Asianet Suvarna News Asianet Suvarna News

ಮುಸ್ಲಿಂ ಗೂಂಡಾಗಳ ಪರ ಸಿದ್ದರಾಮಯ್ಯ ಸರ್ಕಾರ ನಿಂತಿದೆ: ಬಿಎಸ್‌ವೈ, ಡಿವಿಎಸ್ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದವಿರುದ್ದ ಬಿಜೆಪಿಯನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.

BJP Leaders Slams On Siddaramaiah Congress Govt At Bengaluru gvd
Author
First Published Apr 22, 2024, 12:34 PM IST

ಬೆಂಗಳೂರು (ಏ.22): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದವಿರುದ್ದ ಬಿಜೆಪಿಯನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ .ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ರಾಜ್ಯವನ್ನು ಮತಾಂಧ ಭೂಮಿಯನ್ನಾಗಿ ಪರಿವರ್ತಿಸಿದೆ. ಮುಸ್ಲಿಂ ಗೂಂಡಾಗಳ ಪರ ನಿಂತಿದೆ. ಹಿಂದುಗಳನ್ನು ತೃತೀಯ ದರ್ಜೆ ನಾಗರಿಕರ ರೀತಿ ನೋಡಲಾಗುತ್ತಿದೆ ಎಂದು ಗಂಭೀರವಾಗಿ ಆಪಾದಿಸಿದ್ದಾರೆ. ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆಯಾಗಿದೆ. 

ತನ್ನದೇ ಪಕ್ಷದ ಚುನಾಯಿತ ಪ್ರತಿನಿಧಿಯ ಮಗಳ ಹತ್ಯೆಗೆ ನ್ಯಾಯ ಒದಗಿಸುವುದನ್ನು ಬಿಟ್ಟು ಆರೋಪಿ ಮನೆಗೆ ರಕ್ಷಣೆ ಭಾಗ್ಯ ಕೊಡುತ್ತಿರುವ ಸರ್ಕಾರಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನೋವಿನಿಂದ ನುಡಿದರು. ಯಡಿಯೂರಪ್ಪ ಅವರು ಮಾತನಾಡಿ, ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಕಳೆದುಕೊಂಡಿದ್ದಾರೆ. ಭಾರತದ ಭವಿಷ್ಯಕ್ಕಾಗಿ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ ಮತಾಂಧರನ್ನು ಹಿಡಿಯದೆ ಹಾಗೇ ಬಿಟ್ಟಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮನವಮಿ ಹಬ್ಬದ ದಿನ ರಾಮಭಕ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಕಲಾವಿದರಾದ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿಯ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. 

ಬಿಜೆಪಿ ಕೋಟೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್‌ನ ರಾಜೀವ್‌ ಗೌಡ ಸವಾಲು!

ಹಾವೇರಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಬೆಳಗಾವಿಯಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಪಮಾನಿಸಿದ ಪ್ರಕರಣ ಹಾಗೂ ಉಡುಪಿಯ ಹಾಸ್ಟೆಲ್ ಒಂದರಲ್ಲಿ ಹೆಣ್ಣು ಮಕ್ಕಳ ವಿಡಿಯೋ ಮಾಡಿದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಂದಿಲ್ಲ, ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವುದನ್ನು ನೋಡಿದರೆ ಮಹಿಳೆಯರು ಕರ್ನಾಟಕದಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿರುವುದು ಸ್ಪಷ್ಟ ಎಂದರು. ಶಿವಮೊಗ್ಗದಲ್ಲಿ ಔರಂಗಬೇಬ್ ದ್ವಾರ ನಿರ್ಮಾಣ, ಕೋಲಾರದಲ್ಲಿ ತಳವಾರು ಕಟೌಟ್ ಪ್ರದರ್ಶನ ಮಾಡಿದ ಪ್ರಕರಣ, ಹನುಮಾನ್ ಚಾಲೀಸ ಹಾಡನ್ನು ಬಿತ್ತರಿಸಿದ ಯುವಕನಿಗೆ ಥಳಿಸಿದವರನ್ನು ಹಾಗೇ ಬಿಟ್ಟದ್ದು, ರಾಮಮಂದಿರದ ಕರಸೇವಕರ ಮೇಲೆ ಪ್ರಕರಣ ದಾಖಲಿಸಿದ್ದು ಗಮನಿಸಿದರೆ ರಾಜ್ಯ ಸರಕಾರದ ಆಡಳಿತ ವೈಖರಿ ಅರ್ಥವಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯರ ಸರ್ಕಾರ ದಿವಾಳಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಾಜ್ಯದ ಯಾವುದಾದರೂ ಮೂಲೆಯಲ್ಲಿ ಒಂದು ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿದ್ದರೆ ತೋರಿಸಿ. ನೀರಾವರಿಯೋಜನೆಗಳೂಸಂಪೂರ್ಣಸ್ಥಗಿತವಾಗಿವೆ. ಗುಂಡಿಬಿದ್ದ ರಸ್ತೆಗಳ ಗುಂಡಿ ಮುಚ್ಚಲೂ ಇವರಿಂದ ಆಗುತ್ತಿಲ್ಲ. ಜನಹಿತವನ್ನು ಸಂಪೂರ್ಣ ಮರೆತು ಒಂದು ರೀತಿ ತುಘಲಕ್ ದರ್ಬಾರ್‌ನಡೆಸುತ್ತಿರುವ ಈ ಸರ್ಕಾರಕ್ಕೆ ಜನರೇ ಇವತ್ತು ಛೀಮಾರಿ ಹಾಕುತ್ತಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದದಿಂದ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲಲಿದ್ದೇವೆ. ಕಾಂಗ್ರೆಸ್ಸಿನವರು ತಾವು ಗೆಲ್ಲುವ ಮೂರ್ನಾಲ್ಕು ಕ್ಷೇತ್ರಗಳ ಹೆಸರು ಹೇಳಲಿ ಎಂದು ಇದೇ ವೇಳೆ ಸವಾಲು ಎಸೆದರು. 

ಹಿಂದುಗಳು ತೃತೀಯ ದರ್ಜೆ: ಸದಾನಂದಗೌಡ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳನ್ನು ದ್ವಿತೀಯ ದರ್ಜೆಯಲ್ಲ; ತೃತೀಯ ದರ್ಜೆಯ ನಾಗರಿಕರನ್ನಾಗಿ ನೋಡುವ ಕೆಟ್ಟ ವಾತಾ ವರಣ ನಿರ್ಮಾಣವಾಗಿದೆ ಎಂದು ಹೇಳಿದರು. ಮುಸ್ಲಿಂ ಭಯೋತ್ಪಾದಕರಿಗೆ, ಮತಾಂಧರಿಗೆ ಸರ್ಕಾರ ಎಲ್ಲ ರೀತಿಯ ರಕ್ಷಣೆ ಕೊಡುತ್ತಿದೆ. ಕುಕ್ಕರ್ ಬಾಂಬ್ ಸ್ಫೋಟದಿಂದ ಆರಂಭಿಸಿ ಬಾಂಬ್ ಬ್ಲಾಸ್ ಪ್ರಕರಣದವರೆಗೆ ಬರಿಯ ಮುಸಲ್ಮಾನ ಭಯೋತ್ಪಾದಕರೇ, ಮುಸಲ್ಮಾನ ಗೂಂಡಾಗಳೇ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ಸಿನ ಸಿದ್ದರಾ ಮಯ್ಯ, ಡಿ.ಕೆ.ಶಿವಕುಮಾರ್‌ ಅವರು ನಿಲ್ಲುತ್ತಿದ್ದು, ಇದೆಂಥ ವಿಪರ್ಯಾಸ ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯವು ಒಂದು ಕಾಲಘಟ್ಟದಲ್ಲಿ ಎಲ್ಲರನ್ನೂ ಸಮಾನತೆಯಿಂದ ನೋಡಿದೆ. ವಿಶ್ವಮಾನವನ ಸಂದೇಶವನ್ನು ನೀಡಿದ ನಾಡು ಕರ್ನಾಟಕ. 

ಲೋಕಸಭಾ ಕಣದಿಂದ ಹಿಂದೆ ಸರಿಯಲು ದಿಂಗಾಲೇಶ್ವರ ಸ್ವಾಮೀಜಿಗೆ ಡಿಕೆಶಿ ಮನವಿ

ಈಚುನಾವಣೆ ನಡೆಸುವುದೇ ಗೂಂಡಾಗಳ ಮುಖಾಂತರ ಎಂಬಂತೆ ಕರ್ನಾಟಕವನ್ನು ಬದಲಿಸಿದಂತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗೂಂಡಾಗಿರಿ, ಬೆದರಿಕೆ ತಂತ್ರ, ಹಿಂದೂಗಳ್ಯಾರೂ ಮನೆಯಿಂದ ಹೊರಕ್ಕೆ ಬರಬಾರದು, ಮತ ಹಾಕಲು ಬರಬಾರದು ಎಂಬ ಭಯದ ವಾತಾವರಣದ ಮೂಲಕ ಚುನಾವಣೆ ನಡೆಸುವ ಕಾಂಗ್ರೆಸ್ಸಿನವರ ಹುನ್ನಾರಕ್ಕೆ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರು ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಂದುವರೆದರೆ ಹಿಂದೂಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಉದ್ಭವಿಸಲಿದೆ.ಒಂದುವಿಶೇಷಕಾಲಘಟ್ಟದಲ್ಲಿ ನಾವಿದ್ದೇವೆ. ಕರ್ನಾಟಕದ ಈ ಬಾರಿಯ ಚುನಾವಣೆ ಒಂದು ರೀತಿಯಲ್ಲಿ ಭಯೋತ್ಪಾದಕರ ವಿರುದ್ಧ ಮತ್ತು ಹಿಂದೂ ಧಾರ್ಮಿಕ ವಿಚಾರ, ವಿಧಿವಿಧಾನಗಳನ್ನು ಅನುಷ್ಠಾನ ಮಾಡುವ ಪ್ರಾಮಾಣಿಕ ಮತ್ತು ಸಾಮಾನ್ಯ ವಿರುದ್ಧದ ಹೋರಾಟದಂತಿದೆ ಎಂದು ಗೌಡರು ವಿಶ್ಲೇಷಿಸಿದರು.

Follow Us:
Download App:
  • android
  • ios