Basavaraj Bommai in Vijayapura: ಸಿಎಂ ಆಗಮನ ಬೆನ್ನಲ್ಲೇ 200ಕ್ಕೂ ಅಧಿಕ ಅಂಗಡಿ ಮುಗ್ಗಟ್ಟುಗಳು ಬಂದ್!
*ಭದ್ರತಾ ದೃಷ್ಟಿಯಿಂದ ಮಾರ್ಕೆಟ್ ನ ವಾಜಪೇಯಿ ರಸ್ತೆ ಬಂದ್!
*ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ
*ವಾಜಪೇಯಿ ಪ್ರತಿಮೆಗೆ ಮಾಲಾರ್ಪನೆ ಮಾಡಲಿರುವ ಸಿಎಂ!
ವಿಜಯಪುರ (ಡಿ. 25): ಇಂದು ವಿಜಪುರಕ್ಕೆ ಸಿಎಂ ಆಗಮನ ಹಿನ್ನೆಲೆ ಎಲ್‌ಬಿಎಸ್ ಮಾರ್ಕೆಟ್ ಕಿರಾಣಾ ಬಜಾರ್ ಬಂದ ಮಾಡಲಾಗಿದ್ದು ಭದ್ರತಾ ದೃಷ್ಟಿಯಿಂದ ಮಾರ್ಕೆಟ್ ನ ವಾಜಪೇಯಿ ರಸ್ತೆಗೆ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಕಿರಣ ಬಜಾರ್ ಬಳಿಯಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆ ಸಿಎಂ ಬಸವರಾಜ ಬೊಮ್ಮಾಯಿ (Basvaraj Bommai) ಮಾಲಾರ್ಪಣೆ ಮಾಡಲಿದ್ದಾರೆ.
ಸಿಎಂ ಆಗಮನದ ಹಿನ್ನೆಲೆ ಅಟಲ್ ಬಿಹಾರಿ ವಾಜಪೇಯಿ ಮಾರ್ಗದಲ್ಲಿರುವ 200ಕ್ಕೂ ಅಧಿಕ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಪ್ರಾಂಗಣದಲ್ಲಿರೋ ಅಂಗಡಿಗಳು ಸೇರಿದಂತೆ ಇತರೆ ಅಂಗಡಿಗಳನ್ನು ಪೋಲಿಸರು ಬಂದ್ ಮಾಡಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮಾರ್ಗಕ್ಕೆ ಸಂಪರ್ಕಿಸುವ ಇತರ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅಂಗಡಿಗಳನ್ನು ಬಂದ್ ಮಾಡಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಾರುಕಟ್ಟೆ ಸುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಬಸವರಾಜ್ ಬೊಮ್ಮಾಯಿ ಟ್ವೀಟ್!
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟ್ವೀಟ್ ಕೂಡ ಮಾಡಿದ್ದಾರೆ. "ಭಾರತ ರತ್ನ, ಮಾಜಿ ಪ್ರಧಾನಿ, ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿಯ ದಿನದಂದು ಗೌರವ ನಮನಗಳು" ಎಂದು ಸಿಎಂ ಹೇಳಿದ್ದಾರೆ.
ಅವರು ಮಾಡಿದ ಸೇವೆಯಿಂದ ನಮಗೆ ಸ್ಫೂರ್ತಿ
ಇನ್ನು ಈ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದೂ "ಆದರಣೀಯ ಅಟಲ್ ಜೀ ಕೋ ಉನಕಿ ಜಯಂತಿ ಪರ ಕೋಟಿ-ಕೋಟಿ ನಮನ್" ಎಂದು ಬರೆದಿದ್ದಾರೆ. "ಅಟಲ್ ಜಿ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ದೇಶಕ್ಕೆ ಅವರು ಮಾಡಿದ ಸೇವೆಯಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಭಾರತವನ್ನು ಬಲಿಷ್ಠ ಮತ್ತು ಅಭಿವೃದ್ಧಿಗೊಳಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು.
ಅವರ ಅಭಿವೃದ್ಧಿ ಉಪಕ್ರಮಗಳು ಲಕ್ಷಾಂತರ ಭಾರತೀಯರ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರಿದವು." ಎಂದು ಪ್ರಧಾನಿ ಹೇಳಿದ್ದಾರೆ
ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ: ನಟ ಚೇತನ್
ಶಾಲಾ ಮಕ್ಕಳಿಗೆ ಮೊಟ್ಟೆ(Eggs) ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧಿಸುವ ಸ್ವಾಮೀಜಿಗಳು ಬಸವತತ್ವದವರು ಅಲ್ಲ. ಕೆಲ ಸ್ವಾಮೀಜಿಗಳು(Swamjis) ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ ಅಂತ ಸ್ಯಾಂಡಲ್‌ವುಡ್ ನಟ ಚೇತನ್(Chetan Kumar) ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಮೊಟ್ಟೆ ತಿನ್ನುವವರ ಶಾಲೆ, ಮಟನ್(Mutton) ತಿನ್ನುವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ(Schools) ಭಾಗ ಮಾಡುವುದೇ ಸ್ವಾಮೀಜಿಗಳ ಉದ್ದೇಶವೇ?. ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳು ಇದ್ರು, ಇದನ್ನ ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡಿ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಅಂತ ತಿಳಿಸಿದ್ದಾರೆ.
ಗಂಜಿ ಆಸೆಗೆ ಹೇಳಿಕೆ ಕೊಡೋರನ್ನು ಬಂಧಿಸಿ : ನಟ ಚೇತನ್ ವಿರುದ್ಧ ಸಚಿವ ಹೆಬ್ಬಾರ್ ಕಿಡಿ
ದೇವದಾಸಿಗಳು ಅಸ್ಪೃಶ್ಯರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದನ್ನ ನೋಡುವಷ್ಟು ತಾಳ್ಮೆ ರಾಜಕಾರಣಿಗಳಿಗೆ(Politicians) ಇಲ್ಲ. ಬಸವರಾಜ ಬೊಮ್ಮಾಯಿ(Basavaraj Bommai) ಒಬ್ಬ ಕೋಮುವಾದಿ(Communalist Chief Minister) ಸಿಎಂ ಆಗಿದ್ದಾರೆ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಗಳು ಇರಲಿಲ್ಲ, ಎಲ್ಲರಿಗಿಂತ ಇವರು ಹೆಚ್ಚಿದ್ದಾರೆ. ಅವರ ತಂದೆ(ಎಸ್.ಆರ್. ಬೊಮ್ಮಾಯಿ) ಒಳ್ಳೆಯ ಪ್ರಗತಿಪರ ಮುಖ್ಯಮಂತ್ರಿ ಆಗಿದ್ದರು ಅಂತ ಹೇಳಿದ್ದಾರೆ.
ಇದನ್ನೂ ಓದಿ:
1) KSRTC Service : ಖಾಸಗೀಕರಣ ಇಲ್ಲ, ಲಾಭ-ನಷ್ಟಪ್ರಶ್ನೆಯಿಲ್ಲ: ಕೋಟ
2) Belagavi Session: ಬೆಳಗಾವಿ ಅಧಿವೇಶನ ತೆರೆ, ಮುಂದಿನ ಅಧಿವೇಶನದ ಬಗ್ಗೆ ತಿಳಿಸಿದ ಬೊಮ್ಮಾಯಿ