ಭಯೋತ್ಪಾದಕರನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕಾರಣ: ಸಿ.ಟಿ.ರವಿ

ರಾಮಭಕ್ತರನ್ನ ತಪ್ಪಿತಸ್ಥರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಪು ಕೊಟ್ಟಿದ್ದಾರೆ. ಹಾಗಾದರೆ ಕೆಜೆ ಹಳ್ಳಿ, ಡಿಜೆಹಳ್ಳಿಯಲ್ಲಿ ಬೆಂಕಿ ಹಾಕಿದ್ದವರು, ಕುಕ್ಕರ್ ಬಾಂಬ್ ಇಟ್ಟವನು, ಮೈಸೂರಿನಲ್ಲಿ ಗಲಭೆ ಎಬ್ಬಿಸಿದವರ ಕೇಸು ಹಿಂದಕ್ಕೆ ಪಡೆದರಲ್ಲ ಅವರೆಲ್ಲಾ ತಪ್ಪಿತಸ್ಥರು ಎಂದು ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದ ಮಾಜಿ ಶಾಸಕ ಸಿ.ಟಿ.ರವಿ

BJP Leaders CT Ravi slams Congress grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.03):  ಗೋದ್ರಾ ಮಾದರಿ ಘಟನೆ ಮತ್ತೆ ಸಂಭವಿಸಬಹುದು ಎನ್ನುವ ಪ್ರಾಥಮಿಕ ಮಾಹಿತಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರಿಗೆ ಸಿಕ್ಕಿರಬಹುದು. ಈ ಹಿನ್ನೆಲೆಯಲ್ಲಿ ಅವರನ್ನು ತನಿಖೆಗೊಳಪಡಿಸಿ ಮಾಹಿತಿ ಆಧರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.  ಇಂದು(ಬುಧವಾರ) ಜಿಲ್ಲೆಯ ಕಡೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡಿದ ಸಿ.ಟಿ.ರವಿ ಅವರು, ಬಿ.ಕೆ.ಹರಿಪ್ರಸಾರ್ ಹೇಳಿಕೆಗೆ ಕಿಡಿಕಾರಿದ ಅವರು ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. 

ದೇ ಆರ್ ಆಲ್ ಅವರ್ ಬ್ರದರ್ಸ್ ರಿಂದ ಮಾಹಿತಿ :  

ಕಾಂಗ್ರೆಸ್ ಪಕ್ಷ ದೇ ಆರ್ ಆಲ್ ಅವರ್ ಬ್ರದರ್ಸ್ ಎಂದು ಯಾರನ್ನು ಕರೆದಿತ್ತೋ ಅದೇ ಸಮುದಾಯಕ್ಕೆ ಸೇರಿದವರು ಗೋದ್ರಾದಲ್ಲಿ ರಾಮಭಕ್ತರಿದ್ದ ರೈಲಿಗೆ ಬೆಂಕಿ ಹಚ್ಚಿದ್ದರು. ಅವರು ಹರಿಪ್ರಸಾದ್‌ಗೂ ಹತ್ತಿರ ಇರುವುದರಿಂದ ಅವರಿಗೆ ಇಂತಹ ಘಟನೆ ಮತ್ತೆ ನಡೆಯುವ ಬಗ್ಗೆ ಪ್ರಥಮ ಮಾಹಿತಿ ಸಿಕ್ಕಿರಬಹುದು ಎಂದರು.

ಚಿಕ್ಕಮಗಳೂರು: ಹೊಸ ವರ್ಷಕ್ಕೆ ಕಂಠಪೂರ್ತಿ ಕುಡಿದು ರಾಗಿಮುದ್ದೆ ಉಂಡೋರು, ಶಿವನ ಪಾದ ಸೇರಿದ್ರು!

ಭಯೋತ್ಪಾದಕರನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕಾರಣ : 

