ಮದರಸಾಗಳ ಶಿಕ್ಷಣ ವ್ಯವಸ್ಥೆ ಬದಲಿಸಲು ಸರ್ಕಾರ ಮುಂದಾಗಿದೆ. ಇನ್ನು ಈ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಜಮೀರ್ ಅಹಮ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ, (ಆಗಸ್ಟ್.25): ಮದರಸಾಗಳ ಮೇಲೆ ಹಿಡಿತ ಸಾಧಿಸಲು ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನುವ ಆರೋಪ ಬರುತ್ತಿರುವ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಇದರಲ್ಲಿ ಏನು ತಪ್ಪಿದೆ ಹೇಳಿ ಎಂದು ಹೇಳಿದ್ದಾರೆ.

ನಾನು ಬಹಳ ಹಿಂದೆಯೆ ಹೇಳಿದ್ದೆ. ನಮ್ಮ ಹಿಂದು ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ಕೊಡ್ತಾರೆ. ಆದ್ರೆ ಅದೇ ಮದರಸಾಗಳಲ್ಲಿ ಭಯೋತ್ಪಾದನೆ ಕಲಿಸುತ್ತಾರೆ ಎಂದು ಬಹಳ ಹಿಂದೆಯೆ ಹೇಳಿದ್ದೆ.‌ಅದು ಹುಬ್ಬಳ್ಳಿ ಗಲಭೆಯಲ್ಲಿ ಅದು ಸಾಬೀತಾಗಿದೆ ಎಂದು ತಮ್ಮ ಹಳೆಯ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ಈಗ ಮದರಸಾದಲ್ಲಿ ನಡೆಯುವ ಶಿಕ್ಷಣ ಪದ್ದತಿ ಬಗ್ಗೆ ಮಾಹಿತಿ ಪಡೆದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.

ಗಣೇಶ ಹಬ್ಬದ ನಿಯಮಾವಳಿ ಬಗ್ಗೆ ಅಸಮಾಧಾನ
ಗಣೇಶ ಹಬ್ಬಕ್ಕೆ ಕಂದಾಯ ಇಲಾಖೆಯವರು ಅನಗತ್ಯ ರೂಲ್ಸ್ ಹಾಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದ ರೇಣುಕಾಚಾರ್ಯ,ಇದು ಸರಿ ಅಲ್ಲ ಎಂದು ಅಭಿಪ್ರಾಯ ಪಟ್ಟರು. ‌ಈ ಬಗ್ಗೆ ಸಿಎಂ ಹಾಗೂ ಕಂದಾಯ ಸಚಿವರ ಜೊತೆ ಮಾತಾಡುತ್ತೇ‌ನೆ‌ ಎಂದು ತಿಳಿಸಿದ್ರು. ಮುಸ್ಲಿಂರು ಅವರ ಹಬ್ಬದ ದಿನ ಮೆರವಣಿಗೆ ಮಾಡಲ್ವಾ?ನಾವು ಹಿಂದುಗಳಾಗಿ ಮಾಡಬಾರದಾ? ಎಂದು ಪ್ರಶ್ನೆ ಮಾಡಿದ ಅವರು
ಬಾಲಗಂಗಾಧರ ನಾಥರು ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ತಂದ ಆಚರಣೆ ಇದು. ಬ್ರಿಟಿಷ್ ಕಾಲದಿಂದ ಆಚರಣೆ ಆಗ್ತಿದೆ.
ಈಗ ಯಾಕೆ ಮಾಡಬಾರದು ಎಂದು ತಮ್ಮ ಸರ್ಕಾರದ ನಿಲುವನ್ನೇ ಪ್ರಶ್ನೆ ಮಾಡಿದ್ದಾರೆ.ಕಂದಾಯ ಇಲಾಖೆ ತಂದ ರೂಲ್ಸ್ ಬದಲಾಯಿಸಬೇಕು ಎಂದು ಆಗ್ರಹ ಪೂರ್ವಕ‌ ಮನವಿ‌ ಮಾಡಿದ್ದಾರೆ ರೇಣುಕಾಚಾರ್ಯ.

