ಕಮಲ ತೊರೆದು ಕಾಂಗ್ರೆಸ್‌ ಸೇರ್ತಾರಾ ಬಿಜೆಪಿ ನಾಯಕ?

ನಾನು ಲೀಡರ್ ಆಧಾರಿತ ರಾಜಕಾರಣಿಯಲ್ಲ. ಜನಗಳ ಬೆಂಬಲಿತ ರಾಜಕಾರಣಿ. ಪಕ್ಷದಲ್ಲಿ ನನ್ನ ನಿರ್ಲಕ್ಷ್ಯ ಎಂದಿಗೂ ಆಗಿಲ್ಲ. ಜನ ಮಾತ್ರ ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯ. ನಾನು ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಂತ ನಾನು ಅನ್ಯ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಎಲ್ಲೂ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ 

BJP MLA Shivaram Hebbar React to Join Congress grg

ಶಿರಸಿ(ನ.11): 'ನಾನು ಕಾಂಗ್ರೆಸ್ ಸೇರುತ್ತೇನೆ, ಬಿಜೆಪಿ ಬಿಡುತ್ತೇನೆ’ ಎಂದೆಲ್ಲ ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ, ನಾನು ಬಿಜೆಪಿ ಬಿಡುವ ಮಾತೇ ಇಲ್ಲ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ನಾನು ಲೋಕಸಭಾ ಟಿಕೆಟ್‌ ಆಕಾಂಕ್ಷಿಯಲ್ಲ’ ಎಂದು ಹೇಳಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿ, ನಾನು ಲೀಡರ್ ಆಧಾರಿತ ರಾಜಕಾರಣಿಯಲ್ಲ. ಜನಗಳ ಬೆಂಬಲಿತ ರಾಜಕಾರಣಿ. ಪಕ್ಷದಲ್ಲಿ ನನ್ನ ನಿರ್ಲಕ್ಷ್ಯ ಎಂದಿಗೂ ಆಗಿಲ್ಲ. ಜನ ಮಾತ್ರ ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯ. ನಾನು ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಂತ ನಾನು ಅನ್ಯ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಎಲ್ಲೂ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಯಲ್ಲಾಪುರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ ಎಂಬ ಮಾತೂ ಕೇಳಿ ಬರುತ್ತಿದೆ. ಆದರೆ, ನಾನು ರಾಜೀನಾಮೆ ನೀಡಿದರೆ ತಾನೆ ಉಪ ಚುನಾವಣೆ ನಡೆಯುವುದು. ಆ ಶಕ್ತಿ, ಧೈರ್ಯ ಇದ್ದಾಗ ಅಂತಹ ನಿರ್ಣಯ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಅಬಕಾರಿ ಇಲಾಖೆಯಿಂದ ಭಾರೀ ಮದ್ಯಸಾರ ಬೇಟೆ; ಶಾಸಕ‌ ಸೈಲ್‌ಗೆ ಕಂಟಕವಾಯ್ತಾ ಪ್ರಕರಣದ ಮಧ್ಯ ಪ್ರವೇಶ?

ಬರ ಅಧ್ಯಯನಕ್ಕೆ ಬಿಜೆಪಿ ಪ್ರಮುಖರ ತಂಡ ಶಿರಸಿ ಮತ್ತು ಮುಂಡಗೋಡ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ನಾನು ಪೂರ್ವ ನಿಗದಿತ ದೆಹಲಿ ಪ್ರವಾಸದಲ್ಲಿದ್ದೆ. ಹೀಗಾಗಿ, ಆ ತಂಡದ ಜೊತೆ ತೆರಳಲಿಲ್ಲ ಎಂದರು. ನಾನು ಲೋಕಸಭಾ ಅಭ್ಯರ್ಥಿಯಾಗಲ್ಲ. ನನಗೆ ಯಾವ ಏಣಿ ಹತ್ತಬೇಕು ಎಂಬ ವಿವೇಚನೆಯಿದೆ. ಮಾಜಿ ಸಚಿವ ಎಸ್.ಟಿ. ಸೋಮಶೇಖರ ನನಗೆ ತುಂಬಾ ಸ್ನೇಹಿತರು. ಹಾಗಂತ ಅವರು ನೀಡಿರುವ ಹೇಳಿಕೆ ನನ್ನದಲ್ಲ. ನಾನು ನೀಡಿದ ಹೇಳಿಕೆ ಅವರದ್ದಲ್ಲ ಎಂದರು.

Latest Videos
Follow Us:
Download App:
  • android
  • ios