ಕಾಂಗ್ರೆಸ್ ಯಾವಾಗಲೂ ಭಯೋತ್ಪಾದಕರನ್ನು ಮುಂದಿಟ್ಟುಕೊಂಡು, ಬೆಂಬಲಿಸಿ ರಾಜಕಾರಣ ಮಾಡಿದೆ. ಹಾಗಾಗಿ ಈ ವಿಚಾರದಲ್ಲೂ ಅವರಿಗೆ ಮಾಹಿತಿ ಇದ್ದರೂ ಇರಬಹುದು. ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು. ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ ಎಂದರು.1948 ರಲ್ಲೇ ರಾಮ ಮಂದಿರ ನಿರ್ಮಾಣ ಮಾಡಲು ಕಾಂಗ್ರೆಸ್‌ಗೆ ಅವಕಾಶವಿತ್ತು. ಅವರು ಮಾಡಲಿಲ್ಲ. ನಾವು ನಾವು ಹೋರಾಟ ಮಾಡಿದಾಗಲೂ ನಮ್ಮ ಜೊತೆ ನಿಂತಿದ್ದರೆ ಕರಸೇವೆ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲೆಲ್ಲಾ ಅಡ್ಡಗಾಲು ಹಾಕುತ್ತ ಬಂದಿತ್ತು. ಮಂದಿರವಲ್ಲೇ ಕಟ್ಟುತ್ತೇವೆ ಎನ್ನುತ್ತಿದ್ದಿರಿ, ಯಾವಾಗ ಕಟ್ಟುತ್ತೀರಿ ಎಂದು ಕಾಂಗ್ರೆಸ್ಸಿಗರು ನಮ್ಮನ್ನು ಲೇವಡಿ ಮಾಡುತ್ತಿದ್ದರು. ಈಗ ಮಂದಿರ ನಿರ್ಮಾಣ ಆಗುತ್ತಿದೆ. ಈಗ ಅವರಿಗೆ ತಾನೂ ಮಾಡಲಿಲ್ಲ. ಮಾಡುವವರನ್ನು ನೋಡಿ ಸಹಿಸಿಕೊಳ್ಳಲೂ ಆಗುತ್ತಿಲ್ಲ ಎನ್ನುವ ಸ್ಥಿತಿ ಬಂದಿದೆ ಎಂದರು.

ಚಿಕ್ಕಮಗಳೂರು: ಗ್ರಾಮದೊಳಗೆ ಬಂದ ದಲಿತ ಯುವಕನ ಮೇಲೆ ಹಲ್ಲೆ, ಡಿಎಸ್‌ಎಸ್ ಪ್ರತಿಭಟನೆ

ಪ್ರಾಯಶ್ಚಿತ್ತ ಅನುಭವಿಸಲೇ ಬೇಕು : 

ರಾಮಭಕ್ತರನ್ನ ತಪ್ಪಿತಸ್ಥರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಪು ಕೊಟ್ಟಿದ್ದಾರೆ. ಹಾಗಾದರೆ ಕೆಜೆ ಹಳ್ಳಿ, ಡಿಜೆಹಳ್ಳಿಯಲ್ಲಿ ಬೆಂಕಿ ಹಾಕಿದ್ದವರು, ಕುಕ್ಕರ್ ಬಾಂಬ್ ಇಟ್ಟವನು, ಮೈಸೂರಿನಲ್ಲಿ ಗಲಭೆ ಎಬ್ಬಿಸಿದವರ ಕೇಸು ಹಿಂದಕ್ಕೆ ಪಡೆದರಲ್ಲ ಅವರೆಲ್ಲಾ ತಪ್ಪಿತಸ್ಥರು ಎಂದು ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದರು. ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ 2000ಕ್ಕೂ ಹೆಚ್ಚು ಎಸ್‌ಡಿಪಿಐ, ಪಿಎಫ್‌ಐಗೆ ಸೇರಿದವರ ನೂರಾರು ಮೊಕದ್ದಮೆ ಹಿಂದಕ್ಕೆ ಪಡೆದಾಗ ಅವರು ತಪ್ಪು ಮಾಡಿದವರು ಎಂದು ಅನ್ನಿಸಲಿಲ್ಲವೇ? ಅವರ ಮೇಲಿನ ಕೇಸು ಹಿಂದಕ್ಕೆ ಪಡೆಯುವುದು ಅಪರಾಧ ಆಗುತ್ತದೆ ಎಂದು ಅನಿಸಲಿಲ್ಲವೇ ಎಂದರು.ಅಯೋಧ್ಯೆ ರಾಮಭಕ್ತರನ್ನು ಮಾತ್ರ ಗುರಿ ಮಾಡುತ್ತಿದ್ದೀರಿ. ಪಾಪದ ಕೊಡ ತುಂಬಿದ ಮೇಲೆ ಅವರು ಪ್ರಾಯಶ್ಚಿತ್ತ ಅನುಭವಿಸಲೇ ಬೇಕಾಗುತ್ತದೆ ಎಂದರು. 

ಮೋದಿ, ಅಮಿತ್‌ ಶಾ ಅವರಿಗೆ ಯಾವ ಧರ್ಮದವರು ಎನ್ನುವುದೇ ಗೊತ್ತಿಲ್ಲ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ರವಿ, ನಾವು ಸನಾತನ ಧರ್ಮಕ್ಕೆ ಸೇರಿದವರು, ಹಿಂದೂ ಎನ್ನುವುದರಲ್ಲಿ ಗೊಂದಲಗಳೇ ಇಲ್ಲ. ಗೊಂದಲ ಇರುವುದು ಅವರಿಗೆ ಈ ಕಾರಣಕ್ಕೆ ದೇವಸ್ಥಾನಕ್ಕೆ ಹೋಗಲು, ಕುಂಕುಮ ಇಡಲು, ಕೇಸರಿ ಶಾಲು ಹಾಕಲು ಹಿಂದೆ ಮುಂದೆ ನೋಡುತ್ತಾರೆ ಎಂದು ಟೀಕಿಸಿದರು.

Latest Videos
Follow Us:
Download App:
  • android
  • ios