ಬೆಂಗಳೂರು, (ಮೇ.08): ಬೆಡ್ ಬುಕಿಂಗ್ ಹಗರಣದಲ್ಲಿ ಬಿಜೆಪಿ ನಾಯಕರೇ ಕಿಂಗ್ ಪಿನ್ ಗಳು. ಬಳಿಕ ನಾಟಕ ಮಾಡುವವರು ಸಹ ಅವರೇ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಕಪಟ ನಾಟಕ ಸೂತ್ರದಾರ. ಅಲ್ಲಿ ಇರುವವರನನ್ನು ಖಾಲಿ ಮಾಡಿಸಬೇಕು. ತಮ್ಮ ಬೆಂಬಲಿಗರನ್ನು ಅಲ್ಲಿ ತಂದು ಕೂರಿಸಬೇಕೆಂದು ಈ ರೀತಿ ಮಾಡಿದ್ದಾರೆ. ಪುಡಿ ರೌಡಿಗಳ ರೀತಿ ಇವರ ಬೆಂಬಲಿಗರು ವಿಡಿಯೋ ಮಾಡಿದ್ದಾರೆ ಎಂದು ಕಿಡಿಕಾರಿದರು.

ಐಎಎಸ್  ಅಧಿಕಾರಿ ಮೇಲೆ ಹಲ್ಲೆಗೆ ಮುಂದಾದವರ ಮೇಲೆ ಎಫ್‌ಐಆರ್ ದಾಖಲಿಸಿ

ತೇಜಸ್ವಿ ಸೂರ್ಯ ಮತ್ತೆ ಅಲ್ಲಿಗೆ ಹೋಗಿ ವಿಡಿಯೋ ಆಫ್ ಮಾಡಿ ಕ್ಷಮಾಪಣೆ ಕೇಳಿದ್ದಾರೆ. ಇವರು ಸಂಸದರಾಗುವುದಕ್ಕೆ ನಾಲಾಯಕ್, ಇವರೆಲ್ಲರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರೌಡಿ ಶಾಸಕರು ಮತ್ತು ಪುಡಿ ರೌಡಿಗಳ ಕಾರ್ಯಕರ್ತರಿಂದ ಈ ಘಟನೆ ನಡೆದಿದೆ. ಐಎಎಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿಗಳು ಐಎಎಸ್ ಅಧಿಕಾರಿಗಳಿಗೆ ರಕ್ಷಣೆ ಕೊಡಬೇಕು. ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು. ಬಿಜೆಪಿ ನಾಯಕರು ಮಾಡಿದ ಕೆಲಸ ಪ್ರತಿಯೊಬ್ಬ ರಾಜಕಾರಣಿಗೂ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.