Yadgir: ಅ.19ಕ್ಕೆ ಜನಸಂಕಲ್ಪ ಯಾತ್ರೆ ಸಮಾವೇಶ: ಶಾಸಕ ರಾಜೂಗೌಡ

ರಾಜ್ಯಾದ್ಯಂತ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅ.19 ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹುಣಸಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದರು.

Bjp Mla Raju Gowda Talks Over Jana Sankalpa Yatra gvd

ಹುಣಸಗಿ (ಅ.15): ರಾಜ್ಯಾದ್ಯಂತ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅ.19 ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹುಣಸಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 10:30 ಗಂಟೆಗೆ ಜರುಗಲಿರುವ ಜನಸಂಕಲ್ಪ ಸಮಾವೇಶಕ್ಕೆ ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚವ್ಹಾಣ, ಶ್ರೀರಾಮುಲು, ಎನ್‌. ರವಿಕುಮಾರ, ಸಂಸದರಾದ ರಾಜಾ ಅಮರೇಶ ನಾಯಕ, ಸಂಸದ ಉಮೇಶ ಜಾಧವ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರೈತರಿಗೆ ತಕ್ಷಣ ಬೆಳೆಹಾನಿ ಪರಿಹಾರ ಒದಗಿಸುವ ಕೆಲಸ ಮಾಡಿ: ಶಾಸಕ ಮುದ್ನಾಳ

ಜನಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಸುರಪುರ ಮತಕ್ಷೇತ್ರದ 40 ರಿಂದ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಅಭಿವೃದ್ಧಿ ಸಾಧನೆಯನ್ನು ಜನರ ಮುಂದೆ ತಿಳಿಸುತ್ತಾ, ಅಧಿಕ ಜನರನ್ನು ಸೇರಿಸುವ ಸಂಕಲ್ಪದೊದಿಗೆ ಅಭೂತಪೂರ್ವ ಉತ್ಸಾಹ, ಬೆಂಬಲ ಮತ್ತು ಸಂಕಲ್ಪದೊಂದಿಗೆ ಸುರಪುರ ಮತಕ್ಷೇತ್ರದಲ್ಲಿ ಜನಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ಇದಕ್ಕೆ ಕ್ಷೇತ್ರದ ಜನರ ಆಶೀರ್ವಾದ ಅತ್ಯವಶ್ಯಕ ಎಂದರು.

ನ್ಯಾ. ನಾಗಮೋಹನದಾಸ ವರದಿ ಜಾರಿ ಹಿನ್ನೆಲೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ ಎಂದರು. ರಾಜಕೀಯ ಲಾಭಕ್ಕಾಗಿ ಸತೀಶ ಜಾರಕಿಹೊಳಿ ಅವರು ನ್ಯಾ. ನಾಗಮೋಹನದಾಸ ವರದಿ ಕುರಿತು ಇಲ್ಲದ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಸರಕಾರ ಹೊರಡಿಸಿದ ಆದೇಶ ಪತ್ರವನ್ನು ಸಚಿವರ ಓದಿಕೊಂಡಿಲ್ಲ. ಮೊದಲು ಅಧ್ಯಯನ ಮಾಡಲಿ ಎಂದು ಹರಿಹಾಯ್ದರು.

ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಜನತೆಗೆ ಸಾಕಷ್ಟುಅನ್ಯಾಯ ಮಾಡಿದೆ. ಈ ಜನರನ್ನು ಕೇವಲ ಚುನಾವಣೆಗೆ ಮಾತ್ರ ಬಳಸಿಕೊಂಡಿದೆ. ಅವರ ಆಡಳಿತಾವಧಿಯಲ್ಲಿ ಕೇವಲ ಸಮಿತಿಗಳನ್ನು ರಚಿಸಿ ಬಿಡಲಾಗಿತ್ತು. ಆದರೆ, ನಮ್ಮ ಸರ್ಕಾರವು ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಪರಿಶಿಷ್ಟಜಾತಿ ಹಾಗೂ ಪಂಗಡದ ಸಮುದಾಯಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ ಎಂದರು.

ಹಿಂದೆ ಕಾಂಗ್ರೆಸ್‌ ಸರಕಾರದ ಆಡಳಿತ ಅವಧಿಯಲ್ಲಿ ತಾವೇ ಸಚಿವರಾಗಿದ್ದರು. ಅಂದು ಯಾಕೇ ನ್ಯಾ. ನಾಗಮೋಹನದಾಸ ವರದಿ ಬಗ್ಗೆ ಮೌನ ವಹಿಸಿದ್ದರು. ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಯಾಕೇ? ಮಾಡಲಿಲ್ಲ. ಈ ಪ್ರಶ್ನೆ ನಾನು ಕೂಡ ಮಾಡಬೇಕಾಗುತ್ತದೆ. ಇವರೆಗೂ ಯಾವುದೇ ಸರಕಾರ ಮಾಡದಂತ ಕೆಲಸ ನಮ್ಮ ಬಿಜೆಪಿ ಸರಕಾರ ಎಸ್‌ಸಿ ಮೀಸಲಾತಿ ಶೇ.15 ರಿಂದ 17 ಎಸ್‌ಟಿ ಜಾತಿಗೆ ಶೇ.3 ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಿದ್ದನ್ನು ಕಾಂಗ್ರೆಸ್‌ನವರು ಇದು ಸಮರ್ಥಿಸಿಕೊಳ್ಳಬೇಕು ಎಂದರು.

ಪಿಎಸ್‌ಐ ನೇಮಕಾತಿ: ಪ್ರಶ್ನೆಪತ್ರಿಕೆ 1ರಲ್ಲೂ ಅಕ್ರಮ, ಬ್ಲೂಟೂತ್‌ ಬಳಕೆ ಪತ್ತೆ..!

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನಮ್ಮ ಸರಕಾರ ಇರುವುದರಿಂದ ನ್ಯಾ. ನಾಗಮೋಹನದಾಸ ವರದಿ ಬಗ್ಗೆ ಅನುಮಾನ ಬೇಡ. ವಿಶೇಷವಾಗಿ ಎಸ್‌ಸಿ/ಎಸ್‌ಟಿ ಜನಾಂಗವು ಶೈಕ್ಷಣಿಕವಾಗಿ ಅಭಿವೃದ್ಧಿ ಆಗುವ ಮುಖ್ಯ ಅಂಶಗಳು ವರದಿಯಲ್ಲಿವೆ. ಬಿಜೆಪಿಯು ಎಲ್ಲಾ ವರ್ಗದ ಜನಾಂಗದ ಹಿತವನ್ನು ಕಾಪಾಡುತ್ತದೆ. ಬಿಜೆಪಿ ಪಕ್ಷ ದಲಿತರ ವಿರೋಧಿಯಲ್ಲ. ಜನರಲ್ಲಿನ ಹುಚ್ಚು ಭ್ರಮ ತೆಗೆದುಹಾಕಬೇಕು
- ರಾಜೂಗೌಡ, ಶಾಸಕ ಸುರಪುರ

Latest Videos
Follow Us:
Download App:
  • android
  • ios