿಕೆ ಪಟಾಲಂ ಬಂಧಿಸಿ ಒಮಿಕ್ರಾನ್(Omicron) ಯಾತ್ರೆಯನ್ನು ಹತ್ತಿಕ್ಕಬೇಕು ಎಂದು ಸಿ.ಪಿ.ಯೋಗೇಶ್ವರ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕರು ಅಮಾಯಕರನ್ನು ಕರೆಸಿ ಕೊರೋನಾ(Coronavirus) ಹರಡುವ ಕೆಲಸ ಮಾಡುತ್ತಿದ್ದಾರೆ. ಇದು ನೀರಿಗಾಗಿ ಯಾತ್ರೆಯಾಗದೆ ಒಮಿಕ್ರಾನ್ ಹರಡುವ ಯಾತ್ರೆಯಂತಾಗಿದೆ ಎಂದು ಟೀಕಿಸಿದರು. ಸರ್ಕಾರ ಮೇಕೆದಾಟು ಯೋಜನೆ(Mekedatu Project) ಅನುಷ್ಠಾನಕ್ಕೆ ಬದ್ಧವಾಗಿದ್ದು, ಕಾನೂನು ಹೋರಾಟ ಮಾಡುತ್ತಿದ್ದೇವೆ. ನ್ಯಾಯಾಲಯದ ಅನುಮತಿ ಬೇಕಿದೆ. ರಾಜಕೀಯ(Politics) ದುರುದ್ದೇಶದಿಂದ ಮಾಡಿರುವ ಹೋರಾಟ ಇದಾಗಿದೆ ಎಂದು ಕೈ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಸರ್ಕಾರ ಯಾತ್ರೆಗೆ ಹೆಚ್ಚಿನ ಮಾನ್ಯತೆ ನೀಡಿರಲಿಲ್ಲ. ಆದರೀಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೂಡಲೇ ಡಿಕೆಶಿ ಪಟಾಲಂ ಬಂಧಿಸಬೇಕು. ಸಿದ್ದರಾಮಯ್ಯ ಮೇಲೆ ಅಭಿಮಾನ ಇತ್ತು. ಡಿಕೆ ಜತೆ ಸಘರೌ ಅದೂ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.
ಈ ಮೊದಲು ಸಿದ್ದರಾಮಯ್ಯ ತಮ್ಮ ಸರ್ಕಾರದಲ್ಲಿ ಡಿಕೆಶಿಯನ್ನು ಕ್ಯಾಬಿನೆಟ್‌ನಲ್ಲಿ ತೆಗೆದುಕೊಂಡಿರಲಿಲ್ಲ. ರಾಜಕೀಯ ಪಿತೂರಿ ಮಾಡಿ ಕ್ಯಾಬಿನೆಟ್ ಸೇರಿದರು. ಈಗ ಸಿದ್ದರಾಮಯ್ಯ ಅವರಿಗೂ ಅರಿವಾಗಿ ಅರ್ಧದಾರಿಗೆ ಬಂದು ವಾಪಸ್ಸಾಗುತ್ತಿದ್ದಾರೆ. ಸಿದ್ದರಾಮಯ್ಯರವರು ಪುಂಡರ ಜತೆ ಸೇರಬೇಡಿ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನದು ರಾಜಕೀಯ ಅನುಕೂಲ ಪಾದಯಾತ್ರೆ
ಕಾಂಗ್ರೆಸ್‌ನದು ರಾಜಕೀಯ ಅನುಕೂಲ ಪಾದಯಾತ್ರೆ. ಯಾತ್ರೆಗೆ ಆಗಮಿಸಿರುವ ಜನಸಮಾನ್ಯರನ್ನು ಎಲ್ಲಿದ್ದಾರೋ ಅಲ್ಲಿ ಬಂಧಿಸಬೇಕು. ಸರ್ಕಾರ ಪಾದಯಾತ್ರೆ ಬಲವಂತವಾಗಿ ಹತ್ತಿಕ್ಕಬೇಕು. ಡಿಕೆ ಪಟಾಲಂಗೆ ದಂಡಂ ದಶಗುಣಂ ಅರ್ಥವಾಗುತ್ತದೆ. ಬೇರೆ ಭಾಷೆ ಅಲ್ಲ. ಮೈಸೂರು ಭಾಗದ ಜನರು ಸೌಹಾರ್ದಯುತವಾಗಿದ್ದಾರೆ. ಯಾತ್ರೆ ಅಂದರೆ ಜನಪರ ಧ್ವನಿ ಇರುತ್ತದೆ. ಭಾವನಾತ್ಮಕ ಸಂಬಂಧ ಇರುತ್ತದೆ. ಅದ್ಯಾವುದು ಯಾತ್ರೆಯಲ್ಲಿ ಕಾಣುತ್ತಿಲ್ಲ ಎಂದು ಟೀಕಿಸಿದರು.
