65 ಕೋಟಿ‌ ಕೊಟ್ರೆ ಸೈಟ್ ವಾಪಸ್ ಕೊಡ್ತೀನಿ ಅಂತಾ ಹೇಳಿದ್ರು. ಆದ್ರೆ, ಈಗ ನಿಮ್ಮ ಪತ್ನಿಯವರು ವಾಪಸ್ ಕೊಡ್ತೀನಿ ಅಂತಾ ಪತ್ರ ಬರೆದಿದ್ದಾರೆ. ಜನರಿಗೆ ಎಮೋಷನಲ್ ಬ್ಲಾಕ್‌ಮೇಲ್ ಮಾಡ್ಬೇಕು ಅಂತಾ ಪತ್ರ ಬರೆಸಿದ್ದೀರಿ. ಇಡಿ ಭಯದಿಂದ ತಪ್ಪಿಸಿಕೊಳ್ಳಲು ಪತ್ರ ಬರೆಸಿದ್ದಾರೆ. ನನ್ನ ಹೆಂಡತಿ ತಪ್ಪು ಮಾಡಿದ್ದಾಳೆ ಬೇಕಿದ್ರೆ ಅವರಿಗೆ ಶಿಕ್ಷೆ ಕೊಡಿ ಎನ್ನುವ ಪ್ರಯತ್ನ ಮಾಡ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಶರಣು ಸಲಗರ್  

ಬೀದರ್(ಅ.02): ಮುಡಾ ಹಗರಣದಲ್ಲಿ 140 ಕಿ.ಮೀ ಕ್ರಮಿಸಿ ಹೋರಾಟ ಮಾಡಿದ್ದೇವೆ. 60-40 ಇದ್ದಿದ್ದನ್ನ, 5೦-50 ಮಾಡಿದ್ದೇ ಸಿಎಂ ಸಿದ್ದರಾಮಯ್ಯ. ದುಬಾರಿ ಮೌಲ್ಯದ ಜಾಗವನ್ನ ಪಡೆಯಬೇಕಂತಲೇ ಈ ರೀತಿ ಸಿದ್ದರಾಮಯ್ಯ ನಾಟಕ ಮಾಡಿದ್ದಾರೆ. ಹಾಡಹಗಲೇ ಕಳ್ಳತನ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಶರಣು ಸಲಗರ್ ಹರಿಹಾಯ್ದಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶರಣು ಸಲಗರ್, ಮುಡಾ ಹಗರಣ ಪ್ರೊಸಿಡಿಂಗ್ ಆಗುವ ಸಮಯದಲ್ಲಿ ಯತೀಂದ್ರ ಕೂಡಾ ಮೆಂಬರ್ ಆಗಿದ್ರು. ಸಿದ್ದರಾಮಯ್ಯರನ್ನ ನೋಡಿದ್ರೆ ಇಡೀ ದೇಶ, ರಾಜ್ಯದ ಜನತೆಗೆ ವಾಕರಿಕೆ ಬರುತ್ತಿದೆ. ಸಿದ್ದರಾಮಯ್ಯ ಅವರನ್ನ ಇಡಿ ಯಾವುದೇ ಕಾರಣಕ್ಕೂ ಬಿಡಲ್ಲ. ಸಿಎಂ ರಾಜೀನಾಮೆ ನೀಡಿ ಜೈಲಿಗೆ ಹೋಗ್ತಾರೆ. ರಾಜೀನಾಮೆ ಕೊಡದಿದ್ರೆ ಮತ್ತೆ ಹೋರಾಟ ಮಾಡ್ತೀವಿ. ರಾಜ್ಯದ 7 ಕೋಟಿ ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿದ್ದಾರೆ. 

ಆತ್ಮಸಾಕ್ಷಿ‌ ಅನ್ನೋದಕ್ಕಿಂತ ನೈತಿಕತೆ ಸಹ ದೊಡ್ಡದು, ಸಿದ್ದು ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸೋಮಣ್ಣ

ಸಿದ್ದರಾಮಯ್ಯಗೆ ಅಧಿಕಾರ ವ್ಯಾಮೋಹ ಹೆಚ್ಚಾಗಿದೆ. ರಾಜೀನಾಮೆ ನೀಡಿದ್ರೆ ದೇಶದಲ್ಲೇ ಕಾಂಗ್ರೆಸ್ ಮುಳುಗಿ ಹೋಗುವ ಭಯವಿದೆ. ಇಡೀ ದೇಶದಲ್ಲೇ ಸಿದ್ದರಾಮಯ್ಯ ಕಾಂಗ್ರೆಸ್ ಬೆನ್ನೆಲುಬಾಗಿದ್ದಾರೆ. ಮಾನ, ಮರ್ಯಾದೆ, ನೀತಿಗೆಟ್ಟವರು ಎಲ್ಲರೂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಶರಣು ಸಲಗರ್ ಕಿಡಿ ಕಾರಿದ್ದಾರೆ. 

65 ಕೋಟಿ‌ ಕೊಟ್ರೆ ಸೈಟ್ ವಾಪಸ್ ಕೊಡ್ತೀನಿ ಅಂತಾ ಹೇಳಿದ್ರು. ಆದ್ರೆ, ಈಗ ನಿಮ್ಮ ಪತ್ನಿಯವರು ವಾಪಸ್ ಕೊಡ್ತೀನಿ ಅಂತಾ ಪತ್ರ ಬರೆದಿದ್ದಾರೆ. ಜನರಿಗೆ ಎಮೋಷನಲ್ ಬ್ಲಾಕ್‌ಮೇಲ್ ಮಾಡ್ಬೇಕು ಅಂತಾ ಪತ್ರ ಬರೆಸಿದ್ದೀರಿ. ಇಡಿ ಭಯದಿಂದ ತಪ್ಪಿಸಿಕೊಳ್ಳಲು ಪತ್ರ ಬರೆಸಿದ್ದಾರೆ. ನನ್ನ ಹೆಂಡತಿ ತಪ್ಪು ಮಾಡಿದ್ದಾಳೆ ಬೇಕಿದ್ರೆ ಅವರಿಗೆ ಶಿಕ್ಷೆ ಕೊಡಿ ಎನ್ನುವ ಪ್ರಯತ್ನ ಮಾಡ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಶರಣು ಸಲಗರ್ ವಾಗ್ದಾಳಿ ನಡೆಸಿದ್ದಾರೆ.