Karnataka BJP Politics: ಸಿಎಂ ಬೊಮ್ಮಾಯಿ ಬದಲಾವಣೆ: ರಾಜ್ಯ ಬಿಜೆಪಿಗರ ಪ್ರತಿಕ್ರಿಯೆ
* ಕಟೀಲ್, ಕೇಂದ್ರ ಸಚಿವ ಜೋಶಿ ಸೇರಿದಂತೆ ಹಲವು ಬಿಜೆಪಿ ಮುಖಂಡರಿಂದ ಸ್ಪಷ್ಟನೆ
* ಕಾಂಗ್ರೆಸಿಗರೇ ಇಂಥ ಸುದ್ದಿ ಹರಡುತ್ತಿರಬಹುದು
* 2023ರವರೆಗೆ ಬೊಮ್ಮಾಯಿಯೇ ಸಿಎಂ
ಬೆಂಗಳೂರು(ಡಿ.26): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಬದಲಾವಣೆ ಸಾಧ್ಯತೆಯನ್ನು ರಾಜ್ಯದ ಬಿಜೆಪಿ(BJP) ಮುಖಂಡರು ಒಕ್ಕೊರಲಿನಿಂದ ಶನಿವಾರ ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, 2023ರ ಚುನಾವಣೆವರೆಗೂ(Election) ಬೊಮ್ಮಾಯಿ ಅವರೇ ಮುಖ್ಯಮಂತ್ರಿ. ರಾಜ್ಯ ಬಿಜೆಪಿಯಲ್ಲಿ ಅರಾಜಕತೆ ಸೃಷ್ಟಿಗೆ ಈ ರೀತಿಯ ಸುದ್ದಿ ಹರಡುತ್ತಿರಬಹುದು. ಇದರ ಹಿಂದೆ ಕಾಂಗ್ರೆಸ್ ಕೈವಾಡವೂ ಇರಬಹುದು ಎಂದು ಆರೋಪಿಸಿದ್ದಾರೆ.
ತವರು ಜಿಲ್ಲೆ ಹಾವೇರಿಯ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇತ್ತೀಚೆಗೆ ಮಾಡಿದ ಭಾವನಾತ್ಮಕ ಭಾಷಣದ ಬಳಿಕ ರಾಜ್ಯದಲ್ಲಿ(Karnataka) ಮುಖ್ಯಮಂತ್ರಿ ಬದಲಾವಣೆ ಕುರಿತು ಗುಸುಗುಸು ಮತ್ತೆ ಎದ್ದಿದ್ದವು. ಆದರೆ, ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel), ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಸೇರಿ ಹಲವು ಬಿಜೆಪಿ ಮುಖಂಡರು ಅಂಥ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.
Basavaraj Bommai in Vijayapura: ಸಿಎಂ ಆಗಮನ ಬೆನ್ನಲ್ಲೇ 200ಕ್ಕೂ ಅಧಿಕ ಅಂಗಡಿ ಮುಗ್ಗಟ್ಟುಗಳು ಬಂದ್!
ಕಪೋಲ ಕಲ್ಪಿತ-ಕಟೀಲ್:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಪೋಲ ಕಲ್ಪಿತ. ಬಿಜೆಪಿ ಸರ್ಕಾರದಲ್ಲಿ(BJP Government ) ಅರಾಜಕತೆ ಹುಟ್ಟು ಹಾಕಲು ಮುಖ್ಯಮಂತ್ರಿ(Chief Minister) ಬದಲಾವಣೆ ಸುದ್ದಿ ಹರಡಿಸುತ್ತಿದ್ದಾರೆ. ಕಾಂಗ್ರೆಸ್‌ನವರೇ(Congress) ಈ ಸುದ್ದಿ ಹುಟ್ಟು ಹಾಕಿರಬಹುದು ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, 2023ರ ಚುನಾವಣೆ ವರೆಗೂ ಬೊಮ್ಮಾಯಿ ಅವರೇ ಸಿಎಂ. ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಅವರ ಮಾರ್ಗದರ್ಶನದಲ್ಲಿ ಒಟ್ಟಾಗಿ ಎದುರಿಸಲಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೂಡ ಮುಖ್ಯಮಂತ್ರಿ ಬದಲಾವಣೆ ಎಂಬುದೆಲ್ಲ ಸುಳ್ಳು. ಇಂಥ ಸುದ್ದಿಗಳಿಗೆಲ್ಲ ಕಿವಿಗೊಡಬೇಡಿ ಎಂದು ಸಲಹೆ ನೀಡಿದ್ದಾರೆ.