ಯಾತ್ರೆ ತಡೆಯದಿರುವುದು ಸರ್ಕಾರದ ದೌರ್ಬಲ್ಯ ಅಲ್ಲ. ಈಗಾಗಲೇ ಎಫ್ಐಆರ್(FIR) ದಾಖಲಾಗಿದೆ. ಡಿಕೆ ಸಹೋದರರು ಕ್ರಿಮಿನಾಲಜಿ ಉಳ್ಳವರು. ಇದಕ್ಕೆಲ್ಲ ಹೆದರುವವರಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಕಾವೇರಿ ಭಾಗದಲ್ಲಿ ಅನೇಕ ಯೋಜನೆ ತರಬಹುದಿತ್ತು. ಸೋರಿಕೆ ನೀರಿನಿಂದ ಕೆರೆ ತುಂಬಿಸಬಹುದಿತ್ತು. ಅದ್ಯಾವುದನ್ನು ಮಾಡಲಿಲ್ಲ ಎಂದು ಟೀಕಿಸಿದರು.
ಡಿಕೆ ಬ್ರದರ್ಸ್ ಸಿದ್ದರಾಮಯ್ಯ ಮೇಲೆ ಶಕ್ತಿ ಸಾಧಿಸಲು ಹೊರಟಿದ್ದಾರೆ. ಸರ್ಕಾರ ಯಾತ್ರೆ ತಡೆಯುವ ಆಶಾಭಾವನೆ ಇದೆ. ಸರ್ಕಾರ ಮತ್ತು ಕಾಂಗ್ರೆಸ್ ಜತೆ ಮ್ಯಾಚ್ ಫಿಕ್ಸಿಂಗ್ ಆಗಿಲ್ಲ. ರಾಜಕೀಯವಾಗಿ ಹೋರಾಟ ಮಾಡಿಕೊಂಡು ಬಂದವರು. ಮ್ಯಾಚ್ ಫಿಕ್ಸಿಂಗ್ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Mekedatu Padayatra: ಪಾದಯಾತ್ರೆ ನಿರ್ಬಂಧಕ್ಕೆ ಸರ್ಕಾರದ ಅಧಿಕೃತ ಆದೇಶ, ರಾಮನಗರದಲ್ಲಿ ಬಂದೋಬಸ್ತ್!
ದೊಂಬರಾಟ ಮಾಡುತ್ತಿರುವ ಡಿಕೆ ಸಹೋದರರು
ಡಿಕೆ ಸಹೋದರರು(DK Brothers) ಕಾಂಗ್ರೆಸ್ ಪಕ್ಷವನ್ನೇ ಹೈಜಾಕ್ ಮಾಡಿದ್ದಾರೆ. ಅವರದು ನಾಟಕ ಮಂಡಳಿ. ಬೇರೆ ಜಿಲ್ಲೆಗಳಿಂದ ಹಣ ನೀಡಿ ಜನರನ್ನು ಕರೆಸಿ ದೊಂಬರಾಟ ಮಾಡುತ್ತಿದ್ದಾರೆ. ಇವತ್ತು ಯಾತ್ರೆ ತಡೆಯದಿದ್ದರೆ ದುರ್ಬಲ ಸರ್ಕಾರ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈಗಲೇ ಯಾತ್ರೆ ತಡೆಯುವ ಕುರಿತು ಸಿಎಂ ಹಾಗೂ ಸಚಿವರ ಜತೆ ಚರ್ಚೆ ಮಾಡುತ್ತೇನೆ. ಸರ್ಕಾರ ತಡೆಯದಿದ್ದರೆ ಬಿಜೆಪಿ ಕಾರ್ಯಕರ್ತರೇ ಬೀದಿಗಿಳಿದು ಹೋರಾಟ ನಿಲ್ಲಿಸುತ್ತೇವೆ ಎಂದು ಯೋಗೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಕೈ ನಾಯಕರ ವಿರುದ್ಧ 4ನೇ ಎಫ್ಐಆರ್
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರಿ 29 ಮಂದಿ ಮೇಲೆ ನಾಲ್ಕನೇ ಎಫ್‌ಐಆರ್ ದಾಖಲಾಗಿದೆ. ಸಿದ್ದರಾಮಯ್ಯ ಅವರ ಮೇಲೆ ಮೂರನೇ ಪ್ರಕರಣ ದಾಖಲಾಗಿದೆ. ರಾಮನಗರ ತಹಸೀಲ್ದಾರ್ ವಿಜಯಕುಮಾರ್ ಅವರು ನೀಡಿರುವ ದೂರಿನ ಮೇಲೆ ರಾಮನಗರ ಗ್ರಾಮಾಂತರ ವೃತ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.