ಶಿವಮೊಗ್ಗ, (ಸೆ.19):  ನಾಯಕತ್ವದ ಬದಲಾವಣೆಯ ವಿಚಾರವಾಗಿ ಮಾತನಾಡಿರುವ ಎಂಎಲ್​ಸಿ ಆಯನೂರು ಮಂಜುನಾಥ, ಸಿಎಂ ರೇಸ್​ನಲ್ಲಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಮತ್ತೊಬ್ಬ ಪ್ರತಿಸ್ಪರ್ಧಿ ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. 

ವಯೋಮಿತಿ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಮಾಡುವುದಿಲ್ಲ. ಇಳಿ ವಯಸ್ಸಿನಲ್ಲೂ ಯಡಿಯೂರಪ್ಪ ಅವರಂತಹ ಸಕ್ರಿಯ ರಾಜಕಾರಣಿ ದೇಶದಲ್ಲಿ ಮತ್ತೊಬ್ಬರಿಲ್ಲ. ಕೊರೋನಾನಾ ಬಂದ ಸಂದರ್ಭದಲ್ಲೂ ಆಸ್ಪತ್ರೆಯಲ್ಲಿದ್ದುಕೊಂಡೇ ಆಡಳಿತ ನಡೆಸಿದ್ದು ಅದಕ್ಕೆ ಸಾಕ್ಷಿ ಎಂದು ಎಂದರು.

ನಾಯಕತ್ವ ಬದಲಾವಣೆ: ‌ಇದುವರೆಗೆ ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ ಎಂದ ಬಿಜೆಪಿ ನಾಯಕ 

ಹೋರಾಟ ಎನ್ನುವುದು ಯಡಿಯೂರಪ್ಪ ಅವರ ರಕ್ತದಲ್ಲಿ ಬೆರೆತು ಹೋಗಿದ್ದು, ಅವರೇ ಅವಧಿಪೂರ್ಣಗೊಳಿಸಲಿದ್ದಾರೆ. ಮುಂದಿನ ಚುನಾವಣೆವರೆಗೂ ಅವರೇ ಸಿಎಂ ಆಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಶಿವಮೊಗ್ಗಕ್ಕೆ ಸೀಮಿತ, ರಾಜ್ಯಕ್ಕಲ್ಲ ಎಂಬ ಶಾಸಕ ಉಮೇಶ್​ ಕತ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಆಯನೂರು, ಉಮೇಶ್​ ಕತ್ತಿ ಯಾವುದೋ ಗುಂಗಲ್ಲಿದ್ದಾಗ ಆ ರೀತಿ ಹೇಳಿಕೆ ನೀಡಿರಬಹುದು. ರಾಜ್ಯವನ್ನೇ ಇಬ್ಭಾಗ ಮಾಡಲು ಹೊರಟಿದ್ದ ಅವರು ಹೆಚ್ಚು ಗುಟ್ಖಾ ಹಾಕುತ್ತಾರೆ. ಅವರ ಈ ಹೇಳಿಕೆ ಅದರ ಪರಿಣಾಮ ಇರಬಹುದು ಎಂದು ಟಾಂಗ್ ಕೊಟ್ಟರು.

"