Asianet Suvarna News Asianet Suvarna News

'ನಿಮ್ಮಲ್ಲಿ 135 ಶಾಸಕರಿದ್ರೂ, ಆಡಳಿತ ನಡೆಸೋಕೆ ನಮ್ಮ ವೀರ್ಯಾಣು ಬೇಕಾ..?' ಕಾಂಗ್ರೆಸ್‌ ವಿರುದ್ಧ ಯತ್ನಾಳ್‌ ಕಿಡಿ

ಕಾಂಗ್ರೆಸ್‌ನವರಿಗೆ ಧಮ್ ಇಲ್ಲ.. 135 ಶಾಸಕರಿದ್ರೂ ನಿಮಗೆ ನಮ್ಮ ವಿರ್ಯಾಣು ಬೇಕಾ.. ಎಂದು ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

BJP Mla Basanagouda Patil Yatnal Slams On Congress Govt At Ballari gvd
Author
First Published Sep 8, 2023, 7:22 PM IST

ಬಳ್ಳಾರಿ (ಸೆ.08): ಕಾಂಗ್ರೆಸ್‌ನವರಿಗೆ ಧಮ್ ಇಲ್ಲ.. 135 ಶಾಸಕರಿದ್ರೂ ನಿಮಗೆ ನಮ್ಮ ವಿರ್ಯಾಣು ಬೇಕಾ.. ಎಂದು ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಿನಕ್ಕೊಬ್ಬ ಬಿಜೆಪಿಯ ಮಾಜಿ ಹಾಲಿ ಶಾಸಕರನ್ನು ಕರೆದು ಡಿಕೆಶಿ ಮಾತನಾಡ್ತೇನೆ. 135 ಜನ ಶಾಸಕರಿದ್ರೂ ಆಡಳಿತ ನಡೆಸೋದಕ್ಕೆ ನಿಮಗೆ ನಮ್ಮದೇ ವಿರ್ಯಾಣು ಬೇಕು ಅಂದ್ರೇ ಏನು ಮಾಡೋಣ. 

ಐದು ಲಕ್ಷ ಸಿಕ್ತದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳ್ತಾನೆ. ಐದು ಕೋಟಿ ಕೊಡ್ತೇನೆ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳತ್ತಾನಾ..? ಮಾನಮರ್ಯಾದೆ ಇದೆಯಾ ನಿಮಗೆ ಹಣ ಕೊಡ್ತೇನೆ ಅಂದ್ರೇ ಜೀವ ಕಳೆದುಕೊಳ್ಳುತ್ತಾ‌..?  ಕಮನ್ ಸೆನ್ಸ್ ಬೇಕು. 135  ಸೀಟು ಗೆದ್ದ ಮೇಲೆ ಎಷ್ಟು ದುರಂಹಕಾರ ಬಂದೆ ಎಂದ್ರೇ ಸೂರ್ಯ ಚಂದ್ರರನ್ನು ಅಳುವ ಲೆಕ್ಕಕ್ಕೇ ಹೋಗಿದ್ದಾರೆ ಎಂದರು. ಆತ್ಮಹತ್ಯೆ ಮಾಡಿಕೊಳ್ತಾರೆ ಅಂದ್ರೇ ನಾಳೆಯೇ ಐದು ಕೋಟಿ ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡ್ತೇನೆ. 

ಉದಯನಿಧಿ ಸ್ಟಾಲಿನ್ ಸನಾತನ ಹೇಳಿಕೆಯನ್ನು ಕಾಂಗ್ರೆಸ್ ಯಾಕೆ ಖಂಡಿಸಿಲ್ಲ: ಪ್ರಲ್ಹಾದ್‌ ಜೋಶಿ

ಚಾಲೆಂಜ್ ಮಾಡಿ ಹೇಳ್ತೇನೆ. ಇಂತ ಸಚಿವರನ್ನು ಇಟ್ಟುಕೊಂಡು ಅಧಿಕಾರ ನಡೆಸೋದಕ್ಕೆ ಆಗಲ್ಲವೆಂದು ಬಿಜೆಪಿಯವರ ಕರೆಯುತ್ತಿದ್ದಾರೆ. ಡಿಸೆಂಬರ್‌ವರೆಗೂ ಸರ್ಕಾರ ಉಳಿಯೋದಿಲ್ಲ ಇನ್ನೂ ಐದು ವರ್ಷ ಆಳೋದು ದೂರದ ಉಳಿತು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹಗುರವಾಗಿ ಮಾತನಾಡ್ತೇನೆ. ಈ ಸರ್ಕಾರ ಉಳಿಯೋದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಬೇಸಿಕ್ ಇಲ್ಲ ಅಸ್ಥಿತ್ವನೇ ಇಲ್ಲ. ಇನ್ನೇನು ಸರ್ಕಾರ ಉಳಿಯುತ್ತದೆ. ಲೋಕಸಭೆ ಎದುರಿಸಲು ಧಮ್ ಇಲ್ಲ ಕಾರ್ಯಕರ್ತರ ಮತ್ತು 135 ಶಾಸಕರ ಬಳಿ ಧಮ್ ಇಲ್ಲ. ಹೀಗಾಗಿ ಹೊಸ ವಿರ್ಯಾಣು ಬೇಕಿದೆ ಎಂದು ಯತ್ನಾಳ್ ಆಕ್ರೋಶವನ್ನು ವ್ಯಕ್ತಪಡಿಸಿದರು.

ಇನ್ನು ನಾನು ಮನೆಯಲ್ಲಿ ಕೂರಲ್ಲ, 3-4 ದಿನಗಳಲ್ಲಿ ರಾಜ್ಯ ಪ್ರವಾಸ: ಬಿಎಸ್‌ವೈ

ಜೆಡಿಎಸ್ ಜೊತೆಗೆ ಹೊಂದಾಣಿಕೆ ವಿಚಾರ ಅದು ಕೇಂದ್ರದ ನಾಯಕರು ತೆಗೆದುಕೊಂಡ ನಿರ್ಣಯ. ನಮ್ಮ ವ್ಯಾಪ್ತಿಯಲ್ಲಿ ಬರುವ ವಿಚಾರವಲ್ಲ. ಕೇಂದ್ರ ವ್ಯಾಪ್ತಿಲ್ಲಿದೆ ಇದಕ್ಕೆ ಹೆಚ್ಚು ಮಾತನಾಡಲ್ಲ. ಕೆಲ ನಿರ್ಣಯ ದೇಶದ ಹಿತದೃಷ್ಟಿ ಮತ್ತು ಲೋಕಸಭೆ ಚುನಾವಣೆ ಹಿನ್ನಲೆ ಕೆಲ ನಿರ್ಣಯ ತೆಗೆದುಕೊಳ್ಳುತ್ತಾರೆ. ನಮಗೆ ಕೊಟ್ಟ ಜವಾಬ್ದಾರಿ ಮಾತ್ರ ಅಷ್ಟೇ ಕೆಲಸ ಮಾಡ್ತೇನೆ.. ನನ್ನ ವಯಕ್ತಿಕ ಅಭಿಪ್ರಾಯ ಪಕ್ಷದ ಮೇಲೆ ಹೇರೋದಿಲ್ಲ.. ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯ. ಚುನಾವಣೆ ಸಂದರ್ಭದಲ್ಲಿ ಕೆಲ ವೊಂದು ಹೇಳಬೇಕಿತ್ತು ಹೇಳಿದೆ. ಈಗ ಲೋಕಸಭೆ ಗೆಲ್ಲಬೇಕು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಮೋದಿ ಕೈಯಲ್ಲಿ ದೇಶ ಸುರಕ್ಷಿತವಾಗಿದೆ. ರಾಜ್ಯದಲ್ಲಿ 25 ಗೆಲ್ಲಬೇಕು ಅದೊಂದೇ ನಮ್ಮ ಗುರಿ. ವಿಪಕ್ಷ ನಾಯಕ ವಿಚಾರದಲ್ಲಿ ನನ್ನ ಪರ ವಿರೋಧ ಇದ್ದವರು ಪಕ್ಷದಲ್ಲಿ ಇದ್ದಾರೆ.. ಪ್ಲಸ್ ಮೈನಸ್ಸು ಇದ್ದಂತೆ ಯಾರು ಪರಿಪೂರ್ಣ ಇದ್ದಾರೆ. ಪ್ರತಿ ಮನೆಯಲ್ಲಿ ದೋಷ ಇದ್ದಂತೆ ಇಲ್ಲಿಯೂ ಇದೆ. ಲೋಕಸಭೆ ಟಿಕೆಟ್ ಯಾವುದೇ ಚರ್ಚೆ ಇಲ್ಲ.. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಯಾವುದೇ ಪೈನಲ್ ಆಗಿಲ್ಲ ಎಂದರು.

Follow Us:
Download App:
  • android
  • ios