ಸಾವರ್ಕರ್ ಫೋಟೊ‌ ಮಸೀದಿ ಮುಂದೆ ಹಾಕಬೇಕು
ಇತ್ತಿಚೆಗೆ ಸಿದ್ದರಾಮಯ್ಯ ಒಂದು ಹೇಳಿಕೆ‌ ನೀಡಿದ್ದರು. ಮುಸ್ಲಿಂ ಏರಿಯಾದಲ್ಲಿ‌ ಯಾಕೆ ಸಾವರ್ಕರ್ ಫೋಟೊ‌ ಹಾಕಬೇಕು ಎಂದು ಕೇಳಿದ್ದರು. ಸಿದ್ದರಾಮಯ್ಯ ಹೇಳಿಕಗೆ ಬಿಜೆಪಿಗರು ಉರಿ ಉರಿ ಕೆಂಡವಾಗಿದ್ರು. ಈಗ ಮುಂದುವರಿದು ಮಾತನಾಡಿರುವ ರೇಣುಕಾಚಾರ್ಯ, 
ಸಾವರ್ಕರ್ ಫೋಟೊ‌ ಎಲ್ಲಾ ಕಡೆ ಹಾಕಬೇಕು. ಅದೆ ರೀತಿ ಮಸೀದಿಯಲ್ಲೂ ಹಾಕಬೇಕು, ಮಸೀದಿ ಮುಂದೆಯೂ ಹಾಕಬೇಕು. ಯಾಕೆ ಹಾಕಬಾರದು, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅಲ್ಲವೇ ಎಂದು ಪ್ರಶ್ನೆ ಮಾಡಿದ್ರು. ಇದೇ ವೇಳೆ‌ ಟಿಪ್ಪು ಜಯಂತಿ ಆಚರಣೆ‌ ಬಗ್ಗೆ ಪ್ರಶ್ನೆ ಮಾಡಿದ ರೇಣುಕಾಚಾರ್ಯ, ಮುಸ್ಲಿಂರು ಸತ್ತವರ ಫೋಟೊ‌ ಮನೆಯಲ್ಲಿ ಹಾಕಲ್ಲ.ಯಾಕೆ ಹಾಕಲ್ಲ.ಈಗ ಟಿಪ್ಪು ಅಂತ ದೇಶದ್ರೋಹಿ ನ್ನು ಜಯಂತಿ ಹೆಸರಲ್ಲಿ ವಿಜೃಂಭಣೆ ಮಾಡ್ತಿರಾ ಎಂದು ಕಾಂಗ್ರೆಸ್ ನಾಯಕರ‌ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನದು ಅಲ್ಲ
ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ಕ್ಕೆ ಅವಕಾಶ ನೀಡಬೇಕು. ಕಾರಣ ಕಂದಾಯ ಜಮೀನು ಅಷ್ಟಕ್ಕೂ
ಪಾಕಿಸ್ತಾನಕ್ಕೆ ಹೋಗಿ ನಾವು ಹಬ್ಬ ಮಾಡ್ತಾ ಇಲ್ಲ. ಮಾಡ್ತಾ ಇರೋದು ಇಲ್ಲೆ.. ಜಮೀರ್ ಹಬ್ಬ ಮಾಡೋಕೆ‌ ಬಿಡಲ್ಲ ಎನ್ನೋಕೆ ಅದೇನು ಇವನ ಅಪ್ಪನ ಆಸ್ತಿ ಅಲ್ಲ ಜಮೀರ್ ಹುಷಾರ್, ನಿನಗೆ ಇದು ಎಚ್ಚರಿಕೆ ಎಂದು ಏಕವಚನದಲ್ಲೇ ಕಿಡಿಕಾರಿದರು...