ಬೆಂಗಳೂರು, (ಜುಲೈ.08): ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರ ವಿಕಾಸಸೌಧದ 4ನೇ ಮಹಡಿಯಲ್ಲಿರುವ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್ ಮಾಡಲಾಗಿದೆ. ಅಲ್ಲಿ ಐದಾರು ಜನ ಕೆಲಸ ಮಾಡುತ್ತಿದ್ದರು.

ಪುತ್ರನಿಗೆ ಸೋಂಕು: ಮಾಜಿ ಶಾಸಕ ಮೊಯ್ದೀನ್‌ ಬಾವಾ ಮನೆ ಸೀಲ್ಡೌನ್!

ಅವರೆಲ್ಲರಿಗೂ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಳೆದ ಒಂದು ವಾರದಿಂದ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಇದ್ದ ಕಾರಣ ಅವರು ಈ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಲಿಲ್ಲ.

ರೇಣುಕಾಚಾರ್ಯ ಸ್ಪಷ್ಟನೆ

ಈ ಬಗ್ಗೆ ಸ್ವತಃ ರೇಣುಕಾಚಾರ್ಯ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆತ್ಮೀಯರೇ ಬೆಂಗಳೂರಿನ ನನ್ನ ಸರ್ಕಾರಿ ಅಧಿಕೃತ ಕಚೇರಿಯ ಸಿಬ್ಬಂದಿಗೆ ಕೋವಿಡ್19 ಪಾಸಿಟಿವ್ ಪತ್ತೆಯಾಗಿದ್ದು, ಇಂದಿನಿಂದ ಶುಕ್ರವಾರ  ಸಂಜೆವರೆಗೂ ಬೆಂಗಳೂರಿನ ನನ್ನ ಸರ್ಕಾರಿ ಗೃಹ ಕಚೇರಿಯಲ್ಲಿ ನಾನು ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ಹಿತೈಷಿಗಳು ನೇರವಾಗಿ ಬಂದು ಭೇಟಿಯಾಗದೆ, ದೂರವಾಣಿ ಮೂಲಕ ಸಂಪರ್ಕಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ವಿಕಾಸೌಧದಲ್ಲಿ ಕೆಲಸ ಮಾಡುತ್ತಿದ್ದ 5 ಸಿಬ್ಬಂದಿಗೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ವು ಇದೀಗ ಕೊರೋನಾ ವಿಧಾಸಸೌಧಕ್ಕೆ ಲಗ್ಗೆ ಇಟ್ಟಿದೆ.