* ಸಿಎಂ ರೇಸ್‌ನಲ್ಲಿರುವ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಗಂಭೀರ ಆರೋಪ* ಕಾಂಗ್ರೆಸ್ ನಾಯಕಿ ಜೊತೆಗೆ ಲಿಂಕ್ ಇತ್ತು ಎಂದು ಯತ್ನಾಳ್* ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದ ಬಿಜೆಪಿ ಶಾಸಕ

ವಿಜಯಪುರ, (ಜು.20): ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಿಎಂ ರೇಸ್ ನಲ್ಲಿ ಸಚಿವ ಮುರುಗೇಶ್ ನಿರಾಣಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಇದರ ಮಧ್ಯೆ ನಿರಾಣಿ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.

ಹೌದು.....ವಿಜಯಪುರದಲ್ಲಿ ಹತ್ಯೆಯಾದ ಕಾಂಗ್ರೆಸ್ ನಾಯಕಿ ಜೊತೆ ಮುರುಗೇಶ್ ನಿರಾಣಿ ಲಿಂಕ್ ಇತ್ತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. 

ವಿಜಯಪುರ ಕೈ ನಾಯಕಿ ಶವ ಪತ್ತೆ: ಅನೈತಿಕ ಸಂಬಂಧದ ಶಂಕೆ

ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿಡಿಗಳಿವೆ. ಯಾರದ್ದೂ ಬೇಕಾದರೂ ಸಿಡಿ ಇರಬಹುದು ಎಂದು ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಸಂಸ್ಥಾಪಕ ಎ. ಆಲಂ ಪಾಷಾ ಗಂಭೀರ ಆರೋಪ ಮಾಡಿದದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರದಲ್ಲಿ ಹತ್ಯೆಯಾದ ಮಹಿಳೆ ಜೊತೆಗೆ ನಿರಾಣಿ ಲಿಂಕ್ ಇತ್ತು. ಆಕೆಯ ಜೊತೆಗೆ ತಾಸುಗಟ್ಟಲೆ ನಿರಾಣಿ ಮಾತಾಡುತ್ತಿದ್ದರು ಎಂದು ಪರೋಕ್ಷವಾಗಿ ಕೊಲೆಯಾದ ಕೈ ಮುಖಂಡೆ ರೇಷ್ಮಾ ಪಡೆಕನೂರ್ ಜೊತೆಗೆ ಸಂಬಂಧ ಇತ್ತು ಎಂದ ಯತ್ನಾಳ್ ಆರೋಪಿಸಿದರು.

ಕೊಲೆಯಾದಾಗ ಗರ್ಭಿಣಿಯಾಗಿದ್ರಾ ಕೈ ನಾಯಕಿ ರೇಷ್ಮಾ?

ನಾನು ಹಿಂದೆಯೇ ಹೇಳಿದ್ದೆ ರಾಜ್ಯದಲ್ಲಿ ಸಿಡಿ ಕೋಟಾ ಇದೆ. ಅದು ಸತ್ಯವಾಗಿದೆ. ಆ ಸಿಡಿಗಳನ್ನ ಮಠಾಧೀಶರು ನೋಡಿದ್ದಾರೆ. ಕೆಲ ಮಠಾಧೀಶರು ಸಿಡಿಗಳನ್ನ ಸಂತಸದಿಂದ ನೋಡಿದ್ದಾರೆ. ಇನ್ನು ಕೆಲ ಮಠಾಧೀಶರು ಸಿಡಿ ನೋಡಿ ಕಣ್ಣುಮುಚ್ಚಿಕೊಂಡಿದ್ದಾರೆ ಎಂದರು.

ಯುವರಾಜ್ ಮೂಲಕ ಸಿನಿಮಾ ನಟಿಯರನ್ನ ದೆಹಲಿ ಕರೆದುಕೊಂಡು ಹೋಗಿದ್ದರು ಎಂದು ಆರೋಪಿಸಿದ ಯತ್ನಾಳ್, ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಸೆ ಆಮೀಷ ಒಡ್ಡುತ್ತಿದ್ದಾರೆ ಎಂದು ತಿಳಿಸಿದರು.