ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಹಿನ್ನೆಲೆ ಬಿಜೆಪಿ ಬೈಠಕ್, ಸಂಪುಟ ವಿಸ್ತರಣೆಗೆ ಆರಂಭದಲ್ಲೇ ವಿಘ್ನ   ಜ. 7ರಿಂದ 9ರವರೆಗೆ ನಡೆಯಬೇಕಿದ್ದ ಬಿಜೆಪಿಯ ಸಚಿವರು ಹಾಗೂ ಹಿರಿಯ ಮುಖಂಡರ ಚಿಂತನಾ ಸಭೆ ಮುಂದೂಡಿಕೆ

ಬೆಂಗಳೂರು(ಜ.06): ಹೆಚ್ಚುತ್ತಿರುವ ಕೋವಿಡ್‌ (Covid) ಪ್ರಕರಣಗಳ ಹಿನ್ನೆಲೆಯಲ್ಲಿ ಜ. 7ರಿಂದ 9ರವರೆಗೆ ನಡೆಯಬೇಕಿದ್ದ ಬಿಜೆಪಿಯ (BJP) ಸಚಿವರು ಹಾಗೂ ಹಿರಿಯ ಮುಖಂಡರ ಚಿಂತನಾ ಸಭೆ (BJP Meeting) ಮುಂದೂಡಿಕೆಯಾಗಿದೆ. ಸರ್ಕಾರದ (Govt) ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಬಳಿಯ ನಂದಿ ಬೆಟ್ಟದಲ್ಲಿ ಚಿಂತನಾ ಸಭೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸಿದ್ಧತೆಗಳೂ ನಡೆದಿದ್ದವು. ಆದರೆ, ಇದೀಗ ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ (New Rules) ಹೊರಡಿಸಿರುವುದರಿಂದ ಚಿಂತನಾ ಸಭೆ ಮುಂದೂಡಲಾಗಿದೆ. ಮುಂದಿನ ವಾರ ಪರಿಸ್ಥಿತಿ ಆಧರಿಸಿ ಸಭೆಯ ದಿನಾಂಕ ನಿಗದಿಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಚಿವರ ಮೌಲ್ಯ ಮಾಪನಕ್ಕೆಂದು ನಂದಿ ಬೆಟ್ಟದಲ್ಲಿ (Nandi Hill) ಬಿಜೆಪಿ ಬೈಠಕ್ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಭೆ ಮುಂದೂಡಿಕೆಯಾಗಿದ್ದು, ಇದರಿಂದ ರಾಜ್ಯದ ಸಚಿವರು (Ministers) ಆತಂಕದಿಂದ ಬಚಾವ್ ಆಗಿದ್ದಾರೆ. ವಿಕೆಂಡ್ ಕರ್ಪ್ಯೂ ಕಾರಣಕ್ಕೆ ಬಿಜೆಪಿ ಬೈಠಕ್ ಮುಂದೂಡಿಕೆಯಾಗಿದ್ದು, ಜನವರಿ 7 ರಿಂದ ಆರಂಭವಾಗಬೇಕಿದ್ದ ಬೈಠಕ್ ಮುಂದೂಡಿಕೆ ನಿರ್ಧಾರಕ್ಕೆ ಹಲವು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೈಠಕ್ ಮುಂದೂಡಿಕೆಯಾಗಿದ್ದರಿಂದ ಸಚಿವ ಸಂಪುಟ ಪುನಾರಚನೆಯ ಪ್ರಕ್ರಿಯೆಗೂ ಬ್ರೇಕ್ ಬೀಳುವ ಸಾಧ್ಯತೆ ಇದ್ದು, ಇದರಿಂದ ಸಂಪುಟ ವಿಸ್ತರಣೆಗೆ ಆರಂಭದಲ್ಲೇ ವಿಘ್ನವಾದಂತಾಗಿದೆ. 

