ವಿಜಯಪುರ, (ಡಿ.02): ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್​.ಆರ್​ ಸಂತೋಷ್​ ಅವರು ಆತ್ಮಹತ್ಯೆ ಪ್ರಯತ್ನಿಸಿದ್ದು, ನಂತರ ಬೇರೆ ಮಾತ್ರೆ ತೆಗೆದುಕೊಂಡಿರುವುದಕ್ಕೆ ಈ ರೀತಿಯಾಗಿದೆ ಎಂದು ಸಂತೋಷ್ ಹೇಳಿಕೆ ಕೊಟ್ಟಿದ್ದಾರೆ.

ಆದರೆ ಈ ಕಥೆಯಲ್ಲಿ ಬಹುದೊಡ್ಡ ಸೀಕ್ರೇಟ್​ ಒಂದು ಅಡಗಿದೆ ಎಂದು ಶಾಸಕ ಬಸನಗೌಡ ಪಾಟಿಲ್​ ಯತ್ನಾಳ್​ ಹೊಸ ಬಾಂಬ್ ಸಿಡಿಸಿದ್ದಾರೆ.

ಯಡಿಯೂರಪ್ಪ ಮೊಮ್ಮಗ ಸಂತೋಷ್ ಸುಸೈಡ್ ಬಾಂಬ್‌ನ ಅಸಲಿ ಕಥೆ ಇದು

ಸಂತೋಷ್​ ಆತ್ಮಹತ್ಯೆ ಪ್ರಯತ್ನದ ಹಿಂದೆ ಭಾರಿ ದೊಡ್ಡ ಕಥೆಯಿದೆ. ಎಲ್ಲ ಘಟನಾವಳಿಗಳು ನನಗೆ ಗೊತ್ತಿದೆ. ಕಾಲ ಬಂದಾಗ ಎಲ್ಲವನ್ನ ನಾನು ಹೇಳುತ್ತೇನೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.

 ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಲಿ, ಆಮೇಲೆ ಎಲ್ಲವನ್ನು ವಿಚಾರವನ್ನು ಬಹಿರಂಗ ಮಾಡುತ್ತೇನೆ ಎಂದು ಯತ್ನಾಳ್​ ಗುಡುಗಿದರು. ಇದು ಬಿಜೆಪಿಯಲ್ಲಿ ಮಾತ್ರವಲ್ಲದೇ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ.