Asianet Suvarna News Asianet Suvarna News

Vijayapura: ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ!

ಮಹಾನಗರ ಪಾಲಿಕೆಗೆ 4 ವರ್ಷಗಳ ಬಳಿಕ ಚುನಾವಣೆ ಬಂದಿದೆ. ಈ ನಡುವೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿತ್ತು. ಆದ್ರೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲೆಬೇಕು ಎನ್ನುವ ಪಣ ತೊಟ್ಟಿರುವ ಬಿಜೆಪಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ.

BJP Meeting Over Vijayapura Mahanagara Palike Ward Elections gvd
Author
First Published Oct 12, 2022, 11:08 PM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಅ.12): ಮಹಾನಗರ ಪಾಲಿಕೆಗೆ 4 ವರ್ಷಗಳ ಬಳಿಕ ಚುನಾವಣೆ ಬಂದಿದೆ. ಈ ನಡುವೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿತ್ತು. ಆದ್ರೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲೆಬೇಕು ಎನ್ನುವ ಪಣ ತೊಟ್ಟಿರುವ ಬಿಜೆಪಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ.

ವಿಜಯಪುರ ಬಿಜೆಪಿಯಲ್ಲಿಗ ಒಗ್ಗಟ್ಟಿನ ಮಂತ್ರ: ವಿಜಯಪುರ ಮಹಾನಗರ ಪಾಲಿಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಹಲವು ವರ್ಷಗಳಿಂದ ಮನೆಯೊಂದು ಮೂರು ಬಾಗಿಲು ಆಗಿರುವ ಜಿಲ್ಲಾ ಬಿಜೆಪಿ ಘಟಕ ಚುನಾವಣೆಯಲ್ಲಾದರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ಮಂಗಳವಾರ ಸಂಜೆ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಬಿಜೆಪಿಯ ರಾಜಕೀಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಕರೆ ತರುವ ಸಾಹಸವನ್ನು ಮಾಡಿದೆ. ಸದ್ಯಕ್ಕೆ ಇದು ಫಲಪ್ರದವಾಗಿದೆ. ಆದರೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ಇನ್ನೂ ಸಮಯವಿರುವ ಕಾರಣ ಟಿಕೇಟ್ ಹಂಚಿಕೆಯಲ್ಲಿ ತಕ್ಕಡಿ ಸ್ವಲ್ಪ ಏರುಪೇರಾದರೂ ಸಹ ಮತ್ತೆ ಬಿಜೆಪಿ ಜಿಲ್ಲಾ ಘಟಕ ಅದೇ ರಾಗ ಅದೇ ಹಾಡಿಗೆ ಮರಳಿದರೆ ಅಚ್ಚರಿ ಪಡಬೇಕಿಲ್ಲ.

ಮುಸ್ಲಿಮರಲ್ಲ, ಬ್ರಾಹ್ಮಣರು ಅಲ್ಪಸಂಖ್ಯಾತರು ಅವರಿಗೆ ಮೀಸಲಾತಿ ನೀಡಿ: ಯತ್ನಾಳ್‌

ವೇದಿಕೆ ಮೇಲೆ ಒಂದಾದ ಗುರುಶಿಷ್ಯರು: ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಭಿನ್ನಮತ ಇರುವದು ಗುಟ್ಟಾಗಿ ಏನು ಉಳಿದಿಲ್ಲ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿಯ ರಾಜಕೀಯ ಭಿನ್ನಮತ ಬಿಜೆಪಿ ಜಿಲ್ಲಾಧ್ಯಕ್ಷರ ಕೈ ಕಟ್ಟಿ ಹಾಕಿದೆ. ಬಿಜೆಪಿಯಲ್ಲಿ ಹಾಲಿ ಶಾಸಕರ ಬಣ, ಮಾಜಿ ಶಾಸಕರ ಬಣ ಒಂದಡೇ ಇದ್ದರೆ, ಜಿಲ್ಲಾಧ್ಯಕ್ಷರು ಇವರ ನಡುವಿನ ಇನ್ನೊಂದು ಬಣವಾಗಿ ಉಳಿದು ಬಿಟ್ಟಿದ್ದಾರೆ. ಒಂದು ಕಾಲದಲ್ಲಿ ಗುರು- ಶಿಷ್ಯರಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಾಲಿ ಹಾಗೂ ಮಾಜಿ ಶಾಸಕರು ಸದ್ಯ ತಮ್ಮದೇ ಬಣಗಳನ್ನು ಸೃಷ್ಟಿಸಿ ಕೊಂಡಿದ್ದಾರೆ. ಆದ್ರೆ ಪಾಲಿಕೆ ಚುನಾವಣೆ ಹಿನ್ನೆಲೆ ನಡೆದ ಸಭೆಯಲ್ಲಿ ಒಂದೆ ವೇದಿಕೆಯಲ್ಲಿ ಗುರು ಶಿಷ್ಯರು ಕಾಣಿಸಿಕೊಂಡಿದ್ದಾರೆ. ವಿಜಯಪುರ ಜನರಿಗೆ ಗೊತ್ತಿರುವ ಹಾಗೇ ಒಂದೆ ವೇದಿಕೆ ಮೇಲೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಕಾಣಿಸಿಕೊಳ್ತಿರಲಿಲ್ಲ. ಈಗ ಪಾಲಿಕೆ ಚುನಾವಣೆ ಹಿನ್ನೆಲೆ ನಾಯಕರು ನಡೆಸಿದ ಪ್ರಯತ್ನದಿಂದಾಗಿ ವೇದಿಕೆ ಹಂಚಿಕೊಂಡಿದ್ದಾರೆ.

ಮೂರು ಬಾಗಿಲ ಬದಲಿಗೆ ತೆರೆಯುತ್ತಾ ಒಂದೇ ಬಾಗಿಲು?: ಬಿಜೆಪಿ ನಗರದಲ್ಲಿ ಮನೆಯೊಂದು ಮೂರು ಬಾಗಿಲು ಪರಿಸ್ಥಿತಿ ಇದ್ದಿದ್ದರಿಂದಲೇ ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಟಿಕೇಟ್ ಹಂಚಿಕೆ‌ ಮಾಡುವದು ಜಿಲ್ಲಾಧ್ಯಕ್ಷರಿಗೆ ತಲೆನೋವಾಗಿದೆ. ಇದೇ ಕಾರಣಕ್ಕೆ ರಾಜ್ಯ ಬಿಜೆಪಿ ಘಟಕ ತಮ್ಮ ಮುಖಂಡರೊಬ್ಬರಿಗೆ ಈ ಜವಾಬ್ದಾರಿ ಹೊರೆಸಿದ್ದಾರೆ. ಅವರು ಮೂರು ಬಾಗಿಲು ಸೇರಿಸಿ ಒಂದೇ ಬಾಗಿಲು ತೆರೆಯಲು ಸಭೆ ಮೇಲೆ ಸಭೆ ನಡೆಸಿದ್ದಾರೆ. ಸದ್ಯಕ್ಕಂತು ಮೇಲ್ನೊಟಕ್ಕೆ ಪರಿಸ್ಥಿತಿ ಸುಧಾರಿಸುತ್ತಿರುವಂತೆ ಕಂಡಿದೆ. ಆದ್ರೆ ಮುಂದಿನ ದಿನಗಳನ್ನ ನಿರ್ಧರಿಸಲು ಆಗದ ಪರಿಸ್ಥಿತಿ ಹಾಗೆ ಉಳಿದುಕೊಂಡಿದೆ.

ಭಿನ್ನಮತದಿಂದ ಉಂಟಾಗಿದ್ದ ಟಿಕೇಟ್‌ ಹಂಚಿಕೆ ಗೊಂದಲ: ನಾಮಪತ್ರ ಸಲ್ಲಿಕೆ ಆರಂಭಗೊಳ್ಳುವ ಮುನ್ನ ಟಿಕೇಟ್ ಆಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಬೇಕಾಗಿತ್ತು. ಆಗ ಅವರ ಎದುರು ಮೂರು ಬಾಗಿಲು ತೆರೆದುಕೊಂಡ ಕಾರಣ ಯಾರಿಗೆ ಸಲ್ಲಿಸಿದರೆ ತಮಗೆ ಟಿಕೇಟ್ ದೊರೆಯಬಹುದು ಎನ್ನುವ ಗೊಂದಲ ಅವರಲ್ಲಿ ಉಂಟಾಗಿತ್ತು. ಗೌಡರ ಹಿಂಬಾಲಕರು ಗೌಡರಿಗೆ ಸಲ್ಲಿಸಿದ್ದರೆ, ಶೆಟ್ಟರ್ ಹಿಂಬಾಲಕರು ಶೆಟ್ಟರ್ ಅವರಿಗೆ, ಇನ್ನೂ ತಟಸ್ಥ ಇರುವ ಆಕಾಂಕ್ಷಿ ಅಭ್ಯರ್ಥಿಗಳು ಜಿಲ್ಲಾ ಘಟಕಕ್ಕೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗ ಆಕಾಂಕ್ಷಿಗಳು ಟಿಕೇಟ್ ಪಡೆಯಬೇಕಾದರೆ ಎಲ್ಲ ನಾಯಕರಿಗೂ ಜೀ ಹುಜೂರ್ ಅನ್ನಬೇಕಾಗಿದೆ.

ಕಟೀಲ್‌ ಆರೋಪ ಗಂಭೀರವಾಗಿ ಪರಿಗಣಿಸುವ ಹಾಗಿಲ್ಲ: ಮಾಜಿ ಸಚಿವ ಎಂ.ಬಿ.ಪಾಟೀಲ

ಸಭೆಯಲ್ಲಿ ಸೌಹಾರ್ದತೆ, ಪರಸ್ಪರ ಟೀಕಿಸಲಿಲ್ಲ: ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಪರಸ್ಪರ ಟೀಕಾ ಪ್ರಹಾರಗಳನ್ನೆ ಮಾಡುತ್ತ ಬಂದಿದ್ದರು. ಹಲವು ವೇದಿಕೆಗಳಲ್ಲಿ, ಸುದ್ದಿಗೋಷ್ಟಿಗಳಲ್ಲಿ ವಾಕ್‌ ಪ್ರಹಾರಗಳು ನಡೆಯುತ್ತಲೇ ಇದ್ದವು. ಆದ್ರೆ ನಿನ್ನೆ ನಡೆದ ಸಭೆಯಲ್ಲಿ ವೇದಿಕೆಯಲ್ಲಿದ್ದರೂ ಅವರ ಭಾಷಣದಲ್ಲಿ ಪರೋಕ್ಷ ಅಥವಾ ನೇರವಾಗಿ ಯಾವುದೇ ಟೀಕೆ ಮಾಡಲಿಲ್ಲ, ಕೇವಲ ಜಿಲ್ಲಾ ಘಟಕ ಕರೆದ ಸಭೆಯ ಉದ್ದೇಶದ ಬಗ್ಗೆ ಮಾತನಾಡಿದರು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಭೆಯ ಮುಖ್ಯ ಉದ್ದೇಶ ಟಿಕೇಟ್ ಆಕಾಂಕ್ಷಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ತಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನ ನಡೆಯಿತು ಎನ್ನಲಾಗಿದೆ. ಇನ್ನೂ ಅಕ್ಟೋಬರ್ 17ರವರೆಗೆ ನಾಮಪತ್ರ ಸಲ್ಲಿಸುವ ಅವಕಾಶ ಇರುವ ಕಾರಣ ಪಕ್ಷದಲ್ಲಿ ನಡೆಯುವ ಬೆಳವಣಿಗೆಯನ್ನು ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸುತ್ತಿರುವದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

Follow Us:
Download App:
  • android
  • ios