ನಂದಿ ಬೆಟ್ಟದಲ್ಲಿ (Nandi Hill) ನಡೆಯಲಿದ್ದ ಬೈಠಕ್ ನಲ್ಲಿ ರಾಷ್ಟ್ರೀಯ ನಾಯಕರು (Leaders) ಭಾಗವಹಿಸಲು ತಿರ್ಮಾನಿಸಲಾಗಿತ್ತು. ಮೂರು ದಿನಗಳ ಬೈಠಕ್ ನಲ್ಲಿ ಸಚಿವರ ಕಾರ್ಯವೈಖರಿ ಕುರಿತು ಪ್ರಸ್ತಾಪಿಸಲು ಅಜೆಂಡಾ ರೂಪಿಸಲಾಗಿತ್ತು. ಉತ್ತಮ ಕಾರ್ಯನಿರ್ವಹಣೆ ಮಾಡದ ಸಚಿವರ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿತ್ತು. ಬೈಠಕ್ ಮುಂದಕ್ಕೆ ಹೋಗಿರುವುದರಿಂದ ಸಚಿವರ ಮೌಲ್ಯ ಮಾಪನಕ್ಕೂ ಬ್ರೇಕ್ ಬಿದ್ದಂತಾಗಿದೆ. ಇದರಿಂದ ಸದ್ಯಕ್ಕೆ ಅನೇಕ ಸಚಿವರು (Ministers) ಮೌಲ್ಯಮಾಪನದಿಂದ ಬಚಾವ್ ಆದಂತಾಗಿದೆ. ಸಚಿವರ ಮೌಲ್ಯ ಮಾಪನ ಬಳಿಕ ಸಂಪುಟ ವಿಸ್ತರಣೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ.

ಸಂಕ್ರಾಂತಿ ಬಳಿಕ ಸಚಿವ ಸಂಪುಟ ಪುನಾರಚನೆಯತ್ತ (Cabinet Expansuion) ಕೇಂದ್ರ ನಾಯಕರು ಗಮನಹರಿಸಿದ್ದು, ಪುನಾರಚನೆಗೂ ಮುನ್ನವೇ ಮೌಲ್ಯಮಾಪನ ಮಾಡಲು ಚಿಂತಿಸಿದ್ದರು. ಕೊರೋನಾ ಹೆಚ್ಚಳದ ಕಾರಣಕ್ಕೆ ಇದೀಗ ಬೈಠಕ್ ಹಾಗೂ ಸಂಪುಟ ವಿಸ್ತರಣೆಗೆ ಸದ್ಯಕ್ಕೆ ತಡೆಯಾಗಿದಂತಾಗಿದೆ. 

ಸಿಎಂ ಭೇಟಿಯಾಗಿ ಜಾರಕಿಹೊಳಿ : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion ) ಚರ್ಚೆ ಜೋರಾಗಿದೆ. ಸಂಕ್ರಾಂತಿ ವೇಳೆಗೆ ಹೊಸ ಸಂಪುಟ ರಚನೆಯಾಗಬಹುದು ಎಂಬ ಗುಸು ಗುಸು ಕೇಳಿಬರುತ್ತಿದೆ. ಅಲ್ಲದೇ ಕೆಲ ಹಳಬರಿಗೆ ಕೊಕ್ ನೀಡಿ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎನ್ನುವ ಸುದ್ದಿಯು ಜೋರಾಗಿದೆ. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 

 ಸಿಎಂ ಬೊಮ್ಮಾಯಿ ಅವರ ಆರ್ ಟಿ ನಗರ ನಿವಾಸದಲ್ಲಿ ಭೇಟಿಯಾದ ರಮೇಶ್ ಜಾರಕಿಹೊಳಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಂಪುಟ ಪುನಾರಚನೆ (Cabinet Expansion) ಎಂಬ ಸುದ್ದಿ ಬೆನ್ನಲ್ಲೇ ಸಿಎಂ ಭೇಟಿಯಾಗಿರುವ ರಮೇಶ್ ಜಾರಕಿಹೊಳಿ ನಡೆಯು ಕುತೂಹಲಕ್ಕೆ ಕಾರಣವಾಗಿದೆ, ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಯೇ ಸಿಎಂ ಭೇಟಿಗೆ ಮಹೇಶ್ ಕುಮಟ ಹಳ್ಳಿ (mahesh Kumatalli) ಅವರು ಸಹ ಆಗಮಿಸಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ. 

ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ರಮೇಶ್ ಜಾರಕಿಹೊಳಿ ಮಾದ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.