* ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ  * ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ* ಎರಡು ದಿನದ ಹಿಂದೆಯೇ ಮೊದಲ ಪಟ್ಟಿ ಪ್ರಕಟಿಸಿತ್ತು

ಧಾರವಾಡ, (ಆ.21): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಅಭ್ಯರ್ಥಿಗಳ ತಯಾರಿಯಲ್ಲಿ ನಿರತವಾಗಿವೆ.

ಇನ್ನು ಬಿಜೆಪಿ ಇಂದು (ಆ.21) 15 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನುಬಿಡುಗಡೆ ಮಾಡಿದೆ. ಗುರುವಾರ ಮಧ್ಯರಾತ್ರಿ 30 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು.

ಸವದಿ, ಮುನೇನಕೊಪ್ಪ, ಕಾರಜೋಳ, ನಿರಾಣಿಗೆ ಬಿಜೆಪಿ ಮಹತ್ವದ ಹೊಣೆ

ನಾಮಪತ್ರ ಸಲ್ಲಿಸಲು ಆ. 23 ಕೊನೆಯ ದಿನವಾಗಿದೆ. ಒಟ್ಟು 82 ವಾರ್ಡ್‌ಗಳ ಪೈಕಿ 45 ಕ್ಷೇತ್ರಗಳಿಗಷ್ಟೇ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಇನ್ನು ಎಎಪಿ ಕೂಡ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಮುಂದಾಗಿದ್ದು, ಚುನಾವಣಾ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು: 
* ಅನೂಪ ಕುಮಾರ ಬಿಜವಾಡ (ವಾರ್ಡ್‌ ಸಂಖ್ಯೆ 61) 
* ಮಲ್ಲಪ್ಪ ಶಿರಕೋಳ (63)
* ರುಕ್ಮಿಣಿ ಶೇಜವಾಡಕರ (64)
* ಅನುಷಾ ಜಾಧವ (69)
* ಸ್ವಾಲೆಹಾಬೇಗಂ ಮಹಮ್ಮದ್‌ ಝಕ್ರಿಯಾ ಹೊಸೂರ (77)
* ಸಾರಿಕಾ ಬಿಜವಾಡ (81)
* ಶಾಂತಾ ಕೊಗೊಡ (82).
* ಸೀಮಾ ಎಸ್‌. ಮೊಗಲಿಶೆಟ್ಟರ್‌ (39)
* ಸಂತೋಷ ಚವ್ಹಾಣ (41)
* ಉಮಾ ಮುಕುಂದ (44)
* ಮಣಿಕಂಠ ಶ್ಯಾಗೋಟಿ (45)
* ವೀಣಾ ಬಾರದ್ವಾಡ (49)
* ಶ್ವೇತಾ ರಾಯನಗೌಡ್ರ (59)
* ಪಾರ್ವತೆವ್ವ ಹಿತ್ತಲಮನಿ (22)
* ಮರಿಗೆಪ್ಪ ಚನ್ನಪ್ಪ ಹೊರಡಿ (33).