2023ರವರೆಗೆ ಬೊಮ್ಮಾಯಿಯೇ ಸಿಎಂ:
ಮುಂದಿನ ಚುನಾವಣೆ ವರೆಗೆ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ(Murugesh Nirani) ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್(CC Patil) ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ ಅಲ್ಲ, 2023ರ ವರೆಗೆ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ನನ್ನ ಹೆಸರು ಮುಂದಿಟ್ಟುಕೊಂಡು ಸಿಎಂ ಬದಲಾವಣೆ ವಿಚಾರ ಹರಡುತ್ತಿರುವ ಹಿಂದೆ ನನ್ನ ಮತ್ತು ಬೊಮ್ಮಾಯಿ ನಡುವಿನ ಸಂಬಂಧ ಹಾಳುಗೆಡಹುವ ಪ್ರಯತ್ನ ಇರಬಹುದು ಎಂದು ನಿರಾಣಿ ಆರೋಪಿಸಿದ್ದಾರೆ.
ಸಿ.ಸಿ.ಪಾಟೀಲ ಕೂಡ ನಾಳೆ ಬೆಳಗ್ಗೆ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, 2023ರ ವರೆಗೆ ಬೊಮ್ಮಾಯಿ ಸಿಎಂ ಆಗಿರುವುದೂ ಅಷ್ಟೇ ಸತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
Karnataka Politics : ಜನರ ಸಹನೆಯ ಕಟ್ಟೆ ಒಡೆದಿದೆ : ಪ್ರಾಮಾಣಿಕವಾಗಿ ಇದ್ದರೆ ಮಾತ್ರ ಬೆಂಬಲ ಸಿಗುತ್ತದೆ
ಸಿಎಂ ಬದಲು- ಮಾಧ್ಯಮ ಸೃಷ್ಟಿ:
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಕೇವಲ ಮಾಧ್ಯಮ(Media) ಸೃಷ್ಟಿ. ಖುದ್ದು ಗೃಹ ಸಚಿವ ಅಮಿತ್ ಶಾ ಅವರೇ ಬಹಿರಂಗ ವೇದಿಕೆಯಲ್ಲಿ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಕಪೋಲ ಕಲ್ಪಿತ. 2023ರ ಚುನಾವಣೆವರೆಗೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ. ಬಿಜೆಪಿ ಸರ್ಕಾರದಲ್ಲಿ ಅರಾಜಕತೆ ಹುಟ್ಟು ಹಾಕಲು ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹರಡಿಸುತ್ತಿದ್ದಾರೆ. ಕಾಂಗ್ರೆಸ್‌ನವರೇ ಈ ಸುದ್ದಿ ಹುಟ್ಟು ಹಾಕಿರಬಹುದು ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ. ಈ ವಿಚಾರವಾಗಿ ಸುಳ್ಳು ಸುದ್ದಿಗಳಿಗೆಲ್ಲ ಕಿವಿಗೊಡಬಾರದು. ಸಿಎಂ ಬದಲಾವಣೆ ಆಗುವುದಿದ್ದರೆ ಮೊದಲು ನನಗೆ ಗೊತ್ತಾಗುತ್ತಿತ್ತು. ಇಂಥ ಸುದ್ದಿಯನ್ನು ಯಾರೋ ಹರಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.