ವಿಜಯಪುರ (ಮೇ. 21): ‘ಕೈ’ ನಾಯಕಿ ರೇಷ್ಮಾ ಪಡೆಕನೂರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಲ್ಲಾಪುರದ ರೇಷ್ಮಾ‌ ಆಪ್ತ  ಸಮೀವುಲ್ಲಾ ಹೊಸ ಬಾಂಬ್ ಸಿಡಿಸಿದ್ದಾರೆ. 

ರೇಷ್ಮಾ ಮೊದಲ ಪತಿಗೆ ವಿಚ್ಚೇದನ ನೀಡಿದ್ದಳು. ತೌಫಿಕ್ ನನ್ನು ಬಹಳ ಇಷ್ಟಪಡುತ್ತಿದ್ದರು. ಅವರಿಗಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದರು. ತೌಫಿಕ್ ಪೈಲ್ವಾನ್ ಹಾಗೂ ರೇಷ್ಮಾ ನಡುವೆ ಅನ್ಯೋನ್ಯ ಸಂಬಂಧವಿತ್ತು.  ತೌಫಿಕ್ ಮಗುವಿಗೆ ಜನ್ಮ ನೀಡಲು 4 ತಿಂಗಳ ಗರ್ಭಿಣಿಯಾಗಿದ್ದಳು ಎಂದು ರೇಷ್ಮಾ‌ ಆಪ್ತ  ಸಮೀವುಲ್ಲಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.   

ವಿಜಯಪುರ ಕೈ ನಾಯಕಿ ಶವ ಪತ್ತೆ: ಅನೈತಿಕ ಸಂಬಂಧದ ಶಂಕೆ

ತೌಫಿಕ್- ರೇಷ್ಮಾ ಜಗಳ ಅತೀ ಶೀಘ್ರವಾಗಿ ಮುಗಿದು ಇಬ್ಬರೂ ಒಂದಾಗಲಿದ್ದರು.  ತೌಫಿಲ್ ಮೇಲೆ ಹಾಕಿದ್ದ ಕೇಸ್ ವಾಪಸ್ ತೆಗೆದುಕೊಳ್ಳಲು ತಯಾರಿದ್ದಳು. ಅದಕ್ಕಾಗಿ ನಾನು ಅವಳಿಗೆ ವಕೀಲರ ಜೊತೆ ಮಾತನಾಡುವಂತೆ ತಿಳಿಸಿದೆ. ಅವಳು ತನ್ನ ಹಕ್ಕಿಗಾಗಿ ಹೋರಾಡಿದ್ದಳು. ಈ ಹತ್ಯೆ ಹಿಂದೆ ಪ್ರಭಾವಿಗಳ ಕೈ ಇದೆ ಎಂದು ಸಮ್ಮಿವುಲ್ಲಾ ಅನುಮಾನ ವ್ಯಕ್ತಪಡಿಸಿದ್ದಾರೆ. 

ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣದ ಬಗ್ಗೆ  ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ ಹೇಳಿಕೆ ನೀಡಿದ್ದಾರೆ.  ಪೋಸ್ಟ್ ಮಾರ್ಟಮ್ ರಿಪೋರ್ಟ್ ಇನ್ನೂ ಬಂದಿಲ್ಲ. ಇನ್ನೂ FSL ರಿಪೋರ್ಟ್ ಬಂದಿಲ್ಲ.  ರೇಷ್ಮಾ ಆಪ್ತ ಸಮಿಉಲ್ಲಾ ಅದ್ಹೇಗೆ ಹೇಳುತ್ತಾರೆ?  ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರೋಕೆ ಇನ್ನು 15 ದಿನಗಳು ಬೇಕು. ಇಲ್ಲಿಯವರೆಗೂ ಯಾರನ್ನು ಬಂಧಿಸಿಲ್ಲ. ಹತ್ಯೆ ಪ್ರಕರಣ ಭೇದಿಸಲು ಮೂರು ತಂಡ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಗಳ ಬಂಧನ ಮಾಡಲಾಗುವುದು ಎಂದಿದ್ದಾರೆ.