Asianet Suvarna News Asianet Suvarna News

ಜನರಿಂದ ಜನರಿಗಾಗಿ ಬಿಜೆಪಿ ಪ್ರಣಾಳಿಕೆ: ಸಚಿವ ಸುಧಾಕರ್‌

ಜನರಿಂದ ಜನರಿಗಾಗಿಯೇ ಪ್ರಣಾಳಿಕೆ ಸಿದ್ಧಪಡಿಸಬೇಕು ಮತ್ತು ಆ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ಉದ್ದೇಶದಿಂದ ಬಿಜೆಪಿ ಪ್ರಣಾಳಿಕೆಗಾಗಿ ಸಲಹೆಗಳನ್ನು ಪಡೆಯಲು ಕೇಂದ್ರ ಕ್ರೀಡಾ ಸಚಿವರೇ ಇಲ್ಲಿಗೆ ಆಗಮಿಸಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. 

BJP Manifesto By The People For The people Says Minister Dr K Sudhakar gvd
Author
First Published Mar 13, 2023, 11:05 AM IST

ಚಿಕ್ಕಬಳ್ಳಾಪುರ (ಮಾ.13): ಜನರಿಂದ ಜನರಿಗಾಗಿಯೇ ಪ್ರಣಾಳಿಕೆ ಸಿದ್ಧಪಡಿಸಬೇಕು ಮತ್ತು ಆ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ಉದ್ದೇಶದಿಂದ ಬಿಜೆಪಿ ಪ್ರಣಾಳಿಕೆಗಾಗಿ ಸಲಹೆಗಳನ್ನು ಪಡೆಯಲು ಕೇಂದ್ರ ಕ್ರೀಡಾ ಸಚಿವರೇ ಇಲ್ಲಿಗೆ ಆಗಮಿಸಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. ನಗರದ ಎಸ್‌ ಜೆಸಿಐಟಿ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಸಂಜೆ ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನ ಸಮಿತಿ ಆಯೋಜಿಸಿದ್ದ ಸಲಹೆ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಸಿದ್ಧಪಡಿಸುವ ಪ್ರಣಾಳಿಕೆ ನೈಜತೆಯಿಂದ ಕೂಡಿರಬೇಕು ಎಂಬ ಗುರಿಯೊಂದಿಗೆ ಸಾರ್ವಜನಿಕರಿಂದ ಸಲಹೆ ಪಡೆಯಲಾಗುತ್ತಿದ್ದು, ನಂತರ ನೂರಕ್ಕೆ ನೂರು ಪ್ರಣಾಳಿಕೆ ಅನುಷ್ಠಾನ ಮಾಡಲು ಸರ್ಕಾರ ಶ್ರಮಿಸಲಿದೆ ಎಂದು ಅವರು ಹೇಳಿದರು. ಕೇಂದ್ರದ ಕ್ರೀಡಾ ಸಚಿವರು ಚಿಕ್ಕಬಳ್ಳಾಪುರಕ್ಕೆ ಬಂದು, ಸ್ಥಳೀಯ ಕ್ರೀಡಾಪಟುಗಳು, ಯುವ ಆಟಗಾರರು, ತರಬೇತಿದಾರರ ಸಲಹೆ ಪಡೆದು, ಮುಂದೆ ರಾಜ್ಯದಲ್ಲಿ ಯಾವ ರೀತಿ ಕ್ರೀಡೆ. ಯುವಕರ ಸಬಲೀಕರಣಕ್ಕೆ ಅಗತ್ಯವಿರುವ ಪ್ರಣಾಳಿಕೆ ಅನುಷ್ಠಾನಕ್ಕೆ ತರಬೇಕು ಎಂಬ ಬಗ್ಗೆ ಸಲಹೆ ಪಡೆಯುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಸೇರಲಿರುವ ಸಚಿವ ನಾರಾಯಣಗೌಡ ಮೋದಿ ಕಾರ್ಯಕ್ರಮದಲ್ಲಿ ಭಾಗಿ

ಚಿಕ್ಕಬಳ್ಳಾಪುರಕ್ಕೆ ಕ್ರೀಡಾಗ್ರಾಮ, ಸಿಂಥೆಟಿಕ್‌ ಟ್ರ್ಯಾಕ್‌: ಸಿಂಥೆಟಿಕ್‌ ಟ್ರಾಕ್‌ ಆಧುನಿಕ ಸೌಲಭ್ಯಗಳಿರುವ ವಾಲಿಬಾಲ್‌ ಕೋರ್ಚ್‌, ಕ್ರೀಡಾಗ್ರಾಮ ನಿರ್ಮಾಣ ಸಹಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗತ್ಯವಿರುವ ಎಲ್ಲಾ ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದಾಗಿ ಕೇಂದ್ರದ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಪ್ರಕಟಿಸಿದರು. ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನ ಸಮಿತಿಯ ಸಲಹೆ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಕ್ರೀಡಾಪಟುಗಳು, ಯುವ ಆಟಗಾರರು, ದೈಹಿಕ ಶಿಕ್ಷಕರು ಮತ್ತು ಕ್ರೀಡಾ ತರಬೇತುದಾರರಿಂದ ಕ್ರೀಡೆಗಳ ಅಭಿವೃದ್ಧಿಗೆ ಅಗತ್ಯವಿರುವ ಸಲಹೆಗಳನ್ನು ಪಡೆದು ಎಲ್ಲವನ್ನೂ ಈಡೇರಿಸಲು ಕ್ರಮವಹಿಸುವುದಾಗಿ ಅವರು ಹೇಳಿದರು.

ಉದ್ಯೋಗವಕಾಶ ಕಲ್ಪಿಸಲು ಬದ್ಧ: ಬಿಪಿಎಡ್‌ ಮತ್ತು ಎಂಪಿಎಡ್‌ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ ನಂತರ ಹೆಚ್ಚಿನ ಅವಕಾಶಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವಂತೆ ಕೋರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಗಮನ ಹರಿಸಿ, ಉದ್ಯೋಗವಕಾಶಗಳನ್ನು ಕಲ್ಪಿಸುವ ಭರವಸೆ ನೀಡಿದರು. ಕ್ರೀಡೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗತ್ಯವಿರುವ ಅನುದಾನ ಮತ್ತು ಸೌಲಭ್ಯಗಳನ್ನು ನೀಡುವುದಾಗಿ ಅವರು ಭರವಸೆ ನೀಡಿದರು.

ಬೆಂ-ಮೈ ದಶಪಥ ಅಡಿಗಲ್ಲು ನಮ್ಮದೆ, ಉದ್ಘಾಟಿಸುತ್ತಿರೋದು ನಾವೇ: ಸಿಎಂ ಬೊಮ್ಮಾಯಿ

ನಂತರ ಹಾಜರಿದ್ದ ಕ್ರೀಡಾಪಟುಗಳು, ದೈಹಿಕ ಶಿಕ್ಷಕರು ಮತ್ತು ಕ್ರೀಡಾ ತರಬೇತುದಾರರ ಸಲಹೆ ಕೇಳಿದ ಕೇಂದ್ರ ಸಚಿವರಿಗೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ಅಥ್ಲೆಟಿಕ್‌ ಟ್ರ್ಯಾಕ್‌ ಮತ್ತು ವಾಲೀಬಾಲ್‌ ಕೋರ್ಚ್‌ ನೀಡುವಂತೆ ಬೇಡಿಕೆ ಇಡಲಾಯಿತು. ಈ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ರೈತ ಮೋರ್ಚಾ ಜಿಲ್ಲಾ ಮಾಜಿ ಅಧ್ಯಕ್ಷ ರಾಮಣ್ಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ಆನಂದ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ಕೃಷ್ಣಾರೆಡ್ಡಿ, ಹಿರಿಯ ಮುಖಂಡರಾದ ಲಕ್ಷ್ಮಿನಾರಾಯಣಗುಪ್ತ, ಎ.ವಿ.ಬೈರೇಗೌಡ ಸೇರಿದಂತೆ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios