ಪಂಚರಾಜ್ಯಗಳ ಗೆಲವು ಮೋದಿ ನಾಯಕತ್ವಕ್ಕೆ ಸಂದ ಗೌರವ: ಶಾಸಕ ಸಿದ್ದು ಸವದಿ
ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಬಿಟ್ಟಿ ಭಾಗ್ಯಗಳ ಭರಾಟೆಗಳ ಬೊಗಳೆ ಬಿಟ್ಟಿತ್ತಾದರೂ ಕರ್ನಾಟಕ ರಾಜ್ಯದಲ್ಲಿ ಭಾಗ್ಯಗಳ ನೆಪದಲ್ಲಿ ಅಮಾಯಕ ಜನತೆ ಬೆಲೆ ಏರಿಕೆ ಸೇರಿದಂತೆ ಎಲ್ಲ ಸೌಲಭ್ಯಗಳಿಗೂ ವಿಪರೀತ ಆರ್ಥಿಕ ಹೊರೆಯನ್ನನುಭವಿಸುತ್ತ ಶಪಿಸುತ್ತದ್ದನ್ನು ಮನಗಂಡ ಉತ್ತರದ ರಾಜ್ಯಗಳು ಬಿಜೆಪಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ಸಿಗರ ಬಿಟ್ಟಿ ಭಾಗ್ಯಗಳಿಗೆ ಮೊಳೆ ಹೊಡೆದು ನೇತಾಕಿದ್ದಾರೆ: ತೇರದಾಳ ಶಾಸಕ ಸಿದ್ದು ಸವದಿ
ರಬಕವಿ-ಬನಹಟ್ಟಿ(ಡಿ.04): ವಿಶ್ವದಲ್ಲಿ ಭಾರತಕ್ಕೆ ಅಗ್ರಸ್ಥಾನ ತಂದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದೇಶನಿಷ್ಠೆ, ಜನಪರ ಮತ್ತು ಅಭಿವೃದ್ಧಿ ಪರ ಆಡಳಿತಕ್ಕೆ ಈ ಬಾರಿ ಪಂಚರಾಜ್ಯಗಳ ಚುನಾವಣೆಯಲ್ಲಿ ಆಯಾ ರಾಜ್ಯಗಳ ಜನತೆ ಗೆಲವು ನೀಡಿದ್ದು, ಮುಂದಿನ ಬಾರಿಯೂ ದೇಶದ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ಪುಷ್ಠೀಕರಿಸಿವೆ. ಪಂಚರಾಜ್ಯಗಳ ಗೆಲವು ಮೋದಿ ನಾಯಕತ್ವಕ್ಕೆ ಸಂದ ಗೌರವವಾಗಿವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ನುಡಿದರು.
ಬನಹಟ್ಟಿಯ ಬಿಜೆಪಿ ಕಚೇರಿಯಿಂದ ಕಾರ್ಯಕರ್ತರೊಡನೆ ನೂಲಿನ ಗಿರಣಿ, ವೈಭವ ಚಿತ್ರಮಂದಿರ, ಗಾಂಧಿ ಸರ್ಕಲ್, ಮುಖ್ಯ ಮಾರುಕಟ್ಟೆ, ಈಶ್ವರಲಿಂಗ ಮೈದಾನ ಮೂಲಕ ಬಿಜೆಪಿ ಮತ್ತು ಮೋದಿ ಪರ ಘೋಷಣೆಗಳನ್ನು ಕೂಗುತ್ತ, ಪಟಾಕಿ ಸಿಡಿಸಿ, ಸಿಹಿ ಹಂಚುತ್ತ ಮೆರವಣಿಗೆಯಲ್ಲಿ ಸಾಗಿದ ಅವರು, ರಾಜ್ಯ ಹೆದ್ದಾರಿ ಬಳಿಯಲ್ಲಿ ಕಾರ್ಯಕರ್ತರನ್ನು ,ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬಾದಾಮಿ: ನಾನು ರಾಜಕಾರಣ ಮಾಡುವ ಶಾಸಕನಲ್ಲ, ಕಾಂಗ್ರೆಸ್ ಎಂಎಲ್‌ಎ ಚಿಮ್ಮನಕಟ್ಟಿ
ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಬಿಟ್ಟಿ ಭಾಗ್ಯಗಳ ಭರಾಟೆಗಳ ಬೊಗಳೆ ಬಿಟ್ಟಿತ್ತಾದರೂ ಕರ್ನಾಟಕ ರಾಜ್ಯದಲ್ಲಿ ಭಾಗ್ಯಗಳ ನೆಪದಲ್ಲಿ ಅಮಾಯಕ ಜನತೆ ಬೆಲೆ ಏರಿಕೆ ಸೇರಿದಂತೆ ಎಲ್ಲ ಸೌಲಭ್ಯಗಳಿಗೂ ವಿಪರೀತ ಆರ್ಥಿಕ ಹೊರೆಯನ್ನನುಭವಿಸುತ್ತ ಶಪಿಸುತ್ತದ್ದನ್ನು ಮನಗಂಡ ಉತ್ತರದ ರಾಜ್ಯಗಳು ಬಿಜೆಪಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ಸಿಗರ ಬಿಟ್ಟಿ ಭಾಗ್ಯಗಳಿಗೆ ಮೊಳೆ ಹೊಡೆದು ನೇತಾಕಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿವಾನಂದ ಗಾಯಕವಾಡ, ಆನಂದ ಕಂಪು, ದುಂಡಪ್ಪ ಮಾಚಕನೂರ, ಶ್ರೀಶೈಲ ಯಾದವಾಡ, ಚಿದಾನಂದ ಹೊರಟ್ಟಿ, ಶಿವಾನಂದ ಬುದ್ನಿ, ಪ್ರವೀಣ ದಬಾಡಿ, ಚಂದ್ರಶೇಖರ ಮಿರ್ಜಿ, ಲಕ್ಕಪ್ಪ ಪಾಟೀಲ, ಬಾಬಾಗೌಡ ಪಾಟೀಲ, ಈಶ್ವರ ಪಾಟೀಲ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆಯಲ್ಲಿದ್ದರು.