Asianet Suvarna News Asianet Suvarna News

ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ಗೆ ಮುಖಭಂಗ, ಸ್ವಕ್ಷೇತ್ರದ 5 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿಗೆ ಸೋಲು!

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲು ಕಂಡ ಬಳಿಕ, ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿಯ ಬೆಂಬಲಿಗರು ಅನುರಾಗ್‌ ಠಾಕೂರ್‌ರನ್ನು ಟೀಕೆ ಮಾಡಿದ್ದು, ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಐದೂ ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಸೋತಿದ್ದಕ್ಕೆ ಸಿಟ್ಟಾಗಿದ್ದಾರೆ.
 

BJP lost all 5 Assembly seats under Union Minister Anurag Thakur Lok Sabha constituency Hamirpur in Himachal Pradesh san
Author
First Published Dec 10, 2022, 6:21 PM IST

ಶಿಮ್ಲಾ (ಡಿ.10): ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರತಿನಿಧಿರುವ ಹಮೀರ್‌ಪುರ ಲೋಕಸಭಾ ಕ್ಷೇತ್ರದ ಎಲ್ಲಾ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಇದರ ಬೆನ್ನಲ್ಲಿಯೇ ಬಿಜೆಪಿ ಬೆಂಬಲಿಗರು ಅನುರಾಗ್‌ ಠಾಕೂರ್‌ ಅವರ ಕಾರ್ಯಕ್ಷಮತೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಅನುರಾಗ್‌ ಠಾಕೂರ್‌ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ವಿಧಾಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಸೋಲಿನತ್ತ ತಳ್ಳಿದ್ದರೆ, ಇನ್ನೊಂದೆಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ತಮ್ಮ ತವರು ಕ್ಷೇತ್ರ ಬಿಲಾಸ್‌ಪುರದಲ್ಲಿನ ಎಲ್ಲಾ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ವಿಜಯ ತಂದಿದ್ದಾರೆ. ಠಾಕೂರ್ ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು ಸ್ಪರ್ಧಿಸುತ್ತಿದ್ದ ಸುಜಾನ್‌ಪುರದಿಂದ ಕಾಂಗ್ರೆಸ್ ಅಭ್ಯರ್ಥಿ 399 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರೇಮ್‌ ಕುಮಾರ್‌ ಧುಮಾಲ್‌ ಅವರು ನಿವೃತ್ತಿ ಬಯಿಸಿದ್ದಾರೆ ಎಂದು ಸ್ವತಃ ಅವರ ಕುಟುಂಬ ಹಾಗೂ ಪಕ್ಷ ಹೇಳಿದ್ದರಿಂದ ಈ ಬಾರಿ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್‌ ನೀಡಿರಲಿಲ್ಲ. ತಂದೆ ನಿವೃತ್ತಿಗೆ ಬಯಸಿದ್ದನ್ನು ಘೋಷಣೆ ಮಾಡಿದ ಬೆನ್ನಲ್ಲಿಯೇ ಅನುರಾಗ್‌ ಠಾಕೂರ್‌ ತಮ್ಮ ತಂದೆಯ ಸಾರ್ವಜನಿಕ ಜೀವನವನ್ನು ನೆನೆದು ಕಣ್ನೀರು ಹಾಕಿದ್ದರು.

ಬೋರಂಜ್ ನಲ್ಲಿ ಬಿಜೆಪಿ ಕೇವಲ 60 ಮತಗಳ ಅಂತರದಿಂದ ಸೋತಿದೆ. ಇನ್ನು ಹಮೀರ್‌ಪುರ  ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದರೆ, ಬರ್ಸರ್ ಮತ್ತು ನಾದೌನ್‌ನಲ್ಲಿ ಕಾಂಗ್ರೆಸ್‌ ಗೆಲುವು ಕಂಡಿದೆ. ನಡ್ಡಾ ಅವರ ತವರು ಬಿಲಾಸ್‌ಪುರದಲ್ಲಿ, ಬಿಜೆಪಿ ಅಭ್ಯರ್ಥಿಗಳು ಎಲ್ಲಾ ಮೂರು ವಿಧಾನಸಭಾ ಸ್ಥಾನಗಳನ್ನು ಗೆದ್ದಿದ್ದರೂ, ಗೆಲುವಿನ ಅಂತರ ಬಹಳ ಕಡಿಮೆಯಾಗಿದೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲು ಕಂಡ ನಂತರ, ಅನುರಾಗ್ ಠಾಕೂರ್ ತಕ್ಷಣವೇ ಬಿಜೆಪಿ ಬೆಂಬಲಿಗರಿಂದ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಒಳಗಾದರು, ಪಕ್ಷದ ಆಂತರಿಕ ಕಚ್ಚಾಟಕ್ಕೆ ಅನುರಾಗ್‌ ಠಾಕೂರ್‌ ಅವರೇ ಕಾರಣ ಎಂದು ದೂಷಣೆ ಮಾಡಲಾಗಿದೆ. 68 ಕ್ಷೇತ್ರಗಳ ಪೈಕಿ ಕನಿಷ್ಠ 21 ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು  ಸ್ಪರ್ಧೆ ಮಾಡಿದ್ದರ. ಅವರಲ್ಲಿ ಇಬ್ಬರು ಮಾತ್ರ ಗೆಲುವು ಕಂಡಿದ್ದಾರೆ. ಆದರೆ ಇತರರು ಗಮನಾರ್ಹ ಮತಗಳನ್ನು ಪಡೆದರು. ಈ ಮತಗಳು ಮೂಲತಃ ಬಿಜೆಪಿಯ ಮತಗಳಾಗಿದ್ದವು.

25 ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ವಿಧಾನಸಭೆಗೆ ಆಯ್ಕೆ, ಸಿಎಂ ರೇಸ್‌ನಲ್ಲೂ ಮಹಿಳಾ ಕ್ಯಾಂಡಿಡೇಟ್!

ಒಟ್ಟಾರೆ ಹಿಮಾಚಲ ಪ್ರದೇಶದಲ್ಲಿ ಒಟ್ಟು ಮೂರು ಬಣಗಳ ಬಿಜೆಪಿ ತಿಕ್ಕಾಟ ಕಂಡುಬಂದವು. ಅನುರಾಗ್‌ ಠಾಕೂರ್‌ ಹಾಗೂ ಜೆಪಿ ನಡ್ಡಾ ಅವರದ್ದು ಒಂದೊಂದು ಬಣವಾಗಿದ್ದರೆ, ಇನ್ನೊಂದು ಬಣ ಸಿಎಂ ಆಗಿದ್ದ ಜೈರಾನ್‌ ಠಾಕೂರ್‌ ಅವರದ್ದಾಗಿತ್ತು.

ಆಪರೇಷನ್‌ ಕಮಲದ ಭೀತಿ, ಗೆಲುವಿನ ಬಳಿಕ ತಕ್ಷಣವೇ ಕಚೇರಿಗೆ ಬನ್ನಿ, ಕಾಂಗ್ರೆಸ್‌ ಆದೇಶ!

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ 40 ಸೀಟ್‌ಗಳಲ್ಲಿ ಗೆಲುವು ಕಾಣುವ ಮೂಲಕ ಸರಳ ಬಹುಮತ ದಾಖಲಿಸಿದ್ದರೆ, ಬಿಜೆಪಿ 25 ಸೀಟ್‌ ಗೆಲ್ಲವಲ್ಲಿ ಮಾತ್ರ ಯಶ ಕಂಡಿತು. ಆಪ್‌ ಒಂದೇ ಒಂದು ಸೀಟ್‌ ಗೆಲ್ಲಲು ವಿಫಲವಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಅಧಿಕಾರ ಬದಲಾಗುತ್ತಲೇ ಇರುತ್ತದೆ. ಆದರೆ, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಕಾರಣಕ್ಕಾಗಿ 2ನೇ ಅವಧಿಗೆ ಅಧಿಕಾರ ಹಿಡಿಯಬಹುದು ಎನ್ನುವ ನಿರೀಕ್ಷೆ ಇಡಲಾಗಿತ್ತು.

Follow Us:
Download App:
  • android
